25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರತಿಭಟನೆಪ್ರಮುಖ ಸುದ್ದಿಬೆಳ್ತಂಗಡಿವರದಿ

ಕೊಕ್ಕಡ: ಶ್ರೀ ಕ್ಷೇತ್ರ ಸೌತಡ್ಕ ದೇವಸ್ಥಾನದ ಆಸ್ತಿ ಉಳಿಸಲು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಉಪಯೋಗಕ್ಕಾಗಿ ಖರೀದಿಸಿದ್ದ ಸ್ಥಿರಾಸ್ತಿಗಳನ್ನು ಖಾಸಗಿ ಟ್ರಸ್ಟ್ ಗೆ ಅಕ್ರಮವಾಗಿ ಹಸ್ತಾಂತರ ಮಾಡಿ ಅವ್ಯವಹಾರ ನಡೆಸಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ದೇವಾಲಯದ ಆಸ್ತಿಯನ್ನು ರಕ್ಷಿಸಬೇಕೆಂದು ಎಂದು ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆಯಿಂದ ನ.11ರಂದು ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನದ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ದೇವರ ಮುಂದೆ ಪ್ರಾರ್ಥನೆ ನೆರವೇರಿಸಿ ಧರಣಿ ಸತ್ಯಾಗ್ರಹ ಕೈಗೊಂಡರು.

ಸತ್ಯಾಗ್ರಹವನ್ನು ದ.ಕ ಜಿಲ್ಲಾ ಧಾರ್ಮಿಕ ಪರಿಷತ್ ನ ಲಕ್ಷ್ಮೀಶ ಗಬಲಾಡ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ವೇಳೆ ಸಂರಕ್ಷರಣಾ ವೇದಿಕೆಯರು ಹಾಗೂ ಗಣ್ಯರು ಮಾತನಾಡಿ ದೇವಳದ ಭಕ್ತಾದಿಗಳ ಸಂಖ್ಯೆ ವಿಪರೀತ ಹೆಚ್ಚುತ್ತಾ ಬರುತ್ತಿರುವ ಕಾರಣಕ್ಕೆ ಭಕ್ತಾದಿಗಳಿಗೆ ಮತ್ತು ಅವರ ವಾಹನಗಳಿಗೆ ವ್ಯವಸ್ಥೆ ಮಾಡುವ, ಭಕ್ತಾದಿಗಳಿಗೆ ಅಗತ್ಯ ಪೂಜಾ ಸಾಮಾಗ್ರಿಗಳನ್ನು ಒದಗಿಸುವ ಅಂಗಡಿ ಮುಗ್ಗಟ್ಟುಗಳನ್ನು ಪ್ರಾರಂಭಿಸುವ, ಭಕ್ತಾಧಿಗಳಿಗೆ ವಸತಿ ಗೃಹ ನಿರ್ಮಿಸುವ, ಇತ್ಯಾದಿ ಅಗತ್ಯಗಳನ್ನು ಪೂರೈಸುವ ಸಲುವಾಗಿ 2004ರಲ್ಲಿ ಭಕ್ತರ ದೇಣಿಗೆ ಹಣದಿಂದ 3.46 ಎಕರೆ ಜಾಗ ಖರೀದಿಸಲಾಗಿತ್ತು. ಅದರಲ್ಲಿ ದೇವಾಲಯದ ಸ್ವಂತ ಖರ್ಚಿನಿಂದಲೇ ವಾಣಿಜ್ಯ ಕಟ್ಟಡ, ವಸತಿ ಗೃಹ ನಿರ್ಮಾಣವಾಗಿದೆ. ಈಗ ಅದರ ಆದಾಯ ಹಾಗೂ ಭೂಮಿ ದೇವಾಲಯಕ್ಕೆ ಸಿಗದೆ ಖಾಸಗಿ ಟ್ರಸ್ಟ್‌ಗೆ ಸಂದಾಯವಾಗುತ್ತಿದೆ. ದೇವಾಲಯ ಮುಜರಾಯಿ ಇಲಾಖೆ ಅಧೀನದಲ್ಲಿದ್ದು, ಸರ್ಕಾರ ಮಧ್ಯಪ್ರವೇಶಿಸಿ ಈ ಆಸ್ತಿ ದೇವಾಲಯಕ್ಕೆ ಸೇರುವಂತೆ ಮಾಡಬೇಕು ಎಂದು ಒತ್ತಾಯಿಸಿದರು.


ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ಕೊಕ್ಕಡ ಇದರ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಸ್ವಾಗತಿಸಿ, ಉಪಾಧ್ಯಕ್ಷರುಗಳಾದ ಕೃಷ್ಣ ಭಟ್ ಕುಡ್ತಲಾಜೆ, ತುಕ್ರಪ್ಪ ಶೆಟ್ಟಿ ನೂಜಿ, ಪ್ರಶಾಂತ ರೈ ಗೋಳಿತೊಟ್ಟು, ವಿಶ್ವನಾಥ್ ಶೆಟ್ಟಿ ನೆಲ್ಯಾಡಿ, ಕಾರ್ಯದರ್ಶಿ ಶ್ಯಾಮರಾಜ್, ಕೋಶಾಧಿಕಾರಿ ವಿಶ್ವನಾಥ್ ಕೊಲ್ಲಾಜೆ, ಶ್ರೀವತ್ಸ ಕುಡ್ತಲಾಜೆ, ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯ ಯೋಗೀಶ್ ಕುಮಾರ್ ನಡಕ್ಕರ, ಕೊಕ್ಕಡ ವಲಯ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷ ತುಕ್ರಪ್ಪ ಶೆಟ್ಟಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್, ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ, ಹತ್ಯಡ್ಕ ಸಹಕಾರಿ ಸಂಘದ ನಿರ್ದೇಶಕ ಧರ್ಮರಾಜ ಗೌಡ ಅಡ್ಕಾಡಿ, ದ.ಕ ಹವ್ಯಾಕ ಬಂಧುಗಳ ಮಾಣಿ ಮಠದ ವೈದಿಕ ಕೇಶವ ಪ್ರಸಾದ್, ನೆಲ್ಯಾಡಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಸರ್ವೋತ್ತಮ ಗೌಡ, ಸಾಮಾಜಿಕ ಮುಖಂಡ ಬಿ ಎಂ ಭಟ್, ಗೋಪಾಲ ಕೃಷ್ಣ ಭಟ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಡಾ. ರಾಜಾರಾಮ್ ಕೆ.ಬಿ. ಹಾಲಿ ಸದಸ್ಯ ವೆಂಕಪ್ಪ ಪೂಜಾರಿ, ಬೆಳ್ತಂಗಡಿ ಗುರು ನಾರಾಯಣ ಸೇವಾ ಸಂಘದ ಜಯ ವಿಕ್ರಮ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ರೂಪೇಶ್ ರೈ ಆಲಿಮಾರ್, ಸಹಕಾರ್ಯದರ್ಶಿಗಳಾದ ಸುನೀಶ್ ನಾಯ್ಕ, ದಯಾನೀಶ್ ಕೊಕ್ಕಡ, ಗಣೇಶ್ ಕಾಶಿ, ಕೊಕ್ಕಡ ಸಮಿತಿ ಸದಸ್ಯರುಗಳಾದ ಲಕ್ಷ್ಮೀನಾರಾಯಣ ಉಪ್ಪರ್ಣ, ಗೋಪಾಲ ಕೃಷ್ಣ ಭಟ್ ಮುನ್ನಡ್ಕ, ಜಾರಪ್ಪ ಗೌಡ ಸಂಕೇಶ, ಎ.ಎನ್.ಶಬರಾಯ, ಚರಣ್ ಕೊಕ್ಕಡ, ಪದ್ಮನಾಭ ಆಚಾರ್ಯ, ಗಣೇಶ್ ಪಿ.ಕೆ, ಧನಂಜಯ ಗೌಡ ಪಟ್ರಮೆ, ಧರ್ಮರಾಜ್ ಅಡ್ಕಾಡಿ, ಶೀನ ನಾಯ್ಕ, ಲಕ್ಷ್ಮಿನಾರಾಯಣ, ಕೃಷ್ಣಪ್ಪ ಗೌಡ ಪೂವಾಜೆ, ವಿಶ್ವನಾಥ ಮೀಯಾಳ, ಗಣೇಶ್ ಪೂಜಾರಿ, ಜಯಂತ ಗೌಡ ಮಾಸ್ತಿಕಲ್ಲು, ಪ್ರಗತಿಪರ ಕೃಷಿಕ ಯೋಗೀಶ್ ಕೋಡಿಂಬಾಡಿ, ಶಿವಪ್ರಸಾದ್, ಪ್ರಭಾಕರ ಸಾಮಾನಿ ಮೊದಲಾದವರು ಉಪಸ್ಥಿತರಿದ್ದರು.

Related posts

ಬೆಳಾಲು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಮಾಧವ ಗೌಡ

Suddi Udaya

47 ವಿದ್ಯಾರ್ಥಿಗಳಿಗೆ ರಾಜ್ಯದ ಟಾಪ್ 10 ಸ್ಥಾನ; ಪಿಯುಸಿ ಇತಿಹಾಸದಲ್ಲಿ ಆಳ್ವಾಸ್ ಸಾರ್ವತ್ರಿಕ ದಾಖಲೆ: ಡಾ. ಮೋಹನ್ ಆಳ್ವ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಅಭಿವೃದ್ಧಿ ಕಾರ್ಯಗಳ ಕುರಿತು ಸಭೆ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ: 11 ನೇ ಗುರುತಿನಲ್ಲಿ ಎಸ್ಐಟಿ ಯಿಂದ ಕಾರ್ಯಾಚರಣೆ ಆರಂಭ

Suddi Udaya

ಶಿಶಿಲ ಶೌರ್ಯ ವಿಪತ್ತು ತಂಡದ ಕೆಲಸ ಕಾರ್ಯಗಳನ್ನು ಮೆಚ್ಚಿ ಜೀವರಕ್ಷಕ ಪರಿಕರಗಳನ್ನು ಕೊಡುಗೆಯಾಗಿ ನೀಡಿದ ಎಸ್ ಎಂ ಶಿವಪ್ರಕಾಶ್

Suddi Udaya

ಹೃದಯಾಘಾತಕ್ಕೊಳಗಾದ ವ್ಯಕ್ತಿಯೊರ್ವರಿಗೆ ಸಕಾಲದಲ್ಲಿ ಚಿಕಿತ್ಸೆ ಒದಗಿಸಿ ಅಪಾಯದಿಂದ ಪಾರು ಮಾಡಿದ ಆಸ್ಪತ್ರೆಯ ಸಿಬ್ಬಂದಿ: ಮದ್ದಡ್ಕ ನಿವಾಸಿ ಪ್ರದೀಪ್ ನಾಯಕ್ ರವರ ಕಾರ್ಯಕ್ಕೆ ವ್ಯಾಪಕ ಪ್ರಸಂಸೆ

Suddi Udaya
error: Content is protected !!