32.2 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕುವೆಟ್ಟು ಸ.ಉ. ಹಿ.ಪ್ರಾ. ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಕುವೆಟ್ಟು: ಕುವೆಟ್ಟು ಸರಕಾರಿ ಉನ್ನತಿಕರೀಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ.14 ರಂದು ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು.

ಶಾಲಾ ಎಸ್ ಡಿ ಎo ಸಿ ಅಧ್ಯಕ್ಷ ಸಿರಾಜ್ ಚಿಲಿಂಬಿ ಮಕ್ಕಳ ದಿನಾಚರಣೆಯ ಬಗ್ಗೆ ಮಾತನಾಡಿದರು. ಶಾಲಾ ಮುಖ್ಯಮಂತ್ರಿ ಶಿವಾನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕ ಬಾಸ್ಕರ್ ಪ್ರಾಸ್ತಾವಿಕವಾಗಿ ಮಾತಾನಾಡಿದರು. ವೇದಿಕೆಯಲ್ಲಿ ಶಾಲಾ ಹಿರಿಯ ವಿದ್ಯಾರ್ಥಿ ಸoಘದ ಉಪಾಧ್ಯಕ್ಷ ಉಮೇಶ್ ಕುಮಾರ್, ಎಸ್ ಕೆ ಎಸ್ ಎಸ್ ಎಫ್ ಮದ್ದಡ್ಕ ಘಟಕ ಅಧ್ಯಕ್ಷ ಇಲ್ಯಾಸ್ ಚಿಲಿoಬಿ, ಕುವೆಟ್ಟು ಗ್ರಾಮ ಪಂ. ಸದಸ್ಯರಾದ ಶಾಲಿನಿ ಪಯ್ಯೋಟ್ಟು. ಆಮೀನ ಮದ್ದಡ್ಕ, ಶಾಲಾ ಎಸ್ ಡಿ ಎo ಸಿ ಉಪಾಧ್ಯಕ್ಷೆ ಲಾವಣ್ಯ ಶೆಟ್ಟಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಈ ಸoದರ್ಭದಲ್ಲಿ ಎಸ್ ಕೆ ಎಸ್ ಎಸ್ ಎಫ್ ಮದ್ದಡ್ಕ ಘಟಕದ ವತಿಯಿoದ ಕೊಡುಗೆಯಾಗಿ ನೀಡಿದ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ಬಹುಮಾನಗಳು ಹಾಗೂ ಕೆ ಎ ರೋಹಿಣಿ ನಿವೃತ ಶಿಕ್ಷಕರು ಮoಗಳೂರು ಹಾಗೂ. ವ್ಯೆ ಕೆ ಬಜಾರ್ ಮದ್ದಡ್ಕ ಇವರು ನೀಡಿದ ಬಹುಮಾನಗಳನ್ನು ಮಕ್ಕಳ ದಿನಾಚರಣೆಯ ಪ್ರಯಕ್ತ ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಶಾಲಾ ವಿಧ್ಯಾರ್ಥಿಗಳು ಕಾರ್ಯಕ್ರಮನ್ನು ನಡೆಸಿಕೊಟ್ಟರು. ಶಾಲಾ ಶಿಕ್ಷಕ ವೃoದ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

Related posts

ಫ್ರೆಂಡ್ಸ್ ಬದ್ಯಾರು ತಂಡ ಸದಸ್ಯರಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರಾಜೇಶ್ ರವರಿಗೆ ಧನಸಹಾಯ

Suddi Udaya

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ 17ನೇ ವರ್ಷದ ಸಾಮೂಹಿಕ ವಿವಾಹ: ಅರ್ಜಿ ಆಹ್ವಾನ

Suddi Udaya

ಪಡಂಗಡಿ:ಶ್ರೀ ಕ್ಷೇ.ಧ.ಗ್ರಾ. ಯೋಜನೆ ಬಿ.ಸಿ ಟ್ರಸ್ಟ್ ಗುರುವಾಯನಕರೆ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ತಾಲೂಕು ಮಟ್ಟದ ಪದಾಧಿಕಾರಿಗಳ ಸಮಾವೇಶ

Suddi Udaya

ಧರ್ಮಸ್ಥಳ: ಟಾಟಾ ಸುಮೋ ಹಾಗೂ ಸ್ಕೂಟಿ ನಡುವೆ ರಸ್ತೆ ಅಪಘಾತ: ಸ್ಕೂಟಿ ಸವಾರ ಗಂಭೀರ ಗಾಯ

Suddi Udaya

ನಾಲ್ಕೂರು: ಪಾಲೆದಡಿ ಸಂಕಪ್ಪ ಪೂಜಾರಿ ನಿಧನ

Suddi Udaya

ಭಾರತೀಯ ಜೈನ್ ಮಿಲನ್ ನ ಕೆನಡಾ ಘಟಕವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಂದ ವೆಬಿನಾರ್ ಮೂಲಕ ಉದ್ಘಾಟನೆ

Suddi Udaya
error: Content is protected !!