34.2 C
ಪುತ್ತೂರು, ಬೆಳ್ತಂಗಡಿ
April 3, 2025
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಕನ್ಯಾಡಿ ಸೇವಾಭಾರತಿ ಇದರ 20ನೇ ವರ್ಷದ ಸಂಭ್ರಮ: ನೂತನ ಕಟ್ಟಡಕ್ಕೆ ಭೂಮಿ ಪೂಜೆ ಮತ್ತು ಶಿಲಾನ್ಯಾಸ

ಕನ್ಯಾಡಿ: ರಾಷ್ಟ್ರ ಪ್ರಶಸ್ತಿ-2022 ಪುರಸ್ಕೃತ ಸಂಸ್ಥೆ ಸೇವಾಭಾರತಿ ಕನ್ಯಾಡಿ ಇದರ ನೂತನ ಕಟ್ಟಡಕ್ಕೆ ಭೂಮಿ ಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮವು ನ.14ರಂದು ಕನ್ಯಾಡಿ ಸೇವಾನಿಕೇತನದಲ್ಲಿ ನಡೆಯಿತು.

ಬೆಂಗಳೂರು ರಾ.ಸ್ವ. ಸಂಘ ದಕ್ಷಿಣ ಮಧ್ಯಕ್ಷೇತ್ರಿಯ ಕಾರ್ಯವಾಹರಾದ ತಿಪ್ಪೇಸ್ವಾಮಿ ಯವರು ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಸೇವಾಭಾರತಿ ಕನ್ಯಾಡಿ ಇದರ ಖಜಾಂಜಿ ಕೆ. ವಿನಾಯಕ ರಾವ್ ಪ್ರಸ್ತಾವಿಸಿದರು.

ಕಾರ್ಯಕ್ರಮದಲ್ಲಿ ಮಂಗಳೂರು ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅರ್ಜುನ್ ಭಂಡಾರ್ಕಾರ್ ರವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಉಜಿರೆ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಶಾಸಕ ಹರೀಶ್ ಪೂಂಜ, ಧರ್ಮಸ್ಥಳ ಗ್ರಾ.ಪಂ. ಉಪಾಧ್ಯಕ್ಷ ಪಿ. ಶ್ರೀನಿವಾಸ್ ರಾವ್, ಇಂಜಿನಿಯರ್ ಸಂಪತ್ ರತ್ನ ಎಸ್. ರಾವ್, ಬಿ. ಭುಜಬಲಿ ಧರ್ಮಸ್ಥಳ, ವಿಜಯ ಕೊಡವೂರು, ಬೆಳ್ತಂಗಡಿ ಪತ್ರಕರ್ತ ಸಂಘದ ಅಧ್ಯಕ್ಷ ಚೈತ್ರೇಶ್ ಇಳ0ತಿಲ, ಬೆಂಗಳೂರು COMSCORE ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಹಿರಿಯ ವ್ಯವಸ್ಥಾಪಕ ನವೀನ್ ವಜ್ರವೇಲು, ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ಕೃಷ್ಣ ಭಟ್ ಕೊಕ್ಕಡ, ಶ್ರೀಧರ್ ಕೆ.ವಿ., ಕನ್ಯಾಡಿ ಶ್ರೀ ದುರ್ಗಾ ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ಶಾಂತಾ ಪಿ. ಶೆಟ್ಟಿ, ಶ್ರೀಮತಿ ವತ್ಸಲ ಪಿ, ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸೇವಾಭಾರತಿ ಸೇವಾಧಾಮದ ಸಂಚಾಲಕ ಕೆ. ಪುರಂದರ ರಾವ್, ಉಪಾಧ್ಯಕ್ಷ ಗಿರೀಶ್ ರಾವ್ ಕೆ.ಯು., ಕಾರ್ಯದರ್ಶಿ ಬಾಲಕೃಷ್ಣ ನೈಮಿಷ, ಟ್ರಸ್ಟಿಗಳಾದ ಬಿ. ಕೃಷ್ಣಪ್ಪ ಗುಡಿಗಾರ್, ವಿಷ್ಣುಪ್ರಸಾದ್ ತೆಂಕಿಲ್ಲಾಯ ಹಾಗೂ ಸಲಹಾ ಮಂಡಳಿ ಸದಸ್ಯರು, ಪೋಷಕರು, ಸಿಬ್ಬಂದಿಗಳು, ಸ್ವಯಂ ಸೇವಕರು ಉಪಸ್ಥಿತರಿದ್ದರು.

ಸೇವಾಭಾರತಿ ಅಧ್ಯಕ್ಷೆ ಶ್ರೀಮತಿ ಸ್ವರ್ಣಗೌರಿ ಅಧ್ಯಕ್ಷತೆಯನ್ನು ವಹಿಸಿ ಸ್ವಾಗತಿಸಿದರು. ಮಾ. ಸಂಕೇತ್ ಪ್ರಾರ್ಥಿಸಿದರು. ಕಾರ್ಯಕ್ರಮ ವ್ಯವಸ್ಥಾಪಕ ಚರಣ್ ಕುಮಾರ್ ಎಂ. ನಿರೂಪಿಸಿ, ಕು. ಸುಮಾ ವಂದಿಸಿದರು.

Related posts

ಶಿಶಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು ಸಾಮಾಜಿಕ ಪರಿಶೋಧನಾ ಕುರಿತು ಐಇಸಿ ಚಟುವಟಿಕೆ

Suddi Udaya

ವೇಣೂರು: ಪಡ್ಡಂದಡ್ಕ ನೂರುಲ್ ಹುಧಾ ಮಸೀದಿಯಲ್ಲಿ ಸಂಭ್ರಮದ ಈದುಲ್ ಅಧಾ ಆಚರಣೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ನೂತನ ಸದಸ್ಯರಿಗೆ ಓರಿಯೆಂಟೇಶನ್ ಕಾರ್ಯಕ್ರಮ

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ಭಜನಾ ಮಂಡಳಿಯ 46ನೇ ವರ್ಷದ ಭಜನಾ ಸಪ್ತಾಹ

Suddi Udaya

ನಾವರ: 20ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಪೂಜಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಉಜಿರೆ ವಲಯದ ಜ್ಞಾನಶ್ರೀ ಜ್ಞಾನ ವಿಕಾಸ ಕೇಂದ್ರದಲ್ಲಿ ಮಲ್ಲಿಗೆ ಕೃಷಿ ಬಗ್ಗೆ ತರಬೇತಿ ಹಾಗೂ ಮಲ್ಲಿಗೆ ಗಿಡ ವಿತರಣಾ ಕಾರ್ಯಕ್ರಮ

Suddi Udaya
error: Content is protected !!