24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಮಾಲಾಡಿ: ಶುದ್ಧ ಕುಡಿಯುವ ನೀರಿನ ಘಟಕ ಸರಿಯಾಗಿ ನಿರ್ವಹಣೆ ಮಾಡದೆ ಲಕ್ಷಾಂತರ ರೂ. ಬೆಲೆಬಾಳುವ ಮಿಷನರಿಗಳು ಕಳ್ಳರ ಪಾಲು : ಸಂಬಂಧಪಟ್ಟ ಇಲಾಖೆಯವರು ಗಮನಹರಿಸಿ ನೀರಿನ ಘಟಕವನ್ನು ಜನಸಾಮಾನ್ಯರಿಗೆ ಉಪಯೋಗ ಆಗುವ ರೀತಿಯಲ್ಲಿ ಮಾಡುವಂತೆ ಗ್ರಾಮಸ್ಥರ ಒತ್ತಾಯ

ಸೋಣಂದೂರು : ಪಣಕಜೆ ಸಮೀಪದ ಶ್ರೀ ಕೃಷ್ಣ ಭಜನಾ ಮಂದಿರದ ಪಕ್ಕದ ಮೈದಾನದ ಬದಿಯಲ್ಲಿರುವ ಮಾಲಾಡಿ ಪಂಚಾಯತಿ ವ್ಯಾಪ್ತಿಗೆ ಸೇರಿರುವ ಶುದ್ಧ ಕುಡಿಯುವ ನೀರಿನ ಘಟಕ ಸರಿಯಾಗಿ ನಿರ್ವಾಹಣೆ ಮಾಡದೆ ಲಕ್ಷಾಂತರ ರೂಪಾಯಿ ಬೆಲೆಬಾಳುವ ಮಿಷನರಿಗಳು ಕಳ್ಳರ ಪಾಲಾಗುತ್ತಿದೆ.

ಪಣಕಜೆ ಪೇಟೆಯಿಂದ 100 ಮೀಟರ್ ದೂರದಲ್ಲಿರುವ ನೀರಿನ ಘಟಕವು ಯಾರಿಗೂ ಉಪಯೋಗವಾಗದೆ ಸುತ್ತ ಮುತ್ತಲು ಗಿಡ ಗಂಟಿಗಳು ಆವರಿಸಿದೆ ರಾತ್ರಿ ಸಮಯದಲ್ಲಿ ಇದರ ಪಕ್ಕದಲ್ಲಿ ಕಿಡಿಗೇಡಿಗಳು ಕುಳಿತು ಮಧ್ಯ ಸೇವನೆ ಮಾಡಿ ಬಾಟಲಿಗಳಿಂದ ಘಟಕದ ಕಿಟಕಿ ಬಾಗಿಲುಗಳನ್ನು ಪುಡಿ ಮಾಡಲಾಗಿದೆ. ಕೆಲವು ಸಮಯಗಳ ಹಿಂದೆ ಈ ಪರಿಸರದಲ್ಲಿ ರಾತ್ರಿ ಸಮಯದಲ್ಲಿ ಕಳ್ಳರ ಓಡಾಟ ಕಂಡು ಬಂದಿದ್ದು ಸ್ಥಳೀಯ ಮನೆಯವರು ಪೋಲಿಸ್ ಇಲಾಖೆಗೆ ದೂರನ್ನು ನೀಡಿದ್ದು ಇಲಾಖೆಯು ಕಾರ್ಯಾಚರಣೆ ಮಾಡಿದ್ರು ಯಾವುದೇ ಪ್ರಯೋಜನ ಕಂಡಿಲ್ಲ ಸಂಬಂಧಪಟ್ಟ ಇಲಾಖೆಯು ಇತ್ತ ಕಡೆ ಗಮನ ಹರಿಸಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಜನಸಾಮಾನ್ಯರಿಗೆ ಉಪಯೋಗ ಆಗುವ ರೀತಿಯಲ್ಲಿ ಪಣಕಜೆ ಪೇಟೆಯ ಹೆದ್ದಾರಿಯ ಬದಿಯಲ್ಲಿ ಸೂಕ್ತ ಜಾಗವನ್ನು ಗುರುತಿಸಿ ಸ್ಥಳಾಂತರಿಸಿ ಮುಂದಿನ ದಿನಗಳಲ್ಲಿ ಉಪಯೋಗವಾಗುವಂತೆ ಮಾಡುವರೇ ಊರವರ ಬೇಡಿಕೆಯಾಗಿದೆ.

Related posts

ಸಹಕಾರ ಸಂಘಗಳ ಅಧಿಕಾರಕ್ಕೆ ತಡೆ ನೀಡಿದ್ದ ಸರಕಾರದ ಸುತ್ತೋಲೆಗೆ ಹೈಕೋರ್ಟ್ ತಡೆಯಾಜ್ಞೆ

Suddi Udaya

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಪ್ರತಿಭಟನೆಗೆ ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ಗಣೇಶ್ ಗೌಡ ನೆಲ್ಲಿಪಲ್ಕೆ ಬೆಂಬಲ

Suddi Udaya

ಎಕ್ಸೆಲ್ ನ ವಿದ್ಯಾರ್ಥಿಗಳು ಜೆ ಇ ಇ ದ್ವಿತೀಯ ಸುತ್ತಿನಲ್ಲೂ ಅಮೋಘ ಸಾಧನೆ

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಂದಿ ಬಳಿ ಇರುವ ಕಾಣಿಕೆ ಡಬ್ಬಿ ಒಡೆದು ಹಣ ಕಳವು

Suddi Udaya

ಕುವೆಟ್ಟು ಗ್ರಾಮ ಪಂಚಾಯತ್ ವಿಶೇಷ ಚೇತನರ ವಿಶೇಷ ಗ್ರಾಮ ಸಭೆ

Suddi Udaya
error: Content is protected !!