23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಕ್ಕಡ : ಶ್ರೀ ರಾಮ‌ ಸೇವಾ ಮಂದಿರಕ್ಕೆ ಅಡುಗೆ ಪಾತ್ರೆ, ಸಾಮಾಗ್ರಿಗಳ ಕೊಡುಗೆ

ಕೊಕ್ಕಡ : ಶ್ರೀ ರಾಮ ಸೇವಾ ಟ್ರಸ್ಟ್ ಕೊಕ್ಕಡ ಇದರ ಅಡಿಯಲ್ಲಿ ಕಾರ್ಯಚರಿಸುತ್ತಿರುವ ಶ್ರೀ ರಾಮ ಸೇವಾ ಮಂದಿರಕ್ಕೆ ಕಡಿಮೆ ಖರ್ಚು – ವೆಚ್ಚಗಳಲ್ಲಿ ಸುಸೂತ್ರವಾಗಿ ಸಭೆ – ಸಮಾರಂಭಗಳನ್ನು ನಡೆಯಲು ಅಲ್ಲಿಗೆ ಬೇಕಾದ ಮೂಲಭೂತ ಸೌಕರ್ಯಗಳ ಕೊರತೆಯನ್ನು ಅರಿತು ದಾನಿಗಳ ಬಳಿ ಮನವಿಯನ್ನು ಮಾಡಿದಾಗ ಸುಮಾರು 500 ಜನರಿಗೆ ಬೇಕಾಗುವ ರೂ. 1 ಲಕ್ಷ ಮೌಲ್ಯದ ಅಡುಗೆ ಮಾಡುವ ಪಾತ್ರೆಗಳನ್ನು ಪೂವಾಜೆ ಕುಟುಂಬದ ಸದಸ್ಯರು ಆದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಿಗೆ ತನ್ನದೇ ಅದಾ ಕೊಡುಗೆಗಳನ್ನು ನೀಡುತ್ತಾ ಬರುತ್ತಿರುವ ನಿವೃತ್ತ ಅಧ್ಯಾಪಕರಾದ ಶ್ರೀಮತಿ ಮತ್ತು ಕುಂಞಪ್ಪ ಗೌಡ ಪೂವಾಜೆ ಕೊಲ್ಲಾಜೆಪಳಿಕೆ ಇವರು ಶ್ರೀ ರಾಮ ಸೇವಾ ಟ್ರಸ್ಟ್ ಗೆ ಹಸ್ತಾಂತರಿಸುತ್ತಾರೆ.

ಹಾಗೆಯೇ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಿಗೆ ತನ್ನದೇ ಆದಾ ಕೊಡುಗೆಯನ್ನು ನೀಡುತ್ತಿರುವ ನಿವೃತ್ತ ಅಧ್ಯಾಪಕ ಬಜ ಶ್ರೀ ಗಣೇಶ್ ಐತಾಳ್ ಇವರು ದೊಡ್ಡ ಗ್ಯಾಸ್ ಸ್ಟವ್ ನ್ನು ನೀಡಿರುತ್ತಾರೆ, ಸಚಿನ್ ಸಾಲಿಯಾನ್ ವೈನ್ಸ್ ಇವರು ಬಾವಿಗೆ ರಕ್ಷಾ ಕವಚವನ್ನು ಒದಗಿಸಿರುತ್ತಾರೆ, ಮೆಸ್ಕಾಂ ಸಿಬ್ಬಂದಿಗಳು, ಕೃಷಿ ಪತ್ತಿನ ಸಹಕಾರಿ ಸಂಘ ಕೊಕ್ಕಡ ಇಲ್ಲಿಯ ಸಿಬ್ಬಂದಿಗಳು ಊಟದ ತಟ್ಟೆಗಳನ್ನು, ಹಿಂದೂ ಶಕ್ತಿ ಆಟೋ ಚಾಲಕ – ಮಾಲಕರ ಸಂಘದ ವತಿಯಿಂದ ಗೊದ್ರೇಜ್, ಶ್ರೀನಾಥ್ ಬಡೆಕೈಲು ಪ್ರಕೃತಿ ಇಂಜಿನಿಯರಿಂಗ್ ವರ್ಕ್ಸ್‌ ಇವರು ಸಿಂಗಲ್ ಬರ್ನರ್ ಸ್ಟವ್ ನ್ನು, ಹೇಮಂತ್ ಕುಮಾರ್ ಶ್ರೀ ದುರ್ಗಾಪರಮೇಶ್ವರಿ ಫ್ಲವರ್ ಸ್ಟಾಲ್ ಕೊಕ್ಕಡ ಇವರು ಮಿಕ್ಸರ್ ಗ್ರೈಂಡರನ್ನು, ಅಶೋಕ್ ಭಿಡೆ ಪಾಕತಜ್ಞರು ಇವರು ಗ್ರೈಂಡರನ್ನು ನೀಡಿರುತ್ತಾರೆ ಹಾಗೂ ಕೆಲವು ವೈಯಕ್ತಿಕ ದಾನಿಗಳಿಂದ ಶ್ರೀ ರಾಮ ಸೇವಾ ಮಂದಿರಕ್ಕೆ ಅಗತ್ಯವಾಗಿ ಬೇಕಾಗಿರುವ ವಸ್ತುಗಳನ್ನು ನೀಡಿರುತ್ತಾರೆ.


ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ರಮಾನಂದ ಭಟ್ ಇವರು ಶ್ರೀ ದೇವರಲ್ಲಿ ಪ್ರಾರ್ಥಿಸಿ ದಾನಿಗಳು ನೀಡಿರುವ ವಸ್ತುಗಳನ್ನು ಶ್ರೀ ರಾಮ ಸೇವಾ ಟ್ರಸ್ಟ್ ಗೆ ಹಸ್ತಾಂತರಿಸಲಾಯಿತು.

ಈ ವೇಳೆ ದಾನಿಗಳಿಗೆ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.


ಈ ಸಂಧರ್ಭದಲ್ಲಿ ದಾನಿಗಳಾದ ಶ್ರೀಮತಿ ಮತ್ತು ಕುಂಞಪ್ಪ ಗೌಡ ಪೂವಾಜೆ ಕೊಲ್ಲಾಜೆಪಳಿಕೆ ದಂಪತಿಗಳು, ಗಣೇಶ್ ಐತಾಳ್ ಬಜ, ಅಶೋಕ್ ಭಿಡೆ, ಹಿರಿಯರಾದ ಕೃಷ್ಣ ಭಟ್ ಹಿತ್ತಿಲು, ಕೊಕ್ಕಡ, ಈಶ್ವರ ಭಟ್ ಹಿತ್ತಿಲು, ಟ್ರಸ್ಟ್ ನ ನಿಕಟಪೂರ್ವ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಟ್ರಸ್ಟ್ ನ ಅಧ್ಯಕ್ಷ ಬಾಲಕೃಷ್ಣ ನೈಮಿಷ, ಟ್ರಸ್ಟ್ ನ ಕೋಶಾಧಿಕಾರಿ ಪಣಿರಾಜ್ ಜೈನ್ ಕೊಕ್ಕಡ, ವಿ.ಹಿಂ.ಪ ಅಧ್ಯಕ್ಷರಾದ ಪುರುಷೋತ್ತಮ ಕೆ ಕೊಕ್ಕಡ, ಡಾ. ಗಣೇಶ್ ಪ್ರಸಾದ್ ಅಂಬಿಕಾ ಕ್ಲಿನಿಕ್ ಕೊಕ್ಕಡ, ಡಾ. ಮೋಹನ್ ದಾಸ್ ಗೌಡ ಹಿರಿಯ ವೈದ್ಯರು ಕೊಕ್ಕಡ, ಶಾಂತಪ್ಪ ಮಡಿವಾಳ ಕೊಕ್ಕಡ, ಪುರಂದರ ಕಡೀರ ಹಾಗೂ ಶ್ರೀ ರಾಮ ಸೇವಾ ಟ್ರಸ್ಟ್ ನ ಮತ್ತು ನಗರ ಭಜನಾ ಸಪ್ತಾಹದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ 12 ತೆಂಗಿನಕಾಯಿ ಗಣಹೋಮ ಮತ್ತು ಚಂಡಿಕಾ ಹೋಮ

Suddi Udaya

ಧರ್ಮಸ್ಥಳ: ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಗ್ರಾಮ ಇದರ ವಸ್ತು ಪ್ರದರ್ಶನ ಮಳಿಗೆ ಸಹಾಯಕ ಕಮಿಷನರ್ ಗಿರೀಶ್ ನಂದನ್ ರವರಿಂದ ಉದ್ಘಾಟನೆ

Suddi Udaya

ಕಲ್ಮಂಜ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಧ್ಯಾನ ಕಾರ್ಯಕ್ರಮ

Suddi Udaya

ಉಜಿರೆ ಶ್ರೀ ಧ.ಮಂ. ಎಜ್ಯುಕೇಶನಲ್ ಸೊಸೈಟಿಯಿಂದ 33 ಮಂದಿ ನಿವೃತ್ತ ಸಿಬ್ಬಂದಿಗಳಿಗೆ ಸನ್ಮಾನ ಮತ್ತು ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ

Suddi Udaya

ಬಿಜೆಪಿ ಮಹಿಳಾ ಮೋರ್ಚಾದಿಂದ ಉಜಿರೆಯಲ್ಲಿ ದ್ವಿಚಕ್ರ ವಾಹನ ರ್‍ಯಾಲಿ :

Suddi Udaya

ಧರ್ಮಸ್ಥಳ ಶ್ರೀ ಮಂ.ಅ.ಪ್ರೌ. ಶಾಲೆಯಲ್ಲಿ ‘ಭಾಷಾ ವಿಷಯದ ಶಿಕ್ಷಕರುಗಳ ಕಾರ್ಯಾಗಾರ

Suddi Udaya
error: Content is protected !!