24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಂಗಳೂರು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಮಾರ್ಟ್ ಸಿಟಿಯಿಂದ ಆದ ಹೊಸ ಶಸ್ತ್ರಚಿಕಿತ್ಸಾ ಕೊಠಡಿ ಪ್ರಾರಂಭ

ಮಂಗಳೂರು: ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇಲ್ಲಿಯ ಸ್ಮಾರ್ಟ್ ಸಿಟಿಯಿಂದ ಆದ ಹೊಸ ಶಸ್ತ್ರಚಿಕಿತ್ಸಾ ಕಟ್ಟಡ ಆ.15 ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳಿಂದ ಉದ್ಘಾಟನೆಗೊಂಡಿತ್ತು. ಸೆ.02 ರಂದು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಹಾಗೂ ಸೆ.11 ರಂದು ಕ್ಷ ಕಿರಣ ವಿಭಾಗ ಪ್ರಾರಂಭವಾಗಿತ್ತು. ಸೆ.18 ರಂದು ತುರ್ತು ಚಿಕಿತ್ಸಾ ವಿಭಾಗ ಹೊಸ ಕಟ್ಟಡದಲ್ಲಿ ಪ್ರಾರಂಭಿಸಲಾಯಿತು. ನ.07 ರಂದು ಜಿಲ್ಲಾಧಿಕಾರಿಗಳ ನಿರ್ದೇಶನ ಹಾಗೂ ಮಾರ್ಗದರ್ಶನದಂತೆ ಹೊಸ ಕಟ್ಟಡದಲ್ಲಿ ಶಸ್ತ್ರ ಚಿಕಿತ್ಸಾ ಕೊಠಡಿ ಪ್ರಾರಂಭಿಸಲಾಗಿದೆ ಹಾಗೂ ಮೊದಲನೇ ದಿನವೇ 7 ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಡಾ ಸದಾನಂದ ಪೂಜಾರಿ ಹಾಗೂ ಆಸ್ಪತ್ರೆ ಸಿಬ್ಬಂದಿ ತಂಡ ಕಾರ್ಯಾರಂಭಕ್ಕೆ ಸಹಕಾರ ಮಾಡಿದ್ದಾರೆ. ಮೊದಲ ದಿನವೇ ಡಾ| ಸುರೇಶ ಪೈ ತಂಡದವರಿಂದ ಥೋರಾಸಿಕ್ ಸರ್ಜರಿ ಮಾಡಲಾಯಿತು. ಡಾ| ಹೇಮಲತಾ ಹಾಗೂ ಡಾ| ವಿಶ್ವ ವಿಜೇತ ತಂಡವು 5 ಮೂಗಿನ ಶಸ್ತ್ರಚಿಕಿತ್ಸೆ ಮಾಡಿದರು. ಡಾ| ಅರ್ಜುನ್ ಶೆಟ್ಟಿ ತಂಡವು ಮೆದುಳಲ್ಲಿ ರಕ್ತ ಹೆಪ್ಪು ಗಟ್ಟಿದ ರೋಗಿಗೆ ತುರ್ತು ಶಸ್ತ್ರ ಚಿಕಿತ್ಸೆ ಮಾಡಿದರು. ಡಾ ಸುರೇಶ ಭಟ್ ಅರವಳಿಕೆ ತಂಡದ ಮುಖ್ಯಸ್ಥರಾಗಿದ್ದು ಎಲ್ಲಾ ಶಸ್ತ್ರ ಚಿಕಿತ್ಸೆ ಯಾವುದೇ ತೊಂದರೆ ಆಗದ ಹಾಗೆ ನೆರವೇರಿಸಿದರು. ನರ್ಸಿಂಗ್ ಅಧಿಕಾರಿಗಳಾದ ವಿ.ಎಮ್ ಶೈಲಾ, ಜೆಸಿಂತ, ಅಶ್ವಿನಿ, ರೇಷ್ಮಾ, ಅಲ್ವಿನ್ ಮೆನೇಜ್ಸ್ ಇದ್ದರು.

OT ಟೆಕ್ನಿಷಿಯನ್ ಆದ ಧನುಷ್, ಶ್ರದ್ದಾ, ಹೇಮಾಶ್ರೀ, ಅರ್ಪಿತಾ, ಪ್ರದೀಪ್ ಹಾಗೂ ಡಿ ಗ್ರೂಪ್ ನೌಕರರಾದ ಜಯಪ್ರಕಾಶ್ ಮತ್ತು ಹರೀಶ್ ಉಪಸ್ಥಿತರಿದ್ದರು.


ಡಿ.01 ರಂದು ಶಸ್ತ್ರ ಚಿಕಿತ್ಸಾ ಹಾಗೂ ಮೂಳೆ ವಿಭಾಗದ ಶಸ್ತ್ರ ಚಿಕಿತ್ಸಾ ಕೊಠಡಿ ಪ್ರಾರಂಭವಾಗಲಿದ್ದು ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.


ವೆನ್ಲಾಕ್ ಆಸ್ಪತ್ರೆಯ ಆರ್ ಎಮ್ ಓ ಡಾ. ಸುಧಾಕರ್ ಹಾಗೂ ಕೆಎಂಸಿ ವೈದ್ಯರು, ಕಛೇರಿ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು, ನರ್ಸಿಂಗ್ ವಿಭಾಗದ ಅದೀಕ್ಷಕರು , ಫಾರ್ಮಸಿ , ಕ್ಷ ಕಿರಣ, ವಾಹನ ಚಾಲಕರು, ಸಂಬಂಧ ಪಟ್ಟ ಎಲ್ಲಾ ವಿಭಾಗದವರು, ಡಿ ಗ್ರೂಪ್ ನೌಕರರು ಮತ್ತು ಹೌಸ್ ಕೀಪಿಂಗ್ ವಿಭಾಗದವರು ಹೊಸ ಕಟ್ಟಡದ ಕಾರ್ಯರಂಭಕ್ಕೆ ಕಾರಣಕರ್ತರಾಗಿದ್ದಾರೆ.


ಈ ಕಾರ್ಯದಲ್ಲಿ ಜಿಲ್ಲಾಡಳಿತ, ಎಲ್ಲಾ ಜನಪ್ರತಿನಿಧಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು ದಕ್ಷಿಣ ಕನ್ನಡ, ಆರೋಗ್ಯ ರಕ್ಷಾ ಸಮಿತಿ ಸದಸ್ಯರು ವೆನ್ಲಾಕ್ ಆಸ್ಪತ್ರೆ ಅವರುಗಳ ಸಹಕಾರ ಬಹು ಮುಖ್ಯವಾಗಿದೆ. ರಕ್ಷಾ ಸಮಿತಿ ಸದಸ್ಯರಾದ ಅನಿಲ್, ಸಲೀಂ ಹಾಗೂ ಶಶಿಧರ್ ಅವರುಗಳು ಹೊಸ ಕಟ್ಟಡಕ್ಕೆ ಸ್ವಂತ ಹಣದಿಂದ ಹಾಗೂ ಧಾನಿಗಳ ನೆರವಿನಿಂದ ಕುಡಿಯುವ ನೀರಿನ ಫಿಲ್ಟರ್ ವ್ಯವಸ್ಥೆ ಮಾಡಿರುತ್ತಾರೆ.
ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವೆನ್ಲಾಕ್ ಆಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ ಶಸ್ತ್ರ ಚಿಕಿತ್ಸ ಕೊಠಡಿಗಳು ಹಾಗೂ ವಾರ್ಡ್ ಗಳು ಈ ಭಾಗದ ಬಡವರಿಗೆ ವರದಾನ ಆಗಲಿದೆ ಎಂದು ಆಸ್ಪತ್ರೆಯ ಅಧೀಕ್ಷಕರಾದ ಡಾ.ಶಿವಪ್ರಕಾಶ್ ಮಾಹಿತಿ ನೀಡಿದರು.

Related posts

ಸೆ.25 -ಅ.8: ನಾವೂರುನಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರ

Suddi Udaya

ಬೆಳ್ತಂಗಡಿ : ಎ.3 ರಂದು ಬಿ.ಎಸ್.ಪಿ ಯ ಅಭ್ಯರ್ಥಿ ಕಾಂತಪ್ಪ ಅಲಂಗಾರ್ ನಾಮಪತ್ರ ಸಲ್ಲಿಕೆ

Suddi Udaya

ಮಾಜಿ ಶಾಸಕ ಕೆ.ವಸಂತ ಬಂಗೇರರ ನಿಧನಕ್ಕೆ ವಿಧಾನಪರಿಷತ್ ಸದಸ್ಯ ಕೆ. ಪ್ರತಾಪ ಸಿಂಹ ನಾಯಕ್ ರವರಿಂದ ಸಂತಾಪ

Suddi Udaya

ಕಕ್ಕಿಂಜೆ: ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ವಲಯ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಮೆರವಣಿಗೆ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಿತ್ ಶಿವರಾಮ್ ನಾಮಪತ್ರ ಸಲ್ಲಿಕೆ

Suddi Udaya

ಜನಜಾಗೃತಿ ವೇದಿಕೆಯ ಪದಾಧಿಕಾರಿಗಳಿಂದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಬೇಟಿ

Suddi Udaya
error: Content is protected !!