ಬೆಳ್ತಂಗಡಿ ತಾಲೂಕಿನಲ್ಲಿಯೇ ಪ್ರಪ್ರಥಮವಾಗಿ NABH ರಾಷ್ಟ್ರೀಯ ಮಾನ್ಯತೆ ಪಡೆದ ಉಜಿರೆಯ ಬೆನಕ ಹೆಲ್ತ್ ಸೆಂಟರ್ ನಲ್ಲಿ ಬಹುಜನರ ನಿರೀಕ್ಷೆಯನ್ನು ಪರಿಗಣಿಸಿ ನೂತನವಾಗಿ ಜರ್ಮನಿ ನಿರ್ಮಿತ ಅತ್ಯಂತ ನವೀನ ತಂತ್ರಜ್ಞಾನದಿಂದ ರಚಿಸಲ್ಪಟ್ಟ “ELISA 300” ಎಂಬ ಎರಡು ವೆಂಟಿಲೇಟರ್ ಗಳನ್ನು ಈ ದಿನ ದ.ಕ ಜಿಲ್ಲೆಯಲ್ಲಿ ಮನೆ ಮಾತಾಗಿರುವ ಕೆ. ಎಂ. ಸಿ ಆಸ್ಪತ್ರೆ, ಮಂಗಳೂರಿನ ಪ್ರಖ್ಯಾತ ಹೃದ್ರೋಗ ತಜ್ಞರಾದ ಡಾ.ಪದ್ಮನಾಭ ಕಾಮತ್ ರವರು ಉದ್ಘಾಟಿಸಿದರು.
ಡಾ. ಪದ್ಮನಾಭ ಕಾಮತ್ ಅವರು ಮಾತನಾಡುತ್ತಾ ಗ್ರಾಮೀಣ ಪ್ರದೇಶದಲ್ಲಿ ತಂತ್ರಜ್ಞಾನದ ಸೇವೆಯನ್ನು ಒದಗಿಸುತ್ತಿರುವುದು ಶ್ಲಾಘನೀಯ ಎಂದು ಅಭಿನಂದಿಸಿದರು. ಇದು ಕೇವಲ ಉಜಿರೆ, ಬೆಳ್ತಂಗಡಿ ತಾಲೂಕಿಗಲ್ಲದೆ ನೆರೆಯ ಚಿಕ್ಕಮಗಳೂರಿನ ಅನೇಕ ತಾಲೂಕುಗಳಿಗೆ ವರದಾನವಾಗಿಲಿದೆ.
ಡಾ.ಕಾಮತ್ ಮಾತನಾಡುತ್ತಾ ಈ ವಿಶೇಷ ಸೌಲಭ್ಯದೊಂದಿಗೆ ತುರ್ತು ಚಿಕಿತ್ಸಾ ವೈದ್ಯರಾದ ಡಾ. ಆದಿತ್ಯರಾವ್ ಅವರ ಸೇವೆಯು ಮಂಗಳೂರಿನಿಂದ 60 ಕಿಲೋಮೀಟರ್ ದೂರದಲ್ಲಿರುವ ಉಜಿರೆಯಲ್ಲಿ ಲಭ್ಯವಿರುವುದು, ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಬೆನಕ ಆಸ್ಪತ್ರೆಯ ಬದ್ಧತೆಯನ್ನು ತೋರಿಸುತ್ತದೆ ಎಂದರು .
ಡಾ. ಪದ್ಮನಾಭ ಕಾಮತ್ ರವರಿಗೆ ಡಾ. ಗೋಪಾಲಕೃಷ್ಣ ಮತ್ತು ಡಾ. ಭಾರತಿ ದಂಪತಿಗಳು ಹೂ ಗುಚ್ಛ ನೀಡಿ ಸ್ವಾಗತಿಸಿದರು . ಈ ಸಂದರ್ಭದಲ್ಲಿ ಡಾ.ಅಂಕಿತ ಜಿ. ಭಟ್ , ಡಾ.ಶಶಾಂಕ್ , ಹಾಗೂ ಡಾ. ಕಾಮತ್ ರವರ ಸಹಾಯಕರು ಮತ್ತು ಬೆನಕ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.