24.4 C
ಪುತ್ತೂರು, ಬೆಳ್ತಂಗಡಿ
April 4, 2025
Uncategorized

ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ಪ್ರಕ್ರಿಯೆಲ್ಲಿ ಲೋಪತಹಶೀಲ್ದಾರ್-ತಾ.ಪಂ ಇ.ಒಗೆ ದೂರು


ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಳ್ತಂಗಡಿ ತಾಲೂಕು ಶಾಖೆಯ 2024-29ನೇ ಅವಧಿಯ ಕಾರ್ಯಕಾರಿ ಸಮಿತಿ ಚುನಾವಣೆ ಪ್ರಕ್ರಿಯೆಲ್ಲಿ ಲೋಪವಾಗಿರುವ ಬಗ್ಗೆ ನ.12ರಂದು ತಹಶೀಲ್ದಾರ್ ಬೆಳ್ತಂಗಡಿ ಹಾಗೂ ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು
ನೀಡಲಾಗಿದೆ.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಎಸ್ ಧನಂಜಯ, ಶಿಕ್ಷಕಿ ಆರತಿ, ಸಮಾಜ ಕಲ್ಯಾಣ ಇಲಾಖೆ ವಾರ್ಡನ್ ಶ್ರೀಮತಿ ಹೇಮಲತಾ, ಹಿರಿಯ ಪಶುವೈದ್ಯಕೀಯ ಪರೀಕ್ಷಕ ಕೆ. ಸದಾಶಿವ ಭಟ್, ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಬೆರಳಚ್ಚುಗಾರ ಆಶಾ ಪೂರ್ಣೀಮಾ, ಧರ್ಮಸ್ಥಳ ಜಾನುವಾರು ಅಧಿಕಾರಿ ಪ್ರಶಾಂತ್ ಕುಮಾರ್, ಶಿಕ್ಷಕ ಧರಣೇಂದ್ರ ಕೆ. ಇವರು ಈ ದೂರನ್ನು ನೀಡಿದ್ದಾರೆ.
ಸರಕಾರಿ ನೌಕರರ ತಾಲೂಕು ಸಂಘದ ಚುನಾವಣೆಯ ಮಾಹಿತಿಯನ್ನು ಪೂರ್ವಭಾವಿಯಾಗಿ ಪತ್ರಿಕೆ, ಸಂಘದ ಅಧಿಕೃತ ವಾಟ್ಸಾಪ್ ಗ್ರೂಪ್ ಮೂಲಕ ತಾಲೂಕಿನ ಎಲ್ಲಾ ಇಲಾಖೆಗಳ ಮುಖ್ಯಸ್ಥರ ಮತ್ತು ಅಧಿಕಾರಿಗಳ ಗಮನಕ್ಕೆ ತಂದಿರುವುದಿಲ್ಲ, ಸರಕಾರಿ ನೌಕರರ ವೇತನದಲ್ಲಿ ಪ್ರತಿ ವರ್ಷ ಸರಕಾರಿ ನೌಕರರ ಸಂಘದ ಸದಸ್ಯತನಕ್ಕಾಗಿ ರೂ. 200 ಕಟಾವಣೆಯಾಗುತ್ತಿದ್ದರೂ ಸಂಘದ ಮತದಾರರ ಪಟ್ಟಿಯಲ್ಲಿ ನೂರಾರು ಮಂದಿಯ ಹೆಸರನ್ನು ದುರುದ್ದೇಶಪೂರಕವಾಗಿ ಕೈಬಿಡಲಾಗಿದೆ. ಮತದಾರರ ಪಟ್ಟಿಯ ಕರಡು ಪ್ರತಿಯನ್ನು ಪ್ರಕಟಿಸದೆ ಆಕ್ಷೇಪಣೆಗಳ ಬಗ್ಗೆ, ತಿದ್ದುಪಡಿಗಳ ಬಗ್ಗೆ ಅವಕಾಶ ನೀಡದೆ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಲಾಗಿರುವುದು ಕಾನೂನು ಬಾಹಿರವಾಗಿರುತ್ತದೆ.ಚುನಾವಣೆಗೆ ಸಂಬಂಧಿಸಿದ ಆದೇಶ,ನೋಟೀಸುಗಳನ್ನು ಸಂಘದ ಸದಸ್ಯರಿಗೆ ತಿಳಿಯಪಡಿಸಲು ಸೂಕ್ತ ನೋಟೀಸು ಬೋರ್ಡ್ ಇರುವುದಿಲ್ಲ, ಚುನಾವಣೆಗೆ ನಾಮಪತ್ರ ಸಲ್ಲಿಸಿದವರ, ನಾಮಪತ್ರ ತಿರಸ್ಕೃತಗೊಂಡವರ, ನಾಮಪತ್ರ ಹಿಂಪಡೆದವರ ಮತ್ತು ಅಂತಿಮವಾಗಿ ಚುನಾವಣಾ ಕಣದಲ್ಲಿರುವವರ ವಿವರವನ್ನು ಇಲ್ಲಿಯವರೆಗೆ ಇಲಾಖಾ ಮುಖ್ಯಸ್ಥರಿಗೆ, ದೃಶ್ಯ ಮತ್ತು ಮುದ್ರಣ ಮಾಧ್ಯಮದವರಿಗೆ ಲಿಖಿತವಾಗಿ ನೀಡಿರುವುದಿಲ್ಲ, ನಾಮಪತ್ರ ತಿರಸ್ಕೃತಗೊಂಡ ಸದಸ್ಯರಿಗೆ ಯಾವ ಕಾರಣಕ್ಕಾಗಿ ನಾಮಪತ್ರ ತಿರಸ್ಕೃತಗೊಂಡಿದೆಯೆಂದು ಲಿಖಿತವಾಗಿ ಈ ದಿನದವರೆಗೆ ತಿಳಿಸಿರುವುದಿಲ್ಲ ಮತ್ತು ತಿರಸ್ಕೃತಗೊಂಡವರ ಠೇವಣಿಯನ್ನು ಹಿಂತಿರುಗಿಸಿರುವುದಿಲ್ಲ ಮೊದಲಾದ ಕಾರಣಗಳನ್ನು ಉಲ್ಲೇಖಿಸಿ ಈ ದೂರನ್ನು ನೀಡಿದ್ದು,
ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸದಸ್ಯರಾಗಿರುವ ನೋಂದಾಯಿತ ಸಂಘವೊಂದರ ಚುನಾವಣೆಯನ್ನು ಕಾನೂನು ಬಾಹಿರವಾಗಿ ನಡೆಸುತ್ತಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ತಾಲೂಕಿನ ಸಮಸ್ತ ಸರಕಾರಿ ನೌಕರರಿಗೆ ನ್ಯಾಯವನ್ನು ದೊರಕಿಸಿಕೊಡುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.

Related posts

ಬೆಳ್ತಂಗಡಿ: ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್‌ನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

Suddi Udaya

ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಹಾಸಭೆ: ಇಂಜಿನಿಯರ್ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ

Suddi Udaya

ಗುರುವಾಯನಕೆರೆ ನವಶಕ್ತಿ ಮನೆಗೆ ವಿಧಾನಪರಿಷತ್ ಅಭ್ಯರ್ಥಿ ಕಿಶೋರ್ ಕುಮಾರ್ ಬೇಟಿ

Suddi Udaya

ಬೆಳಾಲು ಗ್ರಾ.ಪಂ. ನಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

Suddi Udaya

ನ.23 : ವಿಮುಕ್ತಿ ಸ್ವ-ಸಹಾಯ ಸಂಘಗಳ ಟ್ರಸ್ಟ್ ಲಾಯಿಲ ಇದರ ಬೆಳ್ಳಿ ಹಬ್ಬ ಸಂಭ್ರಮ

Suddi Udaya

ಎಸ್.ಡಿ.ಎಂ ಬಿ.ಎಡ್ ಕಾಲೇಜು ವಾರ್ಷಿಕೋತ್ಸವ

Suddi Udaya
error: Content is protected !!