April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ತಣ್ಣೀರುಪಂತ ಗ್ರಂಥಾಲಯ ಸಲಹಾ ಸಮಿತಿ ಸಭೆ

ತಣ್ಣೀರುಪಂತ: ತಣ್ಣೀರುಪಂತ ಗ್ರಾಮ ಪಂಚಾಯತ್ ಅರಿವು ಕೇಂದ್ರ ಗ್ರಂಥಾಲಯದ ಪ್ರಥಮ ಹಂತದ ಸಲಹಾ ಸಮಿತಿ ಸಭೆ ಗ್ರಾ.ಪಂ. ಹಾಗೂ ಸಮಿತಿ ಅಧ್ಯಕ್ಷೆ ಹೇಮಾವತಿ ಎಂ. ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಗ್ರಂಥಾಲಯ ಕಚೇರಿಯಲ್ಲಿ ನಡೆಯಿತು.

ವಿದ್ಯಾರ್ಥಿಗಳನ್ನು ಗ್ರಂಥಾಲಯ ಕೇಂದ್ರಕ್ಕೆ ಸೆಳೆಯುವ, ಪುಸ್ತಕಗಳ ಮೇಲೆ ಅಭಿರುಚಿ ತೋರಲು ಸೂಕ್ತ ಸಲಹೆಗಳನ್ನು ನೀಡಲಾಯಿತು. ಗ್ರಂಥಾಲಯ ಸದ್ರಿ ಕಟ್ಟಡ ಹಳೆಯದಾಗಿದ್ದು ನೂತನ ಕಟ್ಟಡ ನಿರ್ಮಾಣದ ಕುರಿತು ಗ್ರಾಮ ಪಂಚಾಯತ್‌ಗೆ ಪ್ರಸ್ತಾವನೆ ಸಲ್ಲಿಸಲಾಯಿತು. ಗ್ರಾಮ ವ್ಯಾಪ್ತಿಯ ಶಾಲೆಗಳಲ್ಲಿ ಚಟುವಟಿಕೆ, ಮಕ್ಕಳ ಹಬ್ಬ ಆಚರಣೆಯ ಕುರಿತು ಚರ್ಚೆ ನಡೆಯಿತು.

ಸಲಹಾ ಸಮಿತಿ ಸದಸ್ಯರಾದ ಶಾಲಾ ಮುಖ್ಯೋಪಾಧ್ಯಾಯ ಟಿ.ಬಿ.ಬಸವಲಿಂಗಪ್ಪ, ಸ್ಥಳೀಯ ಯುವಕ-ಯುವತಿ ಮಂಡಲ ಪ್ರತಿನಿಧಿಗಳಾದ ಮಿಥುನ್ ಕುಲಾಲ್ ಹಾಗೂ ಮಮತಾ, ಹಿರಿಯ ನಾಗರಿಕ ಕುಶಾಲಪ್ಪ ಗೌಡ, ಶಿಕ್ಷಣ ತಜ್ಞ ಯುವರಾಜ್ ಅನಾರ್, ಪತ್ರಕರ್ತ ಮನೀಶ್ ವಿ.ಅಂಚನ್, ಕೌಶಲಾಭಿವೃದ್ಧಿಯ ಶೋಭಾ, ಗ್ರಂಥಾಲಯ ಮೇಲ್ವಿಚಾರಕಿ ಮೋಹಿನಿ, ವಿದ್ಯಾರ್ಥಿಗಳಾದ ದೀಪಾ, ಅಜೇಯ್, ಜಯಸೂರ್ಯ, ಭವ್ಯಾ, ಸದಸ್ಯ ಕಾರ್ಯರ್ಶಿ ಶ್ರವಣ್ ಕುಮಾರ್, ಗ್ರಾ.ಪಂ.ಕಾರ್ಯದರ್ಶಿ ಆನಂದ ಉಪಸ್ಥಿತರಿದ್ದರು. ಸಿಬ್ಬಂದಿ ಸುಂದರ ನಾಯ್ಕ, ಧರ್ಣಪ್ಪ, ಸೌಮ್ಯಾ, ಸಂಗೀತಾ ಹಾಗೂ ಸೌಮ್ಯಾ ಉಪಸ್ಥಿತರಿದ್ದರು.

Related posts

ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನಿಂದ ಚೈತನ್ಯ ವಿಮಾ ಪರಿಹಾರ

Suddi Udaya

ಪೆರ್ಮುಡ ಶ್ರೀ ಜಗದೀಶ್ವರ ಭಜನಾ ಮಂಡಳಿ ಕುಣಿತ ಭಜನಾ ಉದ್ಘಾಟನಾ ಕಾರ್ಯಕ್ರಮ

Suddi Udaya

ಬಳಂಜ: ಗ್ರಾಮ ಸಭೆ

Suddi Udaya

” ಗೃಹಲಕ್ಷ್ಮಿ” ಯೋಜನೆಯ ನೋಂದಾವಣೆ : ರಜಾ ದಿನದಲ್ಲೂ ಕಾರ್ಯನಿರ್ವಹಿಸಿದ ಕಳಿಯ ಗ್ರಾ.ಪಂ.

Suddi Udaya

ಕನ್ಯಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಮಿತಿ ರಚನೆ

Suddi Udaya

ಮಚ್ಚಿನ ಸ.ಉ.ಹಿ.ಪ್ರಾ. ಶಾಲಾ ಎಸ್. ಡಿ ಎಮ್ ಸಿ ನೂತನ ಸಮಿತಿ ರಚನೆ

Suddi Udaya
error: Content is protected !!