ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಧರ್ಮಸ್ಥಳ ಲಕ್ಷ ದೀಪೋತ್ಸವದ ಪ್ರಯುಕ್ತ 12ನೇ ವರ್ಷದ ಪಾದಯಾತ್ರೆಯ ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವದ ಪ್ರಯುಕ್ತ 12ನೇ ವರ್ಷದ ಪಾದಯಾತ್ರೆ ಕುರಿತು ಪಾದಯಾತ್ರೆ ಸಮಿತಿಯ ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನ.10 ರಂದು ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಉಜಿರೆ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಪಾದಯಾತ್ರೆಯು ಬೆರಳೆಣಿಕೆಯಿಂದ ಪ್ರಾರಂಭವಾಗಿ ಇಂದು ಐತಿಹಾಸಿಕ ಕಾರ್ಯಕ್ರಮವಾಗಿ ಮೂಡಿದೆ. ಸಮಾಜದ ಸಾತ್ವಿಕ ಶಕ್ತಿ ಎದ್ದು ನಿಲ್ಲದಿದ್ದರೆ ಅದು ಆ ಸಮಾಜ ನಶಿಸಿ ಹೋಗುವ ಸೂಚನೆ. ಹಾಗಾಗಿ ನಮ್ಮ ಧಾರ್ಮಿಕ ಪರಂಪರೆ, ಶ್ರದ್ದಾ ಕೇಂದ್ರವನ್ನು ರಕ್ಷಣೆ ಮಾಡುವ ಪಣವನ್ನು ನಾವೆಲ್ಲರೂ ಪಡಬೇಕು ಎನ್ನುವ ದೃಷ್ಠಿಯಿಂದ ಈ ಪಾದಯಾತ್ರೆಯನ್ನು ಮಾಡುವುದಕ್ಕೆ ದೇವರು ಅವಕಾಶ ಮಾಡಿ ಕೊಟ್ಟಿದ್ದಾರೆ ಎಂದು ಪಾದಯಾತ್ರೆಯ ಯಶಸ್ವಿಗೆ ಶುಭಹಾರೈಸಿದರು.

ಶ್ರೀ ಕ್ಷೇತ್ರ.ಧ.ಗ್ರಾ.ಯೋ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಪಾದಯಾತ್ರೆಯು ಸಣ್ಣ ಚಿಂತನೆಯಿಂದ ದೊಡ್ಡ ಸಂಸ್ಕೃತಿಯಾಗಿ ಬೆಳೆದು ನಿಂತಿದೆ. ಉಜಿರೆಯ ಜನತೆಗೆ ಕ್ಷೇತ್ರದೊಂದಿಗೆ ಜೋಡಣೆ ಮಾಡುವ ಅವಕಾಶ ಪಾದಯಾತ್ರೆ ಮಾಡಿದೆ. ಪಾದಯಾತ್ರೆಯಲ್ಲಿ ಹಲವು ಭಜನಾ ತಂಡಗಳು ಭಾಗಿಯಾಗಳಿದ್ದು, ಶಿಸ್ತು ಹಾಗೂ ಸ್ವಚ್ಛತೆಗೆ ಆದ್ಯತೆಯನ್ನು ನೀಡಬೇಕು ಎಂದರು.

ಪಾದಯಾತ್ರೆಯ ಮಾರ್ಗದರ್ಶಕ ಪೂರನ್ ವರ್ಮ ಮಾತನಾಡಿ “ಭಕ್ತಿ ,ಶ್ರದ್ಧೆ ,ಗೌರವ, ಪ್ರೀತಿಯ ಹೆಜ್ಜೆಯೊಂದಿಗೆ ಆರಂಭವಾದ ಪಾದಯಾತ್ರೆ ಯಶಸ್ವಿಯಾಗಿ ನಡೆದಿದೆ. ಪಾದಯಾತ್ರೆಯಿಂದ ಶ್ರೀಕ್ಷೇತ್ರಕ್ಕೆ ಭಕ್ತರು ಇನ್ನಷ್ಟು ಹತ್ತಿರವಾಗಿದ್ದಾರೆ. ಈ ಬಾರಿಯ ಪಾದಯಾತ್ರೆಗೆ ಬಿಳಿಯ ವಸ್ತ್ರ ಧರಿಸಿ ಬಂದರೆ ಉತ್ತಮ. ಪಾದಯಾತ್ರೆಯು ದೇವರ ನಾಮಸ್ಮರಣೆಯೊಂದಿಗೆ ನಿಧಾನವಾಗಿ ಸಾಗಬೇಕು. ಈ ಸಂದರ್ಭ ಅಲ್ಲಲ್ಲಿ ನೀರು ಮತ್ತು ಬೆಲ್ಲದ ವ್ಯವಸ್ಥೆ ಇರಲಿದೆ” ಎಂದು ಹೇಳಿದರು.

ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಮಾತನಾಡಿದರು.

ಜನಜಾಗೃತಿ ವೇದಿಕೆ ಅಧ್ಯಕ್ಷ ಕಾಸಿಂ ಮಲ್ಲಿಗೆ ಮನೆ, ತಾಲೂಕು ಒಕ್ಕೂಟದ ಅಧ್ಯಕ್ಷ ಸೀತಾರಾಮ್ ಆರ್. ಬೆಳ್ತಂಗಡಿ, ಉಜಿರೆ ಎಸ್‌ ಡಿಎಂ ಕಾಲೇಜಿನ ಪ್ರಿನ್ಸಿಪಾಲ್ ಡಾ. ಬಿ.ಎ. ಕುಮಾರ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

ಯೋಜನೆಯ ಕೃಷಿ ನಿರ್ದೇಶಕ ರಾಮ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಸ್ವಾಗತಿಸಿದರು. ಯೋಜನಾಧಿಕಾರಿ ಸುರೇಂದ್ರ ವಂದಿಸಿದರು.

ಕಳೆದ ವರ್ಷದ ಪಾದಯಾತ್ರೆ ಆಯ-ವ್ಯಯ ಮಂಡಿಸಲಾಯಿತು. ಹಾಗೂ ಈ ಬಾರಿಯ ಪಾದಯಾತ್ರೆಯ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ನ.26ರಂದು ಪಾದಯಾತ್ರೆ:- ಈ ಬಾರಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಪಾದಯಾತ್ರೆ ನ. 26ರಂದು ಮಧ್ಯಾಹ್ನ 3 ಗಂಟೆಗೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದವರೆಗೆ ನಡೆಯಲಿದೆ. ಇದು 12ನೇ ವರ್ಷದ ಪಾದಯಾತ್ರೆಯಾಗಿದ್ದು ಇದರಲ್ಲಿ ಗಣ್ಯರ ಸಹಿತ ಅನೇಕ ಭಜನಾ ತಂಡಗಳು, ಭಕ್ತ ಬಾಂಧವರು ಭಾಗವಹಿಸಲಿದ್ದಾರೆ. ಶಿಸ್ತು, ಸ್ವಚ್ಛತೆಗೆ ಆದ್ಯತೆ ನೀಡುವ ಈ ಪಾದಯಾತ್ರೆ ಲಕ್ಷದೀಪೋತ್ಸವದ ಪ್ರಾರಂಭದ ದಿನ ನಡೆಯುತ್ತಾ ಬಂದಿದೆ.

Related posts

ಉಜಿರೆ ಅನುಗ್ರಹ ಪಿ.ಯು ಕಾಲೇಜಿಗೆ ನುಗ್ಗಿದ್ದ ಕಳ್ಳರು: ಸಿಸಿ ಕ್ಯಾಮೆರಾ, ಎನ್ ವಿಆರ್, ಹಾರ್ಡ್ ಡಿಸ್ಕ್ ಕಳ್ಳತನ

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು, ಸದಸ್ಯರ ನೇಮಕ

Suddi Udaya

ಶಿಶಿಲ ಶ್ರೀ ಗಡಿ ಚಾಮುಂಡಿ ದೇವಸ್ಥಾನದಲ್ಲಿ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ: ವಾಸ್ತು ಬಲಿ ಹೋಮ, ದುರ್ಗಾನಮಸ್ಕಾರ ಪೂಜೆ

Suddi Udaya

ಮಾಜಿ ಶಾಸಕ ವಸಂತ ಬಂಗೇರರ ನಿಧನಕ್ಕೆ ಬೆಳ್ತಂಗಡಿ ವಿ.ಹಿಂ.ಪ. ಬಜರಂಗದಳ ಪ್ರಖಂಡರಿಂದ ಸಂತಾಪ

Suddi Udaya

ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ ಪ್ರಾಥಮಿಕ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಬೆಳ್ತಂಗಡಿ: ಭುಡ್ಣಾರು ಶಕುಂತಲಾ ಶೆಟ್ಟಿ ನಿಧನ

Suddi Udaya
error: Content is protected !!