April 2, 2025
Uncategorized

ಕಿಲ್ಲೂರಿನಲ್ಲಿ ರಾಸಾಯನಿಕ ಇಂದ್ರಜಾಲ ವಿಶೇಷ ಕಾರ್ಯಕ್ರಮ

ಮಿತ್ತಬಾಗಿಲು : ಇಲ್ಲಿಯ ಕಿಲ್ಲೂರಿನ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಉಜಿರೆಯ ಶ್ರೀ ಧ.ಮಂ ಸ್ವಾಯತ್ತ ಕಾಲೇಜಿನ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದ ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನವೀನಕುಮಾರ್ ಜೈನ್ ಹಾಗೂ ವಿದ್ಯಾರ್ಥಿಗಳಾದ ಖುಷಿ ಗೌಡ , ಸೋನಾಕ್ಷಿ , ಸೀಮಾ ಹಾಗೂ ಕಾವ್ಯಾ ಅವರಿಂದ ರಸಾಯನ ಶಾಸ್ತ್ರದಲ್ಲಿ ಇಂದ್ರಜಾಲ ಎನ್ನುವ ವಿಶೇಷ ಕಾರ್ಯಕ್ರಮ ಜರುಗಿತು.

ಅವಿನಾಶ್ ಕಾಜೂರು ಅವರು ಭಿತ್ತಿಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಹಳೆ ವಿದ್ಯಾರ್ಥಿನಿ ಸಂಘದ ಅಧ್ಯಕ್ಷೆ ಜಯಶ್ರೀ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ರಜಿಯಾ ಉಪಸ್ಥಿತರಿದ್ದರು.


ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಹಾಗೂ ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ಗೌರವಿಸಿದರು.
ಧನುಶ್ರೀ ಸ್ವಾಗತಿಸಿ , ಪಲ್ಲವಿ ವಂದಿಸಿದರು. ಶ್ರೇಯಾ ನಿರೂಪಿಸಿದರು.

Related posts

ಹಿಂದೂ ಕಾಯ೯ಕತ೯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಬೆಳ್ತಂಗಡಿಯ ನೌಷದ್ ಪತ್ತೆಗೆ ಎನ್.ಐ.ಎ ರೂ. 2 ಲಕ್ಷ ಬಹುಮಾನ ಘೋಷಣೆ

Suddi Udaya

ಕೊಕ್ಕಡ ವಲಯದ ಭಜನಾ ಪರಿಷತ್ ಸಭೆ

Suddi Udaya

ಧರ್ಮಸ್ಥಳದ ಮುಖ್ಯದ್ವಾರದ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

Suddi Udaya

ಶಿಶಿಲ ಕಪಿಲ ನದಿಯಲ್ಲಿ ಒಮ್ಮೆಲೇ ಉಕ್ಕಿ ಹರಿದು ಬಂದ ಪ್ರವಾಹ: ಕಿಂಡಿಅಣೆಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡ ಮರಗಳ ತೆರವು ಕಾರ್ಯ

Suddi Udaya

ಪಟ್ರಮೆ: ಬಲ್ಲಿದಡ್ಡ ನಿವಾಸಿ ಸುರೇಶ್ ಗೌಡ ಆತ್ಮಹತ್ಯೆ ಶಂಕೆ

Suddi Udaya

ಇಂದಬೆಟ್ಟು: ಕಲ್ಲಾಜೆ ಶಾಲೆಯ ಶಿಕ್ಷಕಿ ಅಪ್ಪಿ ಪೂಜಾರ್ತಿ ಯಾನೆ ಆಶಾಲತಾ ನಿಧನ

Suddi Udaya
error: Content is protected !!