ಬೆಳ್ತಂಗಡಿ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮಂಗಳೂರು ಶಾಲಾ ಮಠದ ರಜತಮಹೋತ್ಸವದ ಅಂಗವಾಗಿ ದ.ಕ ಜಿಲ್ಲೆಯ 25 ಸಾಧಕರಿಗೆ ‘ಕರಾವಳಿ ರತ್ನ’ ಪ್ರಶಸ್ತಿ ನೀಡಲಾಗುತ್ತಿದ್ದು, ಬೆಳ್ತಂಗಡಿ ತಾಲೂಕಿನಿಂದ ನಿವೃತ್ತ ಯೋಧ ಡಾ. ಕೆ.ಎಸ್ ಗೋಪಾಲಕೃಷ್ಣ ಕಾಂಚೋಡು ಅವರು ಆಯ್ಕೆಯಾಗಿದ್ದಾರೆ.
ನ.26 ಮಂಗಳೂರಿನ ಶಾಖಾ ಮಠದಲ್ಲಿ ಶ್ರೀ ನಿರ್ಮಲಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಕರಾವಳಿ ಪ್ರದೇಶದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 25 ಮಂದಿ ಸಾಧಕರಿಗೆ ‘ಕರಾವಳಿ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ನಿವೃತ್ತ ಯೋಧ ಡಾ ಗೋಪಾಲಕೃಷ್ಣ ಕಾಂಚೋಡು ಕೃಷಿ ಕ್ಷೇತ್ರದ ಸಾಧನೆಗಾಗಿ ಗುರುತಿಸಲ್ಪಟ್ಟು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.