24.4 C
ಪುತ್ತೂರು, ಬೆಳ್ತಂಗಡಿ
April 4, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉದ್ಯಮಿ ಎ.ಸಿ.ಕುರಿಯನ್ ರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಕೊಕ್ಕಡ: ಉದ್ಯಮಿ ಎ.ಸಿ. ಕುರಿಯನ್ ಮನೆ ಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ನ.14 ರಂದು ಪ್ರಕರಣ ದಾಖಲಾಗಿದೆ.


ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ನ.13ರಂದು ಸರಕಾರಿ ಜಾಗದಲ್ಲಿ ನಿರ್ಮಿಸಿದ್ದ ಮನೆಯನ್ನು ಅಧಿಕಾರಿಗಳು ತೆರವುಗೊಳಿಸಿದ ಘಟನೆಯ ಬಳಿಕ ವೃದ್ಧ ದಂಪತಿಯ ಪುತ್ರಿ ಆರೋಪ ಮಾಡಿದ್ದು, ಇದೀಗ ಈ ಕುರಿತು ಪ್ರಕರಣ ದಾಖಲಿಸಲಾಗಿದೆ.


ಶಿಬಾಜೆ ಗ್ರಾಮದ ಅಕೋಟೇಜಲ್ ಎಂಬಲ್ಲಿ ಎ.ಸಿ. ಕುರಿಯನ್ ಮನೆಯಲ್ಲಿ ಮಹಿಳೆ ಹಿಂದೆ ಕೆಲಸ ಮಾಡುತ್ತಿದ್ದು, ಈ ವೇಳೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಮಹಿಳೆಯು ತನ್ನ ಪತಿಯೊಂದಿಗೆ ಕುರಿಯನ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದು, ದಂಪತಿಯ ವಾಸಕ್ಕೆ ಕುರಿಯನ್ ಮನೆ ನೀಡಿದ್ದರು. ಈ ವೇಳೆ ತಾನಿದ್ದ ಕೊಠಡಿಗೆ ಚಹಾ, ತಿಂಡಿ ತರಲು ಹೇಳುತ್ತಿದ್ದ ಕುರಿಯನ್, ಮೈಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. 2020ರ ಜನವರಿ 1ರಿಂದ ಡಿಸೆಂಬರ್ 31ರ ನಡುವೆ ಘಟನೆ ನಡೆದಿದ್ದು, ನಾಲ್ಕು ವರ್ಷಗಳ ಬಳಿಕ ಇದೀಗ ನ.14ರಂದು ದೂರು ನೀಡಲಾಗಿದೆ. ಮಾನಕ್ಕೆ ಅಂಜಿ ತಡವಾಗಿ ದೂರು ದಾಖಲಿಸಲಾಗಿದೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.


ಲೈಂಗಿಕ ಕಿರುಕುಳ ನೀಡಿದ್ದರಿಂದ ನೊಂದಿದ್ದ ಮಹಿಳೆ ಕೆಲಸ ಬಿಟ್ಟಿದ್ದರು. ಆಗ ಕುರಿಯನ್, ಈ ಭೂಮಿಯಲ್ಲಿ ಇರಲು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದರು. ಮಹಿಳೆಯ ಹೆತ್ತವರು ಕೊಕ್ಕಡ ಸಮೀಪದ ಕಾಪಿನಬಾಗಿಲು ಎಂಬಲ್ಲಿ ಸರ್ವೇ ನಂಬರ್ 123ರಲ್ಲಿ ಮನೆ ನಿರ್ಮಿಸಿ ವಾಸವಿದ್ದರು. ನ.13ರಂದು ಕಡಬ ತಹಶೀಲ್ದಾರ್, ಕಡಬ ಮೆಸ್ಕಾಂ ಎಇ, ಕಂದಾಯ ನಿರೀಕ್ಷಕರು, ಜೆಸಿಬಿ ಚಾಲಕ ಮುಂತಾದವರು ಸೇರಿ ಜೆಸಿಬಿ ಮುಖಾಂತರ ಪೊಲೀಸರ ಸಮ್ಮುಖದಲ್ಲಿ ಮನೆಯಲ್ಲಿ ಧ್ವಂಸಗೊಳಿಸಿದ್ದಾರೆ. ನನ್ನ ವಿರುದ್ಧದ ದ್ವೇಷದ ಕಾರಣ ನನ್ನ ತಂದೆ – ತಾಯಿಯ ಮನೆ ಧ್ವಂಸ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ಕುವೆಟ್ಟು, ಓಡಿಲ್ನಾಳ ಗ್ರಾಮದ ಕಾಂಗ್ರೆಸ್ ಬೂತ್ ಸಮಿತಿಯ ಸಭೆ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದಲ್ಲಿ ಸರ್ವಜ್ಞ ಜಯಂತಿ ಆಚರಣೆ:

Suddi Udaya

ಮದ್ದಡ್ಕದಿಂದ ಬಸ್ಸು ಇಲ್ಲದೆ ಪ್ರಯಾಣಿಕರು ನೇತಾಡಿ‌ಕೊಂಡು ಹೋಗುವ ಪರಿಸ್ಥಿತಿ: ಅಧಿಕಾರಿಗಳು ಸಮಸ್ಯೆ ಬಗೆಹರಿಸುವಂತೆ ಜನರ ಮನವಿ

Suddi Udaya

ಬಂದಾರು ಗ್ರಾಮದ ಪೆರ್ಲ-ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನ: ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಮಾಲೋಚನೆ ಸಭೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಿವೃತ್ತರಾದ ಡಾ| ಎಲ್.ಹೆಚ್ ಮಂಜುನಾಥ್ ಅವರಿಗೆ ಸನ್ಮಾನ

Suddi Udaya

ಶಿಬಾಜೆ ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕೈರಂಡ ಶ್ರೀಮತಿ ಸಂಗೀತಾ ಮತ್ತು ಸನತ್ ಕುಮಾರ್ ದಂಪತಿ ಹಾಗೂ ಮನೆಯವರಿಂದ ಬೆಳ್ಳಿಯ ಮಂಟಪ ಸಮರ್ಪಣೆ

Suddi Udaya
error: Content is protected !!