39.6 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶಿಶಿಲ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

ಶಿಶಿಲ : ಇಲ್ಲಿಯ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಮಹಾಸಭೆಯ ಅಂಬೇಡ್ಕರ್ ಭವನ ನಾಗನಡ್ಕದಲ್ಲಿ ಇತ್ತೀಚೆಗೆ ನಡೆಯಿತು. ಈ ವೇಳೆ ಶಿಶಿಲ ಗ್ರಾಮ ಸಮಿತಿ ಹಾಗೂ ಯುವ ವೇದಿಕೆ ಶಿಶಿಲ ಇದರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಕುಶಾಲಪ್ಪ ಗೌಡ ಗಾಣದಕೊಟ್ಟಿಗೆ, ಕಾರ್ಯದರ್ಶಿಯಾಗಿ ಭುವನ್ ಗೌಡ ಬರಮೇಲು, ಕೋಶಾಧಿಕಾರಿಯಾಗಿ ರಮೇಶ್ ಗೌಡ ಮುಚ್ಚಿರಡ್ಕ, ಉಪಾಧ್ಯಕ್ಷರಾಗಿ ಕೊರಗಪ್ಪ ಗೌಡ ಪಡ್ಪು , ಸುಂದರ ಗೌಡ ಗುತ್ತು , ಜೊತೆ ಕಾರ್ಯದರ್ಶಿಯಾಗಿ ಸುಬ್ರಾಯ ಗೌಡ ಬದ್ರಿಜಾಲು , ಸಂಘಟನಾ ಕಾರ್ಯದರ್ಶಿಯಾಗಿ ಪುರುಷೋತ್ತಮ ಗೌಡ ಕೊಡಪೊಟ್ಯ ಆಯ್ಕೆಯಾದರು.

ಯುವ ವೇದಿಕೆ ಶಿಶಿಲ ಗ್ರಾಮ ಸಮಿತಿ ಅಧ್ಯಕ್ಷರಾಗಿ ಪ್ರಮೀತ್ ಗೌಡ ಮಂತಾಜೆ , ಕಾರ್ಯದರ್ಶಿಯಾಗಿ ರಾಕೇಶ್ ಗೌಡ ಪಡ್ಪು , ಗೌರವ ಸಲಹೆಗಾರರಾಗಿ ಬಾಬು ಗೌಡ ದೇವಸ, ಸುಬ್ಬಣ್ಣ ಗೌಡ ಬದ್ರಿಜಾಲು, ನರಸಿಂಹ ಗೌಡ, ಮೋಹನ ಗೌಡ ಆಯ್ಕೆಯಾದರು.

ಈ ಸಂದರ್ಭ ವೇದಿಕೆಯಲ್ಲಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಯುವ ವೇದಿಕೆಯ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ, ಕಾರ್ಯದರ್ಶಿ ಸುರೇಶ್ ಕೌಡಂಗೆ, ನರಸಿಂಹ ಗೌಡ, ಮೋಹನ ಗೌಡ, ಊರ ಗೌಡರಾದ ಬಾಬು ಗೌಡ ದೇವಸ, ಸುಬ್ಬಣ್ಣ ಗೌಡ ಬದ್ರಿಜಾಲು ಉಪಸ್ಥಿತರಿದ್ದರು.

Related posts

ಮುಳಿಯ ಜುವೆಲ್ಸ್ ನಲ್ಲಿ “ಕನ್ನಡ ಬದುಕು ಬಂಗಾರ” ಕಾರ್ಯಕ್ರಮ

Suddi Udaya

ಮದುವೆ ಸಮಾರಂಭದಲ್ಲಿ ಮಾದರಿ ಕಾರ್ಯ ವರನ ತಂದೆ ಮುಳುಗು ತಜ್ಞ ರಿಗೆ ಬಂಧು ಮಿತ್ರರಿಂದ ಸನ್ಮಾನ: ತನ್ನ ಪ್ರಾಯ ಲೆಕ್ಕಿಸದೆ ಇನ್ನೊಬ್ಬರ ಪ್ರಾಣ ರಕ್ಷಿಸುವ ಬಂದಾರು ಮಹಮ್ಮದರ ಸೇವೆ ಅನುಕರಣೀಯ :ಕೆ. ಎಂ.ಮುಸ್ತಫ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

Suddi Udaya

ಕಡಿರುದ್ಯಾವರ: ಕಾನರ್ಪ ಪುರುಷರ ಬಳಗದ ವತಿಯಿಂದ ಪುರುಷರ ರಾಶಿ ಪೂಜೆ

Suddi Udaya

ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಜಿಲ್ಲಾವಾರು ಉತ್ತಮ ಸಂಘ ಪ್ರಶಸ್ತಿ ಪ್ರಧಾನ

Suddi Udaya

ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ವತಿಯಿಂದ ಔಟ್ ಸೈಡ್ ವಾಕರ್ ವಿತರಣೆ

Suddi Udaya
error: Content is protected !!