25.7 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪುಂಜಾಲಕಟ್ಟೆಯಲ್ಲಿ ಸ್ವಸ್ತಿಕ್ ಇಂಡಿಯಾ ಕಪ್ ಗೋಲ್ಡ್ ಮೆಡಲ್ ಕಬಡ್ಡಿ ಉತ್ಸವ: ಸಾಧಕರಿಗೆ ಸ್ವಸ್ತಿಕ್ ಸಂಭ್ರಮ ಪುರಸ್ಕಾರ

ಪುಂಜಾಲಕಟ್ಟೆ : ಇಲ್ಲಿನ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ 40ನೇ ವರ್ಷದ ಕಬಡ್ಡಿ ಪಂದ್ಯಾಟ ಪ್ರಯುಕ್ತ ಕ್ಲಬ್‌ನ ಗೌರವಾಧ್ಯಕ್ಷ ಎಂ. ತುಂಗಪ್ಪ ಬಂಗೇರ ನೇತೃತ್ವದಲ್ಲಿ ಸುಂದರ್ ರಾಜ್ ಹೆಗ್ಡೆ ಸಾರಥ್ಯದಲ್ಲಿ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್‌ ಸಹಭಾಗಿತ್ವದಲ್ಲಿ ಅಂತಾರಾಜ್ಯ ಮಟ್ಟದ ಹೊನಲು ಬೆಳಕಿನ ಸ್ವಸ್ತಿಕ್ ಇಂಡಿಯಾ ಕಪ್ ಗೋಲ್ಡ್ ಮೆಡಲ್ ಕಬಡ್ಡಿ ಉತ್ಸವ ನ.16 ಮತ್ತು ನ.17ರಂದು ಪುಂಜಾಲಕಟ್ಟೆ ಬಂಗ್ಲೆ ಮೈದಾನದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇಂದು (ನ.16) ಕೆ.ಪಿ.ಎಸ್.ಸ್ಕೂಲ್ ಮತ್ತು ಪ್ರೌಢ ಶಾಲೆ ಪುಂಜಾಲಕಟ್ಟೆ, ಮೊರಾರ್ಜಿ ಶಾಲೆ ವಗ್ಗ, ವಾಮದಪದವು ಅಂತರಗುತ್ತು ಅಲ್ಲದೆ ಕೆದಿಮೇಲು, ಮಹಾತಾಯಿ ಭಜನಾ ಮಂದಿರ ಈ ನಾಲ್ಕು ಕಡೆಯಿಂದ ಬಂದ ಸ್ವಸ್ತಿಕ್ ಕ್ರೀಡಾ ಜ್ಯೋತಿಯು ಸತೀಶ್ ಶೆಟ್ಟಿ ಕುರ್ಡುಮೆ ವೇದಿಕೆಯಲ್ಲಿ ಪ್ರಜ್ವಲನೆಗೊಂಡಿತು.

ಕ್ರೀಡಾ ಜ್ಯೋತಿ ಪ್ರಜ್ವಲನೆಯನ್ನು ಕ್ಲಬ್‌ನ ಮಹಾಪೋಷಕರು ಸಂತೋಷ್ ಜೆ.ಪಿ. ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರು ನ್ಯಾಯಾಧೀಶರು ದಿನೇಶ್ ಹೆಗ್ಡೆ ವಹಿಸಿದ್ದರು.

ಉದ್ಘಾಟನೆಯನ್ನು ಭದ್ರಾ ಪ್ರಮೋಟರ್‍ಸ್, ಬಂಟ್ವಾಳ ಮಡಂತ್ಯಾರು ರೊ| ಮಂಜುನಾಥ ಆಚಾರ್ಯ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಬಿ.ಜೆ.ಪಿ. ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಉದ್ಯಮಿಗಳು, ಮಂಗಳೂರು ಬಜಾಜ್ ಅಲಾಯನ್ಸ್ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಪದ್ಮನಾಭ ಸುವರ್ಣ, ಶೇಖರ್ ಪೂಜಾರಿ, ಉದ್ಯಮಿಗಳು, ಇರ್ವತ್ತೂರು, ಹೇಮಾ ಗ್ರಾನೈಟ್ಸ್ ಮೂರ್ಜೆ ಮ್ಹಾಲಕರು ಹೇಮಂತ್ ಕುಮಾರ್, ವಿಜಯ್ ಶೆಟ್ಟಿ, ಉದ್ಯಮಿಗಳು ವಾಮದಪದವು, ಪಿಲಾತಬೆಟ್ಟು ಸೇವಾ ಸಹಕಾರಿ ಬ್ಯಾಂಕು ಉಪಾಧ್ಯಕ್ಷ ರವಿಶಂಖರ್ ಹೊಳ್ಳ,, ಪುಂಜಾಲಕಟ್ಟೆ ಮುರುಗೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕುರ್ಡುಮೆ ಉಪಸ್ಥಿತರಿದ್ದರು.

ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಶ್ರೀಮತಿ ಮಲ್ಲಿಕಾ ಶೆಟ್ಟಿ ಅಮ್ಮಾಡಿ, ದಿವಾಕರ ಶೆಟ್ಟಿ ಕಂಗಿತ್ಲು , ಹನೀಫ್ ಮಡಂತ್ಯಾರು, ಜನಾರ್ಧನ ASI, (ಕಬಡ್ಡಿ ಹಿರಿಯ ಆಟಗಾರ) , ನವೀನ್ ಆಳ್ವ, ದೇವಿನಗರ ತಲಪಾಡಿ ಇವರಿಗೆ ಸ್ವಸ್ತಿಕ್ ಸಂಭ್ರಮ ಪುರಸ್ಕಾರ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪಂದ್ಯಾಟದ ಸಂಚಾಲಕ ರಾಜೇಶ್ ಪಿ. ಪುಂಜಾಲಕಟ್ಟೆ, ಕ್ಲಬ್‌ನ ಗೌರವಾಧ್ಯಕ್ಷ ಅಬ್ದುಲ್ ಪಿ., ಕ್ಲಬ್‌ನ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಕಾರ್‍ಯದರ್ಶಿ ಜಯರಾಜ್ ಅತ್ತಾಜೆ, ಪಂದ್ಯಾಟದ ಸಹ-ಸಂಚಾಲಕರು ಅಬ್ದುಲ್ ಹಮೀದ್ ಮಲ್ಪೆ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

Related posts

ಬಿಜೆಪಿಯಿಂದ 241 ಬೂತ್‌ಗಳಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರಿಂದ ಮನೆ ಮನೆ ಪ್ರಚಾರ ಅಭಿಯಾನ

Suddi Udaya

ಬೆಳ್ತಂಗಡಿ ಡಿ. ಕೆ.ಆರ್.ಡಿ.ಎಸ್ – ನವಜೀವನ ಆರೈಕೆ ಹಾಗೂ ಬೆಂಬಲ ಕಾರ್ಯಕ್ರಮ ಮತ್ತು ಕ್ರಿಸ್ಮಸ್ ಆಚರಣೆ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ. ಶಾಲೆಯಲ್ಲಿ ಗೀತಾ ಗಾಯನ ಸ್ಪರ್ಧೆ

Suddi Udaya

ನಡ: ಹೊಕ್ಕಿಲ ನಿವಾಸಿ ಕುಸುಮ ನಿಧನ

Suddi Udaya

ಜಿಲ್ಲಾ ಮಟ್ಟದ ಕ್ರೀಡಾಕೂಟ: ಬಜಿರೆ ಶಾಲಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಸೇವಾಭಾರತಿಯಿಂದ 32ನೇ ಉಚಿತ ಟೈಲರಿಂಗ್‌ ತರಬೇತಿ ಶಿಬಿರ ನೇಲ್ಯಡ್ಕದಲ್ಲಿ ಉದ್ಘಾಟನೆ

Suddi Udaya
error: Content is protected !!