28 C
ಪುತ್ತೂರು, ಬೆಳ್ತಂಗಡಿ
August 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ನಾರಾವಿ ವಲಯದ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಬೆಳ್ತಂಗಡಿ: ರಾಜ್ಯಾದ್ಯಂತ 13 ಲಕ್ಷ ಬಡವರ ಗೃಹ ಉದ್ದೇಶಿತ ಚಟುವಟಿಕೆಗಳಿಗೆ ಬ್ಯಾಂಕಿನ ಮೂಲಕ ಸಹಕಾರ, ಸ್ವ ಉದ್ಯೋಗಕ್ಕೆ ಹಾಗು ಕೃಷಿ ಅಭಿವೃದ್ಧಿ ಕಾರ್ಯಗಳಿಗೆ ಅರ್ಥಿಕ ನೆರವು , ಗ್ರಾಮೀಣ ಭಾಗದಲ್ಲಿರುವ 60000 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನ ಸ್ಕಾಲರ್ ಶಿಪ್ ಒದಗಿಸುವ ಮೂಲಕ ಬಡವರ ಬದುಕಿನ ಏಳಿಗೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಶ್ರಮಿಸುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಅನಿಲ್ ಕುಮಾರ್ ಎಸ್ ಎಸ್ ರವರು ಹೇಳಿದರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ನಾರಾವಿ ವಲಯದಲ್ಲಿ ನೂತನವಾಗಿ ರಚನೆಗೊಂಡಿರುವ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಭಾರತ ದೇಶದಲ್ಲಿ ಸ್ವ ಸಹಾಯ ಸಂಘಗಳ ರೂಪು ರೇಷೆಗಳನ್ನು ರಚಿಸುವ ಸಲುವಾಗಿ ಮಹಿಳಾ ಸಬಲೀಕರಣಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಂಗ ಸಂಸ್ಥೆಯನ್ನಾಗಿ ನಬಾರ್ಡ್ ನ್ನೂ ನೇಮಿಸಿದೆ ನಬಾರ್ಡ್ ಸಂಸ್ಥೆ ಗುಂಪುಗಳ ಕಾರ್ಯ ಚಟುವಟಿಕೆಗಳನ್ನು ಅಧ್ಯಯನ ಮಾಡಿ ಮಾದರಿ ವ್ಯವಸ್ಥೆ ಎಂಬುವು ದಾಗಿ ಯೋಜನೆಯನ್ನ ಪರಿಗಣಿಸಿದೆ ಯೋಜನೆಯು ಕರ್ನಾಟಕ ರಾಜ್ಯದಲ್ಲಿ ಕಲ್ಪವೃಕ್ಷವಾಗಿದೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಿಯಮ ಪ್ರಕಾರವೇ ಸಾಲ ಸೌಲಭ್ಯಗಳನ್ನು ವಿತರಿಸಬೇಕು ಕನಿಷ್ಟ 17 ಬಗೆಯ ದಾಖಲೆಗಳನ್ನ ಒದಗಿಸಬೇಕು. ಹೆಚ್ಚಿನ ಬಡ ಜನರಲ್ಲಿ ಸೂಕ್ತ ದಾಖಲೆಗಳು ಲಭ್ಯ ಇರುವುದಿಲ್ಲ ಇದರಿಂದಾಗಿ ಬಡವರು ಬ್ಯಾಂಕಿನ ಸೌಲಭ್ಯ ಗಳಿಂದ ವಂಚಿತರಾಗುತ್ತಿದ್ದರೆ ದುಡಿಯುವ ಶಕ್ತಿ ಇರುವವರಿಗೆ ಆರ್ಥಿಕ ಸಹಕಾರ ಬೇಕು ಬಡವರ ಆರ್ಥಿಕ ಸಬಲೀಕರಣಕ್ಕಾಗಿ ಪೂಜ್ಯರು ವಿವಿದ ರಾಷ್ಟ್ರೀಕೃತ ಬ್ಯಾಂಕುಗಳ ಜೊತೆ ಒಪ್ಪಂದ ಮಾಡಿಕೊಂಡು ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಸದಸ್ಯರಿಗೆ ನೇರವಾಗಿ ಬ್ಯಾಂಕಿನ ಮೂಲಕ ಆರ್ಥಿಕ ಸೌಲಭ್ಯ ಗಳನ್ನ ಒದಗಿಸುವ ಕೆಲಸ ಮಾಡುತ್ತಿದ್ದಾರೆ ಮನುಷ್ಯನ ಶೇಕಡಾ 70 ರಷ್ಟು ಸಮಸ್ಯೆಗಳಿಗೆ ಹಣದ ಅಗತ್ಯತೆ ಇದೆ ಇದರ ಪೂರೈಕೆ ಯನ್ನ ಸರಳ ರೀತಿಯಲ್ಲಿ ಗುಂಪುಗಳ ಸದಸ್ಯರಿಗೆ ಬ್ಯಾಂಕುಗಳು ಒದಗಿಸುತ್ತಿವೆ ಎಂದು ವಿವರಿಸಿದರು.


ಇದರಿಂದಾಗಿ ದೇಶದ ಅರ್ಥಿಕ ವ್ಯವಸ್ಥೆಯಿಂದ ಹೊರಗುಳಿದ ಬಡವರಿಗೆ ಯೋಜನೆಯು ಕಲ್ಪವೃಕ್ಷವಾಗಿದೆ ಎಂದರು. ಗ್ರಾಮದಲ್ಲಿರುವ ಪ್ರತಿಯೊಬ್ಬರೂ ಅಭಿವೃದ್ಧಿ ಹೊಂದಬೇಕು ಎಲ್ಲಾ ಆಯಾಮಗಳಲ್ಲಿ ಯೋಜನೆಯ ಮೂಲಕ ಸೇವೆಯನ್ನು ನೀಡಲಾಗುತ್ತಿದೆ ದೇಶದ ಅರ್ಥಿಕ ವ್ಯವಸ್ಥೆಗೆ ನೀತಿ ನಿಯಮಗಳ ಅಗತ್ಯತೆ ಇದೆ ಬ್ಯಾಂಕಿನ ಅಂತರನ್ನ ಯೋಜನೆಯು ಹೋಗಲಾಡಿಸಿದೆ ಯಾವುದೇ ದಾಖಲೆಗಳು ಇಲ್ಲದೆಯೇ ಸುಲಭ ರೀತಿಯಲ್ಲಿ ಮನೆ ಬಾಗಿಲಿಗೆ ಬ್ಯಾಂಕಿನ ಸೌಲಭ್ಯ ವನ್ನು ಒದಗಿಸಲಾಗುತ್ತಿದೆ ಎಂದರು.


20000 ಮಂದಿ ಅಶಕ್ತರಿಗೆ ಮಾಶಾಸನ, 4000 ಶಾಲೆಗಳಿಗೆ ಬೆಂಚು ಡೆಸ್ಕ್, 4500 ಹಾಲು ಉಡ್ಪಾದಕರ ಕಟ್ಟಡದ ಕಾಮಗಾರಿ ಗಳಿಗೆ ಸಹಕಾರ, 780 ಕೆರೆಗಳ ಪುನಶ್ಚೇತನ, 485 ಶುದ್ಧ ಗಂಗಾ ಗಟ ಕ ಗಳ ರಚನೆ ಮಾಡಲಾಗಿದೆ ಈ ಮುಖೇನ ಹಲವಾರು ಸಾಮಾಜಿಕ ಚಟುವಟಿಕೆ ತೊಡಗಿಕೊಂಡು ಗ್ರಾಮದ ಅಭಿವೃದ್ಧಿಯಲ್ಲಿ ಪಾತ್ರ ವಹಿಸಿದೆ ಎಂದು ಹೇಳಿದರು ಒಕ್ಕೂಟದ ಪದಾಧಿಕಾರಿ ಗಳು ತಮ್ಮ ವ್ಯಾಪ್ತಿಯ ಗುಂಪುಗಳ ಗುಣ ಮಟ್ಟ ವನ್ನು ಕಾಪಾಡಿಕೊಳ್ಳುವ ಸೇವೆಯನ್ನು ಮಾಡುತ್ತಿದ್ದಾರೆ ಹೀಗಾಗಿ ಯುವ ನಾಯಕರನ್ನು ಸೃಷ್ಟಿಸುವ ದೊಡ್ಡ ವೇದಿಕೆಯಾಗಿ ಯೋಜನೆ ಕಾರ್ಯ ನಿರ್ವಹಿಸುತ್ತಿದೆ ಎಂದು ಅಭಿಪ್ರಾಯ ಪಟ್ಟರು.


ವೇಣೂರು ವಲಯದ ಜನ ಜಾಗೃತಿ ವೇದಿಕೆಯ ವಲಯ ಅಧ್ಯಕ್ಷ ಮೋಹನ್ ಅಂಡಿಂಜೆ ಯವರು ಮಾತನಾಡುತ್ತಾ ಬಂದ ದಾರಿಯನ್ನು ನೆನಪು ಮಾಡಿಕೊಳ್ಳುವ ಸಂದರ್ಭದಲ್ಲಿ ನಾವು ಇದ್ದೇವೆ 40 ವರ್ಷದ ಹಿಂದೆ ಕುಟುಂಬಗಳ ಮನೆಯ ಚಿತ್ರಣ ಯಾವ ರೀತಿಯಲ್ಲಿ ಇತ್ತು ಯೋಜನೆಯ ಮೂಲಕ ಯಾವ ಮಟ್ಟದಲ್ಲಿ ಸುಧಾರಣೆಯಾಗಿದೆ ಎಂಬುದನ್ನು ಪ್ರತಿಯೊಬ್ಬರೂ ಆತ್ಮ ಅವಲೋಕನ ಮಾಡಿಕೊಳ್ಳಬೇಕು ಸಮಾಜದಲ್ಲಿ ಒಳ್ಳೆಯ ಕೆಲಸ ಗಳನ್ನ ಪ್ರೋತ್ಸಾಹಿಸಬೇಕು ಗುಂಪಿನ ಹೊಣೆಗಾರಿಕೆ ಎಲ್ಲಾ ಸದಸ್ಯರದ್ದು ಅಪತ್ತು ಕಾಲದಲ್ಲಿ ನಮ್ಮ ರಕ್ಷಣೆಗೆ ಗುಂಪುಗಳು ನಮ್ಮನ್ನು ರಕ್ಷಿಸುತ್ತದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಚಂದ್ರ ನಾಥ ಸ್ವಾಮಿ ಜಿನ ಬಸದಿ ನಾರಾವಿ ಯ ಆಡಳಿತ ಮೊಕ್ತೇಸರರಾದ ನಿರಂಜನ ಆಜ್ರಿ ರಾಮೇರ ಗುತ್ತು, ಜನ ಜಾಗೃತಿ ವೇದಿಕೆಯ ನಾರಾವಿ ವಲಯದ ಅಧ್ಯಕ್ಷ ನಿತ್ಯಾನಂದ ನಾವರ, ಉಡುಪಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ದುಗ್ಗೆ ಗೌಡ, ಮರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತ್ನಾಕರ್ ಬುನ್ನು, ಶ್ರೀ ಉಮಾ ಮಹೇಶ್ವರ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಹಾಗೂ ಬಿ ಜೆ ಪಿ ಯ ಜಿಲ್ಲಾ ಉಪಾದ್ಯಕ್ಷ ಜಯಂತ್ ಕೋಟ್ಯಾನ್, ಪ್ರಗತಿ ಪರ ಕೃಷಿಕ ರತ್ನಾಕರ್ ಭಟ್, ಉದ್ಯಮಿಗಳಾದ ವಸಂತ್ ಭಟ್, ನೂತನ ವಲಯ ಅಧ್ಯಕ್ಷ ಶೇಖರ್ ಹೆಗ್ಡೆ, ಹಾಗೂ ಎಲ್ಲಾ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಭಾ ಅಧ್ಯಕ್ಷತೆಯನ್ನು ಕೇಂದ್ರ ಒಕ್ಕೂಟದ ಅಧ್ಯಕ್ಷ ಸದಾನಂದ ಬಂಗೇರ ವಹಿಸಿದ್ದರು. ತಾಲೂಕು ಯೋಜನಾಧಿಕಾರಿ ದಯಾನಂದ ಪೂಜಾರಿ ಸ್ವಾಗತಿಸಿದರು, ವಲಯ ಮೇಲ್ವಿಚಾರಕ ರಾದ ಶ್ರೀಮತಿ ದಮಯಂತಿ ವರದಿ ಮಂಡಿಸಿದರು, ನಿಕಟ ಪೂರ್ವ ವಲಯ ಅಧ್ಯಕ್ಷ ಯಶೋದರ ಬಂಗೇರಾ ನಿರೂಪಿಸಿದರು. ಕೊಕ್ರಾ ಡಿ ಸಾವ್ಯ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಶಶಿಧರ್ ಧನ್ಯವಾದವಿತ್ತರು. ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಹಾಜರಿದ್ದರು.

Related posts

ಬೆಂದ್ರಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ

Suddi Udaya

ಗರ್ಡಾಡಿ ಜನಮಂಗಳ ಕಾರ್ಯಕ್ರಮದಡಿಯಲ್ಲಿ ವೀಲ್ ಚೇರ್ ವಿತರಣೆ

Suddi Udaya

ಜೂ.13: ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ದೃಷ್ಟಿ 2025 ಕಾರ್ಯಾಗಾರ

Suddi Udaya

ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ಪ್ರಯುಕ್ತ ಶ್ರೀ ಉಮಾಮಹೇಶ್ವರ ದೇವರಿಗೆ ಸೀಯಾಳ ಅಭಿಷೇಕ ಹಾಗೂ ವಿಶೇಷ ಪೂಜೆ

Suddi Udaya

ಬೆಳ್ತಂಗಡಿಯಲ್ಲಿ ವಿ.ಪ. ಶಾಸಕ ಹರೀಶ್ ಕುಮಾರ್ ರವರಿಂದ ಸರಕಾರದ “ಶಕ್ತಿ”ಯೋಜನೆಗೆ ಚಾಲನೆ

Suddi Udaya

ರಾಷ್ಟ್ರೀಯ ಯೋಗಾಸನ ಕ್ರೀಡಾ ಒಕ್ಕೂಟದ ಉಪಾಧ್ಯಕ್ಷರಾಗಿ ಡಾ. ಐ. ಶಶಿಕಾಂತ ಜೈನ್

Suddi Udaya
error: Content is protected !!