23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಆರ್‌.ಆರ್‌.ನಗರದಲ್ಲಿ ಕೈಮಾರದ ಆರನೇ ಶಾಖೆ ಲೋಕಾರ್ಪಣೆ: ಡಾ.ಪದ್ಮಪ್ರಸಾದ ಅಜಿಲ, ನಟರಾದ ಗಣೇಶ್‌, ದಿಗಂತ್‌ ಭಾಗಿ

ಬೆಂಗಳೂರಿನ ರಾಜರಾಜೇಶ್ವರಿ ನಗರದ ಸಾಯಿ ಪ್ಲಾಜಾದ ಎರಡನೇ ಮಹಡಿಯಲ್ಲಿ ಕೈಮಾರ ವೆಲ್‌ನೆಟ್‌ ಸ್ಪಾ ಸೆಲೂನ್‌ನ ಆರನೇ ಶಾಖೆಯನ್ನು ನ.15ರಂದು ಶುಕ್ರವಾರದಂದು ಅಳದಂಗಡಿ ಅರಮನೆಯ ತಿಮ್ಮಣ್ಣಾರಸರಾದ ಡಾ.ಪದ್ಮಪ್ರಸಾದ ಅಜಿಲ ಅವರ ದಿವ್ಯಹಸ್ತ ಮತ್ತು ಖ್ಯಾತ ಚಲನಚಿತ್ರ ನಟ ಗೋಲ್ಡನ್‌ ಸ್ಟಾರ್‌ ಗಣೇಶ್‌ ಹಾಗೂ ಇನ್ನೊರ್ವ ಖ್ಯಾತ ನಟ ದಿಗಂತ್‌ ಅವರ ಸಮ್ಮುಖದಲ್ಲಿ ಲೋಕಾರ್ಪಣೆಗೊಂಡಿತು.

ಈ ಸಮಾರಂಭದಲ್ಲಿ ಬೆಂಗಳೂರಿನ ಖ್ಯಾತ ಉದ್ಯಮಿಗಳು, ರಾಜಕಾರಣಿಗಳು, ಬೇರೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಗಣ್ಯರು ಭಾಗವಹಿಸಿ ಶುಭ ಕೋರಿದರು.

ಉದ್ಯಮದಲ್ಲಿ ಪಾಲುದಾರರಾಗಿರುವ ಸುರೇಂದ್ರ ಹೆಗ್ಡೆ, ದೇವೇಂದ್ರ ಹೆಗ್ಡೆ ಕೊಕ್ರಾಡಿ ಮತ್ತು ರತನ್‌ ಜೈನ್‌ ಮತ್ತು ಅವರ ಕುಟುಂಬಸ್ಥರು, ಬಂಧುಮಿತ್ರರು ಪಾಲ್ಗೊಂಡು, ಬಂದ ಅತಿಥಿಗಳನ್ನು ಸತ್ಕರಿಸಿ ಸಹಕಾರ ಕೋರಿದರು.

Related posts

ಯೋಗಾಸನ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಕೊಕ್ರಾಡಿ ಸ.ಪ್ರೌ. ಶಾಲಾ ಶಿಕ್ಷಕಿ, ಅಕ್ಕಮ್ಮ ರವರಿಗೆ ಶಾಸಕ ಹರೀಶ್ ಪೂಂಜರಿಂದ ಅಭಿನಂದನೆ

Suddi Udaya

ಭಾರತಿಯ ಜನತಾ ಪಾರ್ಟಿಯ ಬೆಳ್ತಂಗಡಿ ಮಂಡಲದಿಂದ ನಾರವಿ ಕುತ್ಲೂರು ಗ್ರಾಮದ ವಿಕಾಸ ಹಬ್ಬ

Suddi Udaya

ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಧ್ಯಂತರ ಕ್ಷೇತ್ರ ಪ್ರತಿನಿಧಿ ಸಭೆ, ನೂತನ ಸಮಿತಿ ರಚನೆ

Suddi Udaya

ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಸಾಧಕರಿಗೆ ಸನ್ಮಾನ

Suddi Udaya

ಕನ್ಯಾಡಿ: ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯುತ್ತಮ ಅಂಕ ಪಡೆದ ಯಕ್ಷಿತಾರಿಗೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಸನ್ಮಾನ

Suddi Udaya

ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಟಿಡೊಂಜಿ ದಿನ

Suddi Udaya
error: Content is protected !!