September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಿಜೆಪಿ ಬೆಳ್ತಂಗಡಿ ಯುವ ಮೋರ್ಚಾದಿಂದ ದೋಸೆ ಹಬ್ಬ, 75 ಸಾವಿರಕ್ಕೂ ಹೆಚ್ಚು ದೋಸೆ ಸವಿದ ಸಾರ್ವಜನಿಕರು: ವಿಶಿಷ್ಟ ಪರಿಕಲ್ಪನೆಯೊಂದಿಗೆ ದೋಸೆ ಹಬ್ಬವನ್ನು ಮಾಡಿದ ಶಾಸಕ ಹರೀಶ್ ಪೂಂಜ ರಾಜ್ಯಕ್ಕೆ ಮಾದರಿ: ಸಂಸದ ನಳಿನ್ ಕುಮಾರ್ ಕಟೀಲ್

ಬೆಳ್ತಂಗಡಿ: ಕಳೆದ ನಾಲ್ಕು ವರ್ಷಗಳಿಂದ ಬೆಳಕಿನ ಹಬ್ಬ ದೀಪಾವಳಿಯ ಸಂದರ್ಭ ಬಿಜೆಪಿ ಬೆಳ್ತಂಗಡಿ ಯುವ ಮೋರ್ಚಾದಿಂದ ದೋಸೆ ಹಬ್ಬದ ಸಮಾರೋಪ ಸಮಾರಂಭ ನಡೆಯಿತು.ಗೋ ಮಾತೆಗೆ ಪೂಜೆ, ಬಿಜೆಪಿ ಕಮಲದಲ್ಲಿ ಅರಳಿತ ಹಣತೆಗಳ ಚಿತ್ತಾರ, ಬೆಳ್ತಂಗಡಿ ಪೇಟೆಯಲ್ಲಿ ಅತ್ಯಾಕರ್ಷಕ ದೀಪಾಲಂಕಾರ, ವಿವಿಧ ಭಜನಾ ತಂಡಗಳಿಂದ ಕುಣಿತಾ ಭಜನೆ,75 ಸಾವಿರಕ್ಕೂ ಹೆಚ್ಚು ದೋಸೆ ಸವಿದ ಸಾರ್ವಜನಿಕರು ಮೆಚ್ಚಗೆ ವ್ಯೆಕ್ತ ಪಡಿಸಿದರು.

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ವಿಶಿಷ್ಟ ಪರಿಕಲ್ಪನೆಯೊಂದಿಗೆ ದೋಸೆ ಹಬ್ಬವನ್ನು ಮಾಡಿದ ಶಾಸಕ ಹರೀಶ್ ಪೂಂಜ ರಾಜ್ಯಕ್ಕೆ ಮಾದರಿ ಎಂದರು.

ದೋಸೆ ಹಬ್ಬದ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಕೆ.ಪ್ರತಾಪ್ ಸಿಂಹ ನಾಯಕ್,ಭಾರತೀಯ ಜನತಾ ಪಾರ್ಟಿಯ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಬೃಜೇಶ್ ಚೌಟ, ಭಾರತೀಯ ಜನತಾ ಪಾರ್ಟಿಯ ಕಿಶೋರ್ ಬೊಟ್ಯಾಡಿ ಮಂಡಲದ ಅಧ್ಯಕ್ಷ ಜಯಂತ್ ಕೋಟ್ಯಾನ್,ಬಿಜೆಪಿ ರಾಜ್ಯ ರೈತಮೊರ್ಚಾದ ಉಪಾಧ್ಯಕ್ಷ ರೇಣುಕಾಪ್ರಸಾದ್, ಬಿಜೆಪಿ ಬೆಳ್ತಂಗಡಿ ಯುವಮೋರ್ಚಾದ ಅಧ್ಯಕ್ಷ ಯಶವಂತ್ ಬೆಳಾಲು,ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ, ಯುವಮೊರ್ಚಾ ಕಾರ್ಯದರ್ಶಿ ವಿನೀತ್ ಕೋಟ್ಯಾನ್ ಸಾವ್ಯ, ಉಮೇಶ್ ಕುಲಾಲ್ ಉಪಸ್ಥಿತರಿದ್ದರು.

ಬಿಜೆಪಿ ಮಂಡಲ ಉಪಾಧ್ಯಕ್ಷ ಸೀತರಾಮ್ ಬೆಳಾಲ್, ಅರವಿಂದ ಲಾಯಿಲ ಕಾರ್ಯಕ್ರಮ‌ ನಿರೂಪಿಸಿದರು. ಶಾಸಕ ಹರೀಶ್ ಪೂಂಜ ಸ್ವಾಗತಿಸಿದರು.

Related posts

ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ನಗರ ಮತ್ತು ಗ್ರಾಮೀಣ ಸಮಿತಿಗಳ ವತಿಯಿಂದ ‘ಮತಕಳ್ಳರೇ ಅಧಿಕಾರ ಬಿಟ್ಟು ತೊಲಗಿ’ ಪ್ರತಿಭಟನೆ

Suddi Udaya

ಬೆಳ್ತಂಗಡಿ ಲೋಬೊ ಮೋಟಾರ್ಸ್‌ನಲ್ಲಿ ಕ್ರಿಸ್ಮಸ್ ಸಂಭ್ರಮ

Suddi Udaya

ಬೆಳ್ತಂಗಡಿ ಡಿ. ಕೆ.ಆರ್.ಡಿ.ಎಸ್ ನಿಂದ ಕ್ರಿಸ್ಮಸ್ ಆಚರಣೆ

Suddi Udaya

ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಬಂಗಾಡಿ ಸಹಕಾರಿ ವ್ಯವಸಾಯ ಸಂಘಕ್ಕೆ ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರದಾನ

Suddi Udaya

ದ.ಕ.ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರ ಜೊತೆ ರಕ್ಷಾ ಸಮಿತಿ ಸದಸ್ಯರಿಂದ ಸಮಿತಿ ಸಭೆ ಹಾಗೂ ರೋಗಿಗಳ ಭೇಟಿ

Suddi Udaya

ನಡ – ಕನ್ಯಾಡಿ ಶಕ್ತಿ ಕೇಂದ್ರ ಕಾರ್ಯಾಗಾರ

Suddi Udaya
error: Content is protected !!