24.4 C
ಪುತ್ತೂರು, ಬೆಳ್ತಂಗಡಿ
May 19, 2025
Uncategorized

ಶಿಶಿಲ: ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಬಸದಿ ಶ್ರೀ ಕ್ಷೇತ್ರ ಚಂದ್ರಪುರ ಶಿಶಿರದಲ್ಲಿ ನೋಂಪಿ

ಶಿಶಿಲ: ಪರಮಪೂಜ್ಯ ಸ್ವಸ್ತಿ ಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಜೈನ ಮಠ ಕಾರ್ಕಳ ಇವರ ಆಶೀರ್ವಾದದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಡಿ. ವೀರೇಂದ್ರ ಹೆಗ್ಡೆಯವರು ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರ ಪ್ರೇರಣೆ, ಮಾರ್ಗದರ್ಶನದೊಂದಿಗೆ ಊರ ಪರ ಊರ ಸಹೃದಯ ಧರ್ಮಾಭಿಮಾನಿ ಸದ್ಧರ್ಮ ಬಂಧುಗಳ ಸಹಕಾರದೊಂದಿಗೆ ಜೀರ್ಣೋದ್ಧಾರಗೊಂಡು ಪಂಚ ಕಲ್ಯಾಣಗೊಂಡ ನೂರಾರು ವರ್ಷಗಳ ಇತಿಹಾಸವಿರುವ ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿ. ಭಗವಾನ್ ೧೦೦೮ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿ ಇಂದು ಶುಕ್ರವಾರದಂದು ನೊಂಪಿಯನ್ನು ಆಡಳಿತ ಮಂಡಳಿಯವರ ಸಹಕಾರದೊಂದಿಗೆ ನೆರವೇರಿಸಿದರು

‌ಹತ್ತಾರು ವರ್ಷಗಳ ನಂತರ ಮತ್ತೆ ನಮ್ಮ ಬಸದಿಯಲ್ಲಿ ನೋಂಪಿಯನ್ನು ನೋಡುವ ಸೌಭಾಗ್ಯ ನಮ್ಮದಾಯಿತು. ಭೋಜನದ ವ್ಯವಸ್ಥೆಯನ್ನು ಶ್ರೀಮತಿ ರೇಷ್ಮಾ ಮತ್ತು ಪಣಿರಾಜ್ ಜೈನ್ ವಹಿಸಿಕೊಂಡಿದ್ದರು. ಎಲ್ಲಾ ವ್ಯವಸ್ಥೆಯನ್ನು ಡಾ. ಜಯಕೀರ್ತಿ ಜೈನ್ ಧರ್ಮಸ್ಥಳ ರವರ ನೇತೃತ್ವದಲ್ಲಿ ಸಂತೋಷ್ ಕುಮಾರ್ ವಳಂಬಲ, ಭುವನ್ ಜೈನ ಧರ್ಮಸ್ಥಳ, ಶ್ರೀಮತಿ ಸುರಭಿ ಜಯಕುಮಾರ್ ಕಲ್ಲುಗುಡ್ಡೆ ಪಣಿರಾಜ್ ಜೈನ್ ಕೊಕ್ಕಡ ಮುಂತಾದವರು ಸಹಕರಿಸಿದ್ದರು.
ಪುಷ್ಪರಾಜ ಇಂದ್ರ , ಅರಹಂತ ಇಂದ್ರ ನೋಂಪಿ ಪೂಜೆಯನ್ನು ನೆರವೇರಿಸಿದರು.

Related posts

ಫೆ.26 ಬಳಂಜದಲ್ಲಿ ಗುರುಪೂಜೆ, ನೂತನ ಅಡುಗೆ ಕೊಠಡಿ ಉದ್ಘಾಟನೆ- ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಉಜಿರೆ ಅರಿಪ್ಪಾಡಿ ಮಠ ಬಾಲಕೃಷ್ಣ ಅರಿಪ್ಪಾಡಿತ್ತಾಯ ನಿಧನ

Suddi Udaya

ಮಾಚಾರಿನಲ್ಲಿ ಮಹಿಳೆಯೋರ್ವರ ಶವ ಬಾವಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ: ಸ್ಥಳಕ್ಕೆ ಪೊಲೀಸರ‌ ಆಗಮನ ಮುಂದುವರಿದ ತನಿಖೆ

Suddi Udaya

ಹಾಡುಹಗಲೇ ಮುಂಡಾಜೆಯಲ್ಲಿಕಾಣಿಕೆ ಡಬ್ಬಿಯಿಂದ ಹಣ ಕಳ್ಳತನ

Suddi Udaya

5ನೇ ಕರ್ನಾಟಕ ರಾಜ್ಯ ಹಣಕಾಸು ಆಯೋಗದೊಂದಿಗೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘದ ನಿಯೋಗದ ಸಭೆ

Suddi Udaya

ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾತ್ಮಕ ವಿಡಿಯೋ: ಯುವಕನ ಮೇಲೆ ಪ್ರಕರಣ ದಾಖಲು

Suddi Udaya
error: Content is protected !!