ಸುಲ್ಕೇರಿ: ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ವತಿಯಿಂದ ಕಸ್ತೂರಿ ರಂಗನ್ ವರದಿ ವಿರೋಧಿಸಿ ಸುಲ್ಕೇರಿ ಗ್ರಾ.ಪಂ ಆವರಣದಲ್ಲಿ ನ.8 ರಂದು ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಶಿರಾಡಿ, ಸುಲ್ಕೇರಿ ಗ್ರಾ. ಪಂಚಾಯತ್ ಅಧ್ಯಕ್ಷೆ ಗಿರಿಜಾ, ಮಲೆನಾಡು ಹಿತರಕ್ಷಣಾ ವೇದಿಕೆಯ ಜನ ಸಂಪರ್ಕ ಸಮಿತಿ ಸದಸ್ಯ ಕರುಣಾಕರ ಶಿಶಿಲ ಹಾಗೂ ಸಮಿತಿ ಸದಸ್ಯರಾದ ನವೀನ್ ರೆಖ್ಯ ,ತಾಲೂಕು ಸಂಚಾಲಕ ಸದಾನಂದ ಪೂಜಾರಿ ಉಂಗಿಲಬೈಲು, ಸುಲ್ಕೇರಿ ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಸದಾನಂದ ಗೌಡ, ಸುಲ್ಕೇರಿ ನಿಕಟಪೂರ್ವ ಅಧ್ಯಕ್ಷ ನಾರಾಯಣ ಪೂಜಾರಿ, ಗ್ರಾ.ಪಂ. ಸದಸ್ಯರಾದ ರವಿ ಪೂಜಾರಿ ಹಾರಡ್ದೆ, ಪ್ರೇಮಾ, ಗ್ರಾಮಸ್ಥರು ಉಪಸ್ಥಿತರಿದ್ದರು.
ನಂತರ ಪಂಚಾಯತ್ ಕಾರ್ಯದರ್ಶಿ ಕೊರಗಪ್ಪ ನಾಯ್ಕ ರವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.











