23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ಭಜನಾ ಮಂಡಳಿ ಭಜನಾ ಸಪ್ತಾಹದ ಧಾರ್ಮಿಕ ಸಭೆ

ಮಚ್ಚಿನ: ಶ್ರೀ ಅನಂತೇಶ್ವರ ಸ್ವಾಮಿ ಭಜನಾ ಮಂಡಳಿ ಬಳ್ಳಮಂಜ ಇದರ 47ನೇ ವರ್ಷದ ಭಜನಾ ಸಪ್ತಾಹದ ಧಾರ್ಮಿಕ ಸಭಾ ಕಾರ್ಯಕ್ರಮ ನ 13ರಂದು ನಡೆಯಿತು.

ಧಾರ್ಮಿಕ ಉಪನ್ಯಾಸಕರಾಗಿ ಸುವರ್ಣ ಪ್ರತಿಷ್ಠಾನ ಬೆಳ್ತಂಗಡಿ ಇದರ ಅಧ್ಯಕ್ಷ ಬಿ ಸಂಪತ್ ಸುವರ್ಣ ಮಾತನಾಡಿ. ಭಕ್ತಿಯಿಂದ ದೇವರನ್ನು ಬಜಿಸಿದರೆ ಭಗವಂತ ಒಳಿಯಲು ಸಾಧ್ಯ. ಭಗವಂತ ಭಜನೆಗೆ ಮಾತ್ರ ಒಳಿಯಲು ಸಾಧ್ಯ. ಭಾವ ರಾಗ ತಾಳ ಅದೇ ಭಾರತ ಭಾರತ ಎಂದರೆ ದೇವರು ಹಿಂದೂ ಧರ್ಮದ ಪುಣ್ಯದ ಭೂಮಿ ನಮ್ಮದು ಎಂದರು. 47 ವರ್ಷ ಸುದೀರ್ಘ ಸೇವೆ ಸಲ್ಲಿಸಿದ ಅನಂತೇಶ್ವರ ಭಜನಾ ಮಂಡಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಶರರಾದ ಡಾ| ಹರ್ಷ ಸಂಪಿಗೆತ್ತಾಯ, ಮಂಡಳಿಯ ಅಧ್ಯಕ್ಷ ಪುಷ್ಪಕ್ ರಾವ್ ಉಪಸ್ಥಿತರಿದ್ದರು.

ಭಜನಾ ಮಂಡಳಿಯ ಕಾರ್ಯದರ್ಶಿ ಯುವರಾಜ್ ಬರಮೇಲು ವಾರ್ಷಿಕ ವರದಿ ಮಂಡಿಸಿದರು. ಬಾಲಕೃಷ್ಣ ಭಟ್ ಸ್ವಾಗತಿಸಿದರು. ಹರ್ಷಬಳ್ಳಮಂಜ ಕಾರ್ಯಕ್ರಮ ನಿರೂಪಿಸಿದರು. ಮಚ್ಚಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಪ್ರೌಢಶಾಲಾ ವಿದ್ಯಾರ್ಥಿ ಹಾಗೂ ವಿದ್ಯಾಸಾಗರ ಸಿ ಬಿ ಯಸ್ ಇ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು

ನ.16 ರ ವರೆಗೆ ಭಜನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು 48 ಗಂಟೆಗಳ ಅಖಂಡ ಭಜನಾ ಸೇವೆಯೊಂದಿಗೆ ದೇವರಿಗೆ ರಂಗಪೂಜೆ ದೀಪೋತ್ಸವದೊಂದಿಗೆ ನಡೆಯಲಿದೆ.

ವರದಿ: ಹರ್ಷ ಬಳ್ಳಮಂಜ

Related posts

ಮನೆಯ ಪರಿಸರದಲ್ಲಿ ಅಡ್ಡಾಡುತ್ತಿದ್ದ ಬೃಹದಾಕಾರದ ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟ ನಾಗರಿಕರು

Suddi Udaya

ಅನಾರು : ಶ್ರೀ ದುರ್ಗಾಪರಮೇಶ್ವರೀ ದೇವಿಯ ವರ್ಷಾವಧಿ ಜಾತ್ರಾ ಮಹೋತ್ಸವ: “ಅನಾರ್ ಡ್ ಓಂಕಾರ್” ಆಲ್ಬಮ್ ಸಾಂಗ್ ಬಿಡುಗಡೆ

Suddi Udaya

ಶ್ರೀರಾಮ ದೇವರ ಪ್ರತಿಷ್ಠೆ ಮತ್ತು ಲೋಕಾರ್ಪಣೆ: ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ರಾಮನಾಮ ತಾರಕ ಮಂತ್ರ ಹೋಮ

Suddi Udaya

ವಾಣಿ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪುರಸ್ಕಾರ

Suddi Udaya

ಗೌಸಿಯಾ ಮುಸ್ಲಿಂ ವೆಲ್ಫೇರ್ ಎಸೋಸಿಯೇಶನ್ ಮಹಾಸಭೆ: ನೂತನ ಅಧ್ಯಕ್ಷರಾಗಿ ಅಯ್ಯೂಬ್ ಸಅದಿ, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಮುರ ಆಯ್ಕೆ

Suddi Udaya

ಜಾನಪದ ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್ ವಿಧಿವಶ

Suddi Udaya
error: Content is protected !!