27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬಂಗಾಡಿ ಫ್ರೆಂಡ್ಸ್ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಲಯ ಮಟ್ಟದ ಪುರುಷರ ಹಗ್ಗ ಜಗ್ಗಾಟ:

ಬಂಗಾಡಿ : ಫ್ರೆಂಡ್ಸ್ ಬಂಗಾಡಿ ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪ್ರಥಮ ವರ್ಷದ ವಲಯ ಮಟ್ಟದ ಪುರುಷರ 525 ಕೆ.ಜಿ. ವಿಭಾಗದ ಗ್ರಿಪ್ ಮಾದರಿಯ ಹೊನಲು ಬೆಳಕಿನ ಹಗ್ಗ ಜಗ್ಗಾಟ ನ.10ರಂದು ರಾತ್ರಿ ಲಿಂಗತ್ಯಾರು ಮೈದಾನದಲ್ಲಿ ನಡೆಯಿತು.

ಪಂದ್ಯಾಟ ಆರಂಭಕ್ಕೂ ಮುನ್ನ ಸಭಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮವು ಪಿ. ಆರ್ ಪಳನಿ ಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಇಂದಬೆಟ್ಟು ಗ್ರಾಮ ಪಂಚಾಯತ್ ಸದಸ್ಯ ಬಿ. ವೀರಪ್ಪ ಮೊಯ್ಲಿರವರು ದೀಪ ಬೆಳಗಿಸುವ ಮೂಲಕ ನೆರವೇರಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಪಂದ್ಯಾಟದ ಕ್ರೀಡಾಂಗಣ ಉದ್ಘಾಟನೆಯನ್ನು ಸತ್ತಾರ್ ಸಾಹೇಬೇಬ್ ಪ್ರಗತಿ ರೈಸ್ ಮಿಲ್ ನೆರವೇರಿಸಿದರು.

ವೇದಿಕೆಯಲ್ಲಿ ಗೌರವಾಧ್ಯಕ್ಷ ಫ್ರಾನ್ಸಿಸ್ ಕ್ಸೇವಿಯರ್ ಮಾಲಕರು ಸ್ಟಾರ್ ಹಾರ್ಡ್ವೇರ್ ಬಂಗಾಡಿ, ಸಲೀಂ ಶದ ಟ್ರೇಡರ್ಸ್ ಬಂಗಾಡಿ, ಕರಿಂ ಮಾಲಕರು ಹೋಟೆಲ್ ವೆಲ್ಕಮ್ ಬಂಗಾಡಿ, ಜೈ ಕರ್ನಾಟಕ ಗಾಯಕರ ಬಳಗ ಅಧ್ಯಕ್ಷ ಇಸ್ಮಾಯಿಲ್ ಬಂಗಾಡಿ, ಜೈ ಕರ್ನಾಟಕ ಗಾಯಕರ ಬಳಗ ಗೌರವಾಧ್ಯಕ್ಷ ಮನೋಹರ್ ಪ್ರಸಾದ್, ರವಿ ನೇತ್ರಾವತಿ ನಗರ, ತಾಜುಲ್ ಉಲಮಾ ಮಸೀದಿ ಏರ್ಮಲ ಅಧ್ಯಕ್ಷ ಹಸನಬ್ಬ, ಕೆ. ಬಾಲಕೃಷ್ಣ ಗೌಡ ಪ್ರಗತಿ ಪರ ಕೃಷಿಕರು ಕೊಡಂಗೆ, ಇಂದಬೆಟ್ಟು ವಲಯ ಇಟಿಟಿ ಅಧ್ಯಕ್ಷ ರಮೇಶ್ ,ಬೆಳ್ತಂಗಡಿ ಜೈ ಕರ್ನಾಟಕ ಗಾಯಕರ ಬಳಗ ಜೊತೆ ಕಾರ್ಯದರ್ಶಿ ಕು| ಕುಸುಮ ಬಂದಾರು, ಜೈ ಕರ್ನಾಟಕ ಗಾಯಕರ ಬಳಗ ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಟಿಂಬರ್ ಬಂಗಾಡಿ ಮತ್ತು ನವೀನ್ ಕುಮಾರ್ ಬಂಗಾಡಿ, ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಗೀತ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿ ಪಡೆದ ಗ್ರಾಮಾಂತರ ಪ್ರದೇಶದ ಕಲಾವಿದರಿಗೆ ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ವಾಯ್ಸ್ ಆಫ್ ಬಂಗಾಡಿ ಕಲಾವಿದರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.
ನಂತರ ವಲಯದ ಬಲಾಡ್ಯ ತಂಡಗಳ ಮಧ್ಯೆ ಬಾರಿ ಪೈಪೋಟಿಯ ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಿತು.
ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ರೂ. 6000 ಮತ್ತು ಟ್ರೋಫಿ, ದ್ವಿತೀಯ ರೂ. 4000ರೂ ಮತ್ತು ಟ್ರೋಫಿ, ತೃತೀಯ ಹಾಗೂ ಚತುರ್ಥ ರೂ. 1500 ಹಾಗೂ ಟ್ರೋಫಿ. ನೀಡಿ ಗೌರವಿಸಲಾಯಿತು.

ಜೈ ಕರ್ಣಾಟಕ ಗಾಯಕರ ಬಳಗ ಮಾದ್ಯಮ ಸಲಹೆಗಾರ ಶಾಹೀನ್ ಅತ್ತಾಜೆ ಸ್ವಾಗತಿಸಿದರು. ಸತೀಶ್ ಮನ್ನಾಡ್ಕ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

Related posts

ಕರಾಟೆ ಚಾಂಪಿಯನ್ಶಿಪ್: ಬೆಳ್ತಂಗಡಿಯ ಸೈಂಟ್ ಮೇರಿಸ್ ಆಂ.ಮಾ. ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ನಾಫೀರವರು ಕುಮಿಟೆಯಲ್ಲಿ ಹಾಗೂ ಕಟಾದಲ್ಲಿ ಕಂಚಿನ ಪದಕ

Suddi Udaya

ಕುಣಿತ ಭಜನಾ ತರಬೇತಿಗೆ ನೂತನ ಸದಸ್ಯರುಗಳ ಸೇರ್ಪಡೆ ಕಾರ್ಯಕ್ರಮ

Suddi Udaya

ಫ್ರೆಂಡ್ಸ್ ಗರ್ಡಾಡಿ ವತಿಯಿಂದ ವೈದ್ಯಕೀಯ ನೆರವು ಹಸ್ತಾಂತರ

Suddi Udaya

ಕೊಕ್ಕಡ: ಉಪ್ಪಾರಪಳಿಕೆಯಲ್ಲಿ ಕೃಷ್ಣಜನ್ಮಾಷ್ಟಮಿ ಆಚರಣೆ ಮತ್ತು ಶ್ರೀಕೃಷ್ಣ ಮಂದಿರದ ಭೂಮಿ ಪೂಜೆ ಹಾಗೂ ಸಸಿಗಳ ನಾಟಿ ಕಾರ್ಯಕ್ರಮ

Suddi Udaya

ಉಜಿರೆ ಎಸ್.ಡಿ.ಎಮ್ ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ

Suddi Udaya

ಡಾ.ಸುಬ್ರಹ್ಮಣ್ಯ ಭಟ್ಟರ ಮೊದಲ ಕಾದಂಬರಿ ” ಶಂಭು” ಬಿಡುಗಡೆ

Suddi Udaya
error: Content is protected !!