25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಕಡಿರುದ್ಯಾವರ: ಕಾನರ್ಪ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

ಕಡಿರುದ್ಯಾವರ: ಕಾನರ್ಪ ಅಂಗನವಾಡಿ ಕೇಂದ್ರದಲ್ಲಿ ನ.14ರಂದು ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಆಟೋಟ ಸ್ಪರ್ಧೆ ನಡೆಸಲಾಯಿತು.


ನ.15ರಂದು ಬಹುಮಾನ ಕಾರ್ಯಕ್ರಮ ನಡೆಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ರತ್ನಾವತಿ ಬಾಲಕೃಷ್ಣ ಗೌಡ ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ನಳಿನಿ, ಕೇಂದ್ರ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಕುಸುಮಾವತಿ, ಆಶಾಕಾರ್ಯಕರ್ತೆ ವಿನಯ ಆರ್. ಗೌಡ, ಸಂಜೀವಿನಿ ಒಕ್ಕೂಟದ ಎಲ್ ಸಿ ಆರ್ ಪಿ ಸುಮಿತ್ರ, ಚಿರಂಜೀವಿ ಯುವಕ ಮಂಡಲದ ಅಧ್ಯಕ್ಷ ಜನಾರ್ಧನ ಕಾನರ್ಪ, ರಾಘವೇಂದ್ರ ಭಟ್, ಅಂಗನವಾಡಿ ಶಿಕ್ಷಕಿ ಪೂರ್ಣಿಮಾ ದಿನೇಶ್ ಉಪಸ್ಥಿತರಿದ್ದರು.

ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಮಕ್ಕಳಿಗೆ ಸಿಹಿ ತಿಂಡಿ ಹಂಚಲಾಯಿತು.


ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಉಜಿರೆ ದಿಶಾನ್ ಹೋಟೆಲ್ ಮಾಲಕರಾದ ದಿನೇಶ್ ಪೂಜಾರಿ ನೀಡಿ ಸಹಕರಿಸಿದರು.
ಕಾರ್ಯಕ್ರಮವನ್ನು ಅಂಗನವಾಡಿ ಶಿಕ್ಷಕಿ ಪೂರ್ಣಿಮಾ ದಿನೇಶ್ ನಡೆಸಿಕೊಟ್ಟರು.
ಅಂಗನವಾಡಿ ಸಹಾಯಕಿ ವಸಂತಿ, ಮಕ್ಕಳ ಪೋಷಕರು ಉಪಸ್ಥಿತರಿದ್ದರು

Related posts

ಉಜಿರೆ ಪ್ರಕೃತಿ ಚಿಕಿತ್ಸಾ ಕಾಲೇಜಿನ ವಿದ್ಯಾರ್ಥಿಯ‌ ಖಾತೆಯಿಂದ ರೂ. 3.14ಲಕ್ಷ ನಗದು ಅಪಹರಣ

Suddi Udaya

“ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಉತ್ಸವ – ಸಂಭ್ರಮ: ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿಗೆ ಸಮಗ್ರ ಪ್ರಶಸ್ತಿ

Suddi Udaya

ಕಾಮಿಡಿ ಕಿಲಾಡಿ ಖ್ಯಾತೀಯ ವೇಣೂರು ಅನೀಶ್ ಅಮೀನ್‌ಗೆ ಕುಡುಪುವಿನಲ್ಲಿ ಸನ್ಮಾನ

Suddi Udaya

ನಾಳೆ(ಎ.27): ಗುರುವಾಯನಕೆರೆಯಲ್ಲಿ ತಾಲೂಕು ಮಟ್ಟದ ಬಂಟ ಕ್ರೀಡೋತ್ಸವ

Suddi Udaya

ಉಜಿರೆ: ಶ್ರೀ ಧ.ಮಂ. ಅ.ಹಿ.ಪ್ರಾ. ಶಾಲೆಯಲ್ಲಿ ಶತಮಾನೋತ್ಸವ ಆಚರಣೆ ಪ್ರಯುಕ್ತ ಪೂರ್ವಭಾವಿ ಸಭೆ

Suddi Udaya

ಬಂದಾರು: ಬೈಪಾಡಿ ಭಗವಾನ್ ಶಾಂತಿನಾಥ ಸ್ವಾಮಿ ಬಸದಿಯಲ್ಲಿ ಶಾಂತಿಚಕ್ರ ಆರಾಧನೆ

Suddi Udaya
error: Content is protected !!