25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆ: ಅಧ್ಯಕ್ಷರಾಗಿ ಜಯರಾಜ ಜೈನ್, ಖಜಾಂಚಿಯಾಗಿ ನಾರಾಯಣ ಶೆಟ್ಟಿ, ರಾಜ್ಯ ಪರಿಷತ್‌ ಸದಸ್ಯರಾಗಿ ಪ್ರದೀಪ್ ಕುಮಾರ್ ಆಯ್ಕೆ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಳ್ತಂಗಡಿ ಶಾಖೆ ಇದರ 2024-29ನೇ ಸಾಲಿನ ನೂತನ ಆಡಳಿತ ಮಂಡಳಿಯ ಅಧ್ಯಕ್ಷ, ಖಜಾಂಚಿ, ರಾಜ್ಯ ಪರಿಷತ್ ಸ್ಥಾನ ಸ್ಥಾನಕ್ಕೆ ನ.೧೬ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜಯರಾಜ ಜೈನ್,ಖಜಾಂಚಿಯಾಗಿ ನಾರಾಯಣ ಶೆಟ್ಟಿ, ರಾಜ್ಯ ಪರಿಷತ್‌ಸದಸ್ಯರಾಗಿ ಪ್ರದೀಪ್ ಅವರು ಚುನಾಯಿತರಾಗಿದ್ದಾರೆ.

ಬಹಳಷ್ಟು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟ ಈ ಚುನಾವಣೆಯಲ್ಲಿ 22ಮಂದಿ ನಿರ್ದೇಶಕರು ಮತದಾನ ಮಾಡಿದ್ದರು. ಸಂಜೆ ಮತದಾನದ ಬಳಿಕ ಮತ ಏಣಿಕೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಾಲಿ ಅಧ್ಯಕ್ಷ ಜಯರಾಜ್ ಜೈನ್ 17 ಮತಗಳನ್ನು ಪಡೆದು ಚುನಾಯಿತರಾದರು. ಅವರ ಪ್ರತಿಸ್ಪರ್ಧಿ ತಾ.ಪಂ ವ್ಯವಸ್ಥಾಪಕ ಪ್ರಶಾಂತ್ ಡಿ. ಬಳಂಜ ಅವರಿಗೆ 7 ಮತ ದೊರಕಿ ಅವರು ಸೋಲು ಅನುಭವಿಸಿದರು. ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಲೋಕೋಪಯೋಗಿ ಇಲಾಖೆಯ ನಾರಾಯಣ ಶೆಟ್ಟಿ 17 ಮತ ಪಡೆದು ಆಯ್ಕೆಯಾದರೆ ಅವರ ಎದುರಾಳಿ, ಪಶುವೈದ್ಯ ಇಲಾಖೆಯ ಹಿರಿಯ ಪಶುವೈದ್ಯಕೀಯ ಪರೀಕ್ಷಕ ಸದಾಶಿವ ಭಟ್ ಕೆ. 5 ಮತ ಪಡೆದು ಸೋಲುಂಡರು.


ರಾಜ್ಯ ಪರಿಷತ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಗ್ರಾಮ ಲೆಕ್ಕಾಧಿಕಾರಿ ಪ್ರದೀಪ್ ಕುಮಾರ್ ಸಿ. 8 ಮತ ಪಡೆದು ಆಯ್ಕೆಯಾಗಿದ್ದಾರೆ. ಇವರ ಪ್ರತಿಸ್ಪರ್ಧಿ ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಆನಂದ ಡಿ. 7 ಮತ ಮತ್ತು ಆರೋಗ್ಯ ಇಲಾಖೆಯ ಸೋಮನಾಥ ಎಂ.ಆರ್ 7 ಮತ ಪಡೆದು ಸೋಲುಂಡರು. ಚುನಾವಣಾಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ನಾರಾಯಣ ನಾಯ್ಕ ಅವರು ಕಾರ್ಯನಿರ್ವಹಿಸಿದ್ದರು.

Related posts

ಪರಪ್ಪು: ವಲಿಯುಲ್ಲಾಹಿ ಫಕೀರ್ ಮುಹಿಯುದ್ದೀನ್ ದರ್ಗಾ ಶರೀಫ್ ಉರೂಸ್ ಮುಬಾರಕ್

Suddi Udaya

ಕಲ್ಪತರು ನರ್ಸಿಂಗ್ ಸ್ಕೂಲ್ ನಲ್ಲಿ ಲ್ಯಾಂಪ್ ಲೈಟಿಂಗ್ ಮತ್ತು ಓಥ್ ಸಮಾರಂಭ

Suddi Udaya

ಪುದುವೆಟ್ಟು ಮಿಯ್ಯಾರು ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ

Suddi Udaya

ಎಸ್.ವೈ.ಎಸ್ ಬೆಳ್ತಂಗಡಿ ಝೋನ್ ಮಾದರಿ ಮದುವೆ ಪ್ರಯುಕ್ತ ಡಿ.12 ರಂದು ಜಮಾಅತ್ ಪ್ರತಿನಿಧಿ ಸಂಗಮ

Suddi Udaya

ಮಿತ್ತಬಾಗಿಲು: ಎರ್ಮಾಳ್ ಪಲ್ಕೆಯಲ್ಲಿ ಮಗುಚಿಬಿದ್ದ ಹಾಲಿನ ಟ್ಯಾಂಕರ್

Suddi Udaya

ದ.ಕ. ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ: ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ 1,16,990 ಅಂತರದಿಂದ ಭಾರಿ ಮುನ್ನಡೆ

Suddi Udaya
error: Content is protected !!