April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಬಳಂಜ ಶಾಲಾ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ತರಗತಿ ಉದ್ಘಾಟನೆ

ಬಳಂಜ: ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ (ರಿ), ಪುತ್ತೂರು, ಎಸ್ ಡಿ ಎಮ್ ಕಾಲೇಜ್ (Autonomous) ಮತ್ತು ಪಿಜಿ ಸೆಂಟರ್, ಡಿಪಾರ್ಟ್ಮೆಂಟ್ ಆಫ್ ಇಂಗ್ಲಿಷ್, ಉಜಿರೆ, ಬಳಂಜ ಶಿಕ್ಷಣ ಟ್ರಸ್ಟ್ (ರಿ) ಇವರ ನೇತೃತ್ವದಲ್ಲಿ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಮತ್ತು ಪ್ರೌಢಶಾಲೆ, ಬಳಂಜದ 6,7,8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಎರಡು ದಿನದ ಸ್ಪೋಕನ್ ಇಂಗ್ಲಿಷ್ ತರಗತಿಯನ್ನು ಪಿಜಿ ವಿದ್ಯಾರ್ಥಿಗಳು ನಡೆಸಲಿದ್ದು, ಇದರ ಉದ್ಘಾಟನೆಯನ್ನು ಎಸ್‌ಡಿಎಂ ಕಾಲೇಜ್ ಉಜಿರೆಯ , ಹೆಡ್ ಆಫ್ ಡಿಪಾರ್ಟ್ಮೆಂಟ್ ಆಫ್ ಇಂಗ್ಲಿಷ್ ಡಾ. ಮಂಜುಶ್ರೀ.ಆರ್ ನೆರವೇರಿಸಿದರು.

ವೇದಿಕೆಯಲ್ಲಿ ಬಳಂಜ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ ರತ್ನರಾಜ್ ಜೈನ್, ಟ್ರಸ್ಟಿ ಬಿ ಪ್ರಮೋದ್ ಕುಮಾರ್ , ಆಕಾಂಕ್ಷ ಟ್ರಸ್ಟ್ ನ ಸದಸ್ಯರು ಶ್ರೀಮತಿ ಕವಿತಾ ಎನ್, ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಲೋಚನ ಕೆ ಮತ್ತು ರೆನಿಲ್ಡಾ ಜೋಯ್ಸ್ ಮಥಾಯಸ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ಮಲ್ಲಿಕಾರ್ಜುನ.ಆರ್ ನಿರೂಪಿಸಿ, ಶಿಕ್ಷಕಿ ಶ್ರೀಮತಿ ಹೇಮಲತಾ ಸ್ವಾಗತಿಸಿ, ಪಿಜಿ ವಿದ್ಯಾರ್ಥಿನಿ ದೀಪಾ ರವರು ವಂದಿಸಿದರು.

Related posts

ಕರಾಟೆ ಸ್ಪರ್ಧೆ: ಗುರುವಾಯನಕೆರೆ ಸ.ಪ್ರೌ. ಶಾಲೆಯ ಮಹಮ್ಮದ್ ಶಹರಾನ್ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ತ್ರೋಬಾಲ್ ಪಂದ್ಯಾಟ: ಕೊಯ್ಯುರು ಸರಕಾರಿ ಪ್ರೌಢಶಾಲಾ ಬಾಲಕಿಯರ ತಂಡ ದ್ವಿತೀಯ ಸ್ಥಾನ

Suddi Udaya

ನಾಳ ಗೋಪಾಲಕೃಷ್ಣ ಕಾಮತ್ ನಿಧನ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯ ವಾರ್ಷಿಕ ಜಾತ್ರಾ ಮಹೋತ್ಸವ: ಬೆಳ್ತಂಗಡಿಯಲ್ಲಿ ಸಮಾಲೋಚನಾ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕಸ್ತೂರಿ ರಂಗನ್ ವರದಿ ವಿರೋಧಿಸಿ ನಾರಾವಿ ಗ್ರಾ.ಪಂ. ನಲ್ಲಿ ಪ್ರತಿಭಟನೆ

Suddi Udaya

ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರ ಪ್ರಮಾಣ ವಚನ: ಶಿರ್ಲಾಲು ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

Suddi Udaya
error: Content is protected !!