April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶ್ರೀ ಧ.ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಕಿಲ್ಲೂರಿನ ಶಾಲೆಯಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳ ಆಯೋಜನೆ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಒಂದು ವಾರದ ವಾರ್ಷಿಕ ವಿಶೇಷ ಶಿಬಿರವು ಮಿತ್ತಬಾಗಿಲು ಗ್ರಾಮದ ಕಿಲ್ಲೂರಿನ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.

ಈ ಸಂದರ್ಭದಲ್ಲಿ ವಿವಿಧ ವಿಷಯಗಳ ಬಗ್ಗೆ ವಿದ್ಯಾರ್ಥಿ ಸ್ವಯಂ ಸೇವಕರಿಗೆ ಶೈಕ್ಷಣಿಕ ಕಾರ್ಯಕ್ರಮ ನಡೆದವು.
ಉಜಿರೆಯ ಶ್ರೀ ಧ.ಮಂ ಸ್ವಾಯತ್ತ ಕಾಲೇಜಿನ ಸ್ನಾತ್ತಕೋತ್ತರ ರಸಾಯನಶಾಸ್ತ್ರ ವಿಭಾಗದ ಡಾ.ನವೀನ್ ಜೈನ್ ಹಾಗೂ ವಿದ್ಯಾರ್ಥಿಗಳಿಂದ ರಾಸಾಯನಿಕ ಇಂದ್ರಜಾಲ , ಬೆಳ್ತಂಗಡಿ ಆನ್ಸ್ ಕ್ಲಬ್ ಹಾಗೂ ಉಜಿರೆ ಮಹಿಳಾ ಮಂಡಳಿ ಸಹಭಾಗಿತ್ವದಲ್ಲಿ ಕಸದಿಂದ ರಸ ಕಾರ್ಯಕ್ರಮ , ಶ್ರೀ ಧ.ಮಂ ಪ.ಪೂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ದಿವ್ಯಕುಮಾರಿ ಇವರಿಂದ ಯುವಜನತೆ ಹಾಗೂ ಕೌಶಲ್ಯ , ಶ್ರೀ ಧ.ಮಂ ಪ.ಪೂ ಕಾಲೇಜಿನ ಕನ್ನಡ ಭಾಷಾ ಉಪನ್ಯಾಸಕ ಮಹಾವೀರ ಜೈನ್ ಇವರಿಂದ ಗ್ರಾಮೀಣ ಆಟಗಳು , ಮುಂಡಾಜೆ ವಿವೇಕಾನಂದ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ಪುರುಷೋತ್ತಮ ಶೆಟ್ಟಿ ಇವರಿಂದ ಸೃಜನಶೀಲತೆ ಮತ್ತು ಗುರಿ ನಿರ್ಧಾರ , ಶ್ರೀ ಧ.ಮಂ ಯೋಗ ವಿಜ್ಞಾನ ಹಾಗೂ ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯದ ಸ್ನಾತ್ತಕೋತ್ತರ ವಿದ್ಯಾರ್ಥಿ ಡಾ. ಮಂಜುನಾಥ ಹೆಚ್ ಆರ್ ಇವರಿಂದ ಭಾರತೀಯ ಆಹಾರ ಪದ್ಧತಿ, ಬೆಂಗಳೂರಿನ ಪ್ರಜಾವಾಣಿ ಪತ್ರಿಕೆಯ ಉಪಸಂಪಾದಕ ಸಿನಾನ್ ಇಂದಬೆಟ್ಟು ಇವರಿಂದ ನನ್ನ ಭಾರತ – ನನ್ನ ಹೆಮ್ಮೆ , ಶ್ರೀ ಧ.ಮಂ ಪ.ಪೂ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕಿ ಸ್ಮಿತಾ ಬೇಡೇಕರ್ ಅವರಿಂದ ಸುಲಭ ಇಂಗ್ಲೀಷ್, ಶ್ರೀ ಧ.ಮಂ ಐಟಿ ವಿದ್ಯಾರ್ಥಿ ದೇವಿಪ್ರಸಾದ್ ಅವರಿಂದ ಕಂಪ್ಯೂಟರ್ ಕಲಿಕೆ , ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಸಂಶೋಧನಾ ಪ್ರಶಿಕ್ಷಕ ಡಾ. ರಕ್ಷಿತ್ ಅ.ಪ ಇವರಿಂದ ಭಾಷಾ ಮೋಜು ಎನ್ನುವ ಶೈಕ್ಷಣಿಕ ಕಾರ್ಯಕ್ರಮಗಳು ನಡೆದವು.

ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಹಾಗೂ ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ಕಾರ್ಯಕ್ರಮ ಸಂಯೋಜಿಸಿದರು. ಘಟಕದ ನಾಯಕರಾದ ಆದಿತ್ಯ ವಿ ಹಾಗೂ ಪ್ರಾಪ್ತಿ ಗೌಡ ಮತ್ತು ವಿದ್ಯಾರ್ಥಿ ಸ್ವಯಂ ಸೇವಕರು ಉಪಸ್ಥಿತರಿದ್ದರು.

Related posts

ವೇಣೂರು: ಮನೆಗೆ ಮರ ಬಿದ್ದು ಹಾನಿ

Suddi Udaya

ಕೊಕ್ಕಡ ಶ್ರೀ ರಾಮ ಸೇವಾ ಮಂದಿರದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ

Suddi Udaya

ಬಂದಾರು ಬಟ್ಲಡ್ಕ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ಆಚರಣೆ

Suddi Udaya

ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಮತ್ತು ವಾಣಿ ಶಿಕ್ಷಣ ಸಂಸ್ಥೆಗಳ ವತಿಯಿಂದ ಶಾಸಕ ಹರೀಶ್ ಪೂಂಜರಿಗೆ ಅಭಿನಂದನೆ

Suddi Udaya

ಮುಂಡಾಜೆ ಗ್ರಾ.ಪಂ. ನ ಗ್ರಾಮ ಸಭೆ

Suddi Udaya

ಶಿರ್ತಾಡಿ: ಸಾಯಿ ಎಂಟರ್ಪ್ರೈಸಸ್ ನಲ್ಲಿ 4 ನೇ ಹಂತದ ಲಕ್ಕಿ ಸ್ಕೀಮ್: 15 ಸದಸ್ಯರನ್ನು ಸೇರಿಸಿದ ಸದಸ್ಯರಿಗೆ ಸ್ಕೀಮ್ ಕಾರ್ಡ್ ಉಚಿತ

Suddi Udaya
error: Content is protected !!