25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಮುಳಿಯ ಜುವೆಲ್ಲರ್ಸ್ ವತಿಯಿಂದ ದಯಾ ವಿಶೇಷ ಶಾಲೆಗೆ ಅಭಿನಂದನಾ ಕಾರ್ಯಕ್ರಮ

ಬೆಳ್ತಂಗಡಿ: ದಯಾ ವಿಶೇಷ ಶಾಲೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತ ಹಿನ್ನಲೆಯಲ್ಲಿ ಬೆಳ್ತಂಗಡಿಯ ಮುಳಿಯ ಜುವೆಲ್ಲರ್ಸ್ ರವರ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ದಯಾ ವಿಶೇಷ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭ ಮುಳಿಯ ಜುವೆಲ್ಲರ್ಸ್ ವತಿಯಿಂದ ಸಿಬ್ಬಂದಿಗಳು ಆಗಮಿಸಿ ಶಾಲೆಯ ನಿರ್ದೇಶಕರಾದ ವಂ.ಫಾ.ವಿನೋದ್ ಮಸ್ಕರೇನಸ್ ರವರನ್ನು ಸನ್ಮಾನಿಸಿ, ಸಮಾಜದಲ್ಲಿ ಕಡೆಗಣಿಸಲ್ಪಟ್ಟ ವಿಕಲಚೇತನ ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಅವರ ಸರ್ವತೋಮುಖ ಏಳಿಗೆಗಾಗಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿರುವ ಶಾಲೆಯನ್ನು ಪ್ರಶಂಸಿದರು.

ವಂ.ಫಾ.ವಿನೋದ್ ಮಸ್ಕರೇನಸ್ ರವರು ಮಾತನಾಡಿ ಮುಳಿಯ ಜುವೆಲ್ಲರ್ಸ್ ರವರು ನಮ್ಮ ಶಾಲಾ ವಾರ್ಷಿಕೋತ್ಸವದ ವೇಳೆ ಹಲವು ಬಾರಿ ಮಕ್ಕಳಿಗೆ ಹಾಗೂ ಶಾಲೆಗೆ ತಮ್ಮಿಂದಾದ ಸಹಾಯವನ್ನು ನೀಡಿ ನಮ್ಮ ಈ ಕಾರ್ಯದಲ್ಲಿ ಸಹಕಾರ ಹಾಗೂ ನಮಗೆ ಪ್ರಚೋದನೆ ನೀಡಿರುತ್ತಾರೆ. ಭಗವಂತನು ಅವರ ಎಲ್ಲಾ ಕಾರ್ಯಗಳಲ್ಲಿ ಅವರನ್ನು ಸದಾ ಹರಸಲಿ ಜುವೆಲ್ಲರ್ಸ್‌ನ ಮಾಲಕರಿಗೂ, ಕುಟುಂಬಸ್ಥರಿಗೂ ಹಾಗೂ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೂ ಭಗವಂತನು ಆಯುರಾರೋಗ್ಯವನ್ನು ನೀಡಲಿ ಹಾಗೂ ಮಾಡುವ ಕೆಲಸಗಳಲ್ಲಿ ಅವರು ಉತ್ತಮ ಫಲ ಕಾಣುವಂತಾಗಲಿ ಎಂದು ಆಶಿಸಿದರು. ಸಮಾಜದ ಬಗ್ಗೆ ಕಾಳಜಿಯನ್ನು ಹೊಂದಿರುವ ಇಂತಹ ಸಂಸ್ಥೆಗಳು ನಮ್ಮೊಂದಿಗೆ ಇರುವುದರಿಂದ ನಮಗೆ ಇನ್ನೂ ಮುಂದುವರೆಯಲು ಪ್ರೋತ್ಸಾಹ ಸಿಕ್ಕಂತಾಗುತ್ತದೆ ಎಂದು ಧನ್ಯವಾದವಿತ್ತರು. ಕಾರ್ಯಕ್ರಮದಲ್ಲಿ ಶಾಲಾ ಸಿಬ್ಬಂದಿಗಳು ಹಾಗೂ ಮಕ್ಕಳು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೇಸಿಗೆ ಶಿಬಿರ

Suddi Udaya

ರಾಜ್ಯಮಟ್ಟದ ನೆಟ್ ಬಾಲ್ ಕ್ರೀಡೆ: ಎಸ್.ಡಿ.ಎಂ. ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿ ಪ್ರಶಾಂತ್ ಗೆ ಚಿನ್ನದ ಪದಕ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್‌ ಸುವರ್ಣ ವರ್ಷಾಚರಣೆ; 50 ವಿಶಿಷ್ಟ ಕಾರ್ಯಕ್ರಮಗಳು, ಲಯನ್ಸ್ ಭವನ ನವೀಕರಣಕ್ಕೆ ನಿರ್ಧಾರ

Suddi Udaya

ಪಾಂಗಾಳ ಕು. ಸೌಜನ್ಯ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ: ಆ.27 ರಂದು ಹೋರಾಟದಲ್ಲಿ ಭಾಗಿಯಾಗುವಂತೆ ಸೌಜನ್ಯ ತಾಯಿ ಕುಸುಮಾವತಿಯವರಿಗೆ ಆಹ್ವಾನ

Suddi Udaya

ಅರಸಿನಮಕ್ಕಿ ಸರಕಾರಿ ಪ್ರೌಢಶಾಲೆಯಲ್ಲಿ ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ

Suddi Udaya

ಮದ್ರಸ ಪಬ್ಲಿಕ್ ಪರೀಕ್ಷೆ : 5 ನೇ ತರಗತಿ ವಿದ್ಯಾರ್ಥಿನಿ ಫಾತಿಮತ್ ಸನ ಮಡಂತ್ಯಾರು ರಿಗೆ 600 ರಲ್ಲಿ 600 ಅಂಕ

Suddi Udaya
error: Content is protected !!