37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಕಳೆಂಜ ನಡುಜಾರು ಸ.ಕಿ.ಪ್ರಾ. ಶಾಲೆಯಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ

ಕಳೆಂಜ: ಇಲ್ಲಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ನಡುಜಾರು ಮತ್ತು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಿರಿಯ ವಿದ್ಯಾರ್ಥಿ ಸಂಘ ಇವರ ಸಹಭಾಗಿತ್ವದಲ್ಲಿ ನ್ಯೂ ವಿಷನ್ ಜನರೇಷನ್ ಕಾರ್ಯಕ್ರಮ ಕಾರ್ಯಕ್ರಮದಡಿಯಲ್ಲಿ 2.5 NVG eyeMiTRA ಸುರತ್ಕಲ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ) ಇವರ ಜಂಟಿ ಆಶ್ರಯದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರವು ನ.8 ರಂದು ನಡುಜಾರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಶಿಬಿರವನ್ನು ನಡುಜಾರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಎಸ್.ಡಿ.ಎಮ್.ಸಿ ಅಧ್ಯಕ್ಷ ಹರೀಶ್ ಕೆ.ಬಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರು, ಎಸ್.ಡಿ.ಎಮ್.ಸಿ ಸದಸ್ಯರು, ಶಾಲಾ ಶಿಕ್ಷಕರು, ಊರಿನ ನಾಗರಿಕರು, ಶಾಲಾ ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆ ಹಾಗೂ ಪುಟಾಣಿಗಳು ಉಪಸ್ಥಿತರಿದ್ದರು.

ಶಿಬಿರದಲ್ಲಿ ಕಂಪ್ಯೂಟರೀಕೃತ ಕಣ್ಣಿನ ಉಚಿತ ತಪಾಸಣೆ, 5ರಿಂದ 15 ವಯಸ್ಸಿನವರೆಗೆ ಕಣ್ಣಿನ ತೊಂದರೆ ಇರುವ ಮಕ್ಕಳಿಗೆ ಶಿಬಿರದ ಪ್ರಯುಕ್ತ ಉಚಿತವಾಗಿ ಕನ್ನಡಕ ವಿತರಣೆ, ಶಿಬಿರದಲ್ಲಿ ಸಮೀಪ ದೃಷ್ಟಿ (Near Vision) ತೊಂದರೆಯವರಿಗೆ ಉಚಿತ ಕನ್ನಡಕ ವಿತರಣೆ, 15 ವಯಸ್ಸಿಗಿಂತ ಮೇಲ್ಪಟ್ಟು ದೂರದೃಷ್ಟಿ ಮತ್ತು ಸಮೀಪ ದೃಷ್ಟಿ ತೊಂದರೆ ಇರುವ ಅಗತ್ಯವುಳ್ಳವರಿಗೆ ಕನ್ನಡಕ ರಿಯಾಯಿತಿ ದರದಲ್ಲಿ ವಿತರಣೆ ಹಾಗೂ ಶಿಬಿರದಲ್ಲಿ ಅಗತ್ಯವುಳ್ಳವರಿಗೆ ಕಣ್ಣಿನ ಪೊರೆ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಲಾಯಿತು.

Related posts

ಗರ್ಡಾಡಿ ಶಕ್ತಿ ಕೇಂದ್ರದಲ್ಲಿ ಮೂರನೇ ಸುತ್ತಿನ ಬಿರುಸಿನ ಮತಯಾಚನೆ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ : ಏಳನೇ ಸುತ್ತಿನಲ್ಲಿ 6875 ಮತಗಳ ಮೂಲಕ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮುನ್ನಡೆ

Suddi Udaya

ಬಳ್ಳಮಂಜ ನೊರೋಳ್ ಪಲ್ಕೆ ನಿವಾಸಿ ಬಾಬು ಮಲೆಕುಡಿಯ ನಿಧನ

Suddi Udaya

ಉಜಿರೆ : ನೇಹಾ ಹೀರೆಮಠ ಹತ್ಯೆಯನ್ನು ಖಂಡಿಸಿ ಎಬಿವಿಪಿ ಬೆಳ್ತಂಗಡಿ ಘಟಕದಿಂದ ಕಪ್ಪುಪಟ್ಟಿ ಪ್ರದರ್ಶಿಸಿ, ರಸ್ತೆ ತಡೆದು ಪ್ರತಿಭಟನೆ

Suddi Udaya

ಉಜಿರೆ: ಪೇಂಟಿಂಗ್ ಮಾಡುವಾಗ ಬಿದ್ದು ಗಾಯಗೊಂಡಿದ್ದ ಪ್ರಮೋದ್ ಗೌಡ ಚಿಕಿತ್ಸೆ ಫಲಕಾರಿಯಾಗದೆ ನಿಧನ

Suddi Udaya

ಶಕ್ತಿ ಯೋಜನೆಯ ಯಶಸ್ವಿಗಾಗಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಸಂಭ್ರಮಾಚರಣೆ

Suddi Udaya
error: Content is protected !!