38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸೋಣಂದೂರು: ಸಬರಬೈಲು ಕುವ್ವತುಲ್ ಇಸ್ಲಾಮ್ ಯುವಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಸೋಣಂದೂರು : ಕುವ್ವತುಲ್‌ ಇಸ್ಲಾಮ್ ಯುವಕರ ಸಂಘ ಸಬರಬೈಲು ಇದರ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ನಡೆಯಿತು.

ಕಾರ್ಯಕ್ರಮವನ್ನು ಹಿರಿಯರಾದ ಮಹಮ್ಮದ್ ಸಾಗರ್ ಹಾಜಿಯವರು ದುವಾದೊಂದಿಗೆ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನೂರುಲ್ ಹುದಾ ಜುಮಾ‌ ಮಸೀದಿ ಮದ್ದಡ್ಕ ಇದರ ಪ್ರಧಾನ‌ ಕಾರ್ಯದರ್ಶಿಗಳಾದ ಸಿರಾಜ್ ಚಿಲಿಂಬಿಯವರು ಮಾತನಾಡಿ ಕುವ್ವತುಲ್‌ ಇಸ್ಲಾಮ್ ಯುವಕರ ಸಂಘ 1998 ರಿಂದ ನಡೆದು ಬಂದ ಬಗ್ಗೆ ಮತ್ತು ಅದರ ಕಾರ್ಯ ವೈಖರಿಯನ್ನು ತಿಳಿಸಿದರು.

ನೂತನ ಪದಾಧಿಕಾರಿಗಳಾಗಿ ಕೆ ಐ ವೈ ಎಸ್ ಇದರ ನೂತನ ಅಧ್ಯಕ್ಷರಾಗಿ ಅಶ್ರಫ್ ಕೆ ಎಸ್ ಆರ್ ಟಿ ಸಿ ಸಬರಬೈಲು, ಉಪಾಧ್ಯಕ್ಷರಾಗಿ ಶಕೀಲ್‌ ಸಬರಬೈಲು, ಕಾರ್ಯದರ್ಶಿಯಾಗಿ ಫಯಾಝ್ ಸಬರಬೈಲು, ಜೊತೆ ಕಾರ್ಯದರ್ಶಿಯಾಗಿ ನೌಶಾದ್ ಸಬರಬೈಲು, ಕೋಶಾಧಿಕಾರಿಯಾಗಿ ಶರೀಫ್ ಸಬರಬೈಲು ಇವರನ್ನು ಆಯ್ಕೆ ಮಾಡಲಾಯಿತು.

ಗೌರವ ಅಧ್ಯಕ್ಷರಾಗಿ ಮಹಮ್ಮದ್ ಸಾಗರ್ ಹಾಜಿ ಮತ್ತು ಸಲಹೆಗಾರರಾಗಿ ಸಲೀಮ್ ತಂಙಲ್ ಎo ಎ. ರಝಕ್ ಸಬರಬೈಲು, ಅಬ್ದುಲ್ಲಾ ಎಸ್ ಎ ಸಬರಬೈಲು, ರಮ್ಲನ್, ಇಲ್ಯಾಸ್ ಝಹೀರ್ ಬಿನ, ಇಬ್ರಾಹಿಮ್ ಕೆ ಎಸ್ ಬಿ, ಶಂಸುದ್ದೀನ್ ಭೂಲೋಕ, ರಿಯಾಝ್ ಎಚ್ ಎಚ್, ಸಮೀರ್ ಸಬರಬೈಲು ಇವರನ್ನು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆಮಾಡಲಾಯಿತು.


ನೌಶಾದ್ ಎo ಎo ಕಾರ್ಯಕ್ರಮ ನಿರೂಪಿಸಿದರು. ನಿಯಾಝ್ ಸ್ವಾಗತಿಸಿ, ಹನೀಫ್ ಧನ್ಯವಾದ ಮಾಡಿದರು.

Related posts

ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ತಂಡದವರಿಂದ ಎರಡು ಕುಟುಂಬಕ್ಕೆ ಸಹಾಯಹಸ್ತ

Suddi Udaya

ಉಜಿರೆ ಎಸ್ ಡಿ ಎಂ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಬಾಂಗ್ಲಾ ಹಿಂದು ಗಳಿಗಾಗಿರುವ ದೌರ್ಜನ್ಯದ ವಿರುದ್ಧ ಹಿಂದೂ ಹಿತ ರಕ್ಷಣಾ ಸಮಿತಿಯಿಂದ ಮಾನವ ಸರಪಳಿ ಮೂಲಕ ಪ್ರತಿಭಟನೆ

Suddi Udaya

ಉಜಿರೆ ಗ್ರಾ.ಪ. ವತಿಯಿಂದ ಸರಕಾರದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ

Suddi Udaya

ರೂ. 1.10 ಕೋಟಿ ವೆಚ್ಚದ ಕೂಕ್ರಬೆಟ್ಟು ಪ್ರಾಥಮಿಕ ಶಾಲಾ ನೂತನ ಕಟ್ಟಡದ ಲೋಕಾರ್ಪಣೆ: ಸರ್ಕಾರಿ ಶಾಲೆಗಳಿಗೆ ಕೊಠಡಿಗಳನ್ನು ನಿರ್ಮಿಸುವ ವಿವೇಕ ಯೋಜನೆಯನ್ನು ಜಾರಿಗೆ ತನ್ನಿ ರಾಜ್ಯ ಸರ್ಕಾರಕ್ಕೆ ಶಾಸಕ ಹರೀಶ್ ಪೂಂಜ ಆಗ್ರಹ

Suddi Udaya

ಬೆಂಗಳೂರಿನಲ್ಲಿ ಗುರುವಾಯನಕೆರೆ ಜ್ಯೋತಿಷಿ ಬಿ.ಕೆ. ಸುಬಾಷ್ ಚಂದ್ರ ಜೈನ್ ರವರ “ಶ್ರೀ ಸ್ವಸ್ತಿಕ ಜ್ಯೋತಿಷ್ಯಾಲಯ” ಶಾಖೆ ಶುಭಾರಂಭ

Suddi Udaya
error: Content is protected !!