ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸೂಳಬೆಟ್ಟು: ಡೋಂಗ್ರೆ ಕುಟುಂಬಸ್ಥರಿಂದ ಶೈಕ್ಷಣಿಕ ಪರಿಕರಗಳ ವಿತರಣೆ

ಬೆಳ್ತಂಗಡಿ: ಡೋಂಗ್ರೆ ಕುಟುಂಬಸ್ಥರು ಕೊಡಮಾಡುವ ಶೈಕ್ಷಣಿಕ ಪರಿಕರಗಳ 17 ನೇ ವರ್ಷದ ಉಚಿತ ವಿತರಣಾ ಸಮಾರಂಭ ಜೂ. 23 ರಂದು ನಾಲ್ಕೂರು ಗ್ರಾಮದ ಸೂಳಬೆಟ್ಟು ಸ.ಕಿ.ಪ್ರಾ.ಶಾಲೆಯಲ್ಲಿ ನಡೆಯಿತು.


ಬೆಳ್ತಂಗಡಿ ರೋಟರಿ ಕ್ಲಬ್ ಹಾಗೂ ಭಾರತೀಯ ದಂತ ವೈದ್ಯಕೀಯ ಸಂಘ( ಐ.ಡಿ.ಎ.)ದ ಸಹಯೋಗದಲ್ಲಿ ನಡೆದ ಕಾರ್ಯಕ್ರಮವನ್ನು ರೋಟರಿ ನಿಯೋಜಿತ ಅಧ್ಯಕ್ಷ ಉಜಿರೆ ಎಸ್.ಡಿ.ಎಂ.ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಫ್ರೊ. ಪಿ.ಪಿ.ಪ್ರಭು ಉದ್ಘಾಟಿಸಿದರು.


ಐ.ಡಿ.ಎ.ಪುತ್ತೂರು ಘಟಕದ ಅಧ್ಯಕ್ಷೆ ಡಾl ಆಶಾ ಪಿದಮಲೆ, ಬೆಳ್ತಂಗಡಿ ಸ್ವಾತಿ ದಂತ ಚಿಕಿತ್ಸಾಲಯದ ಡಾl ಶಶಿಧರ ಡೋಂಗ್ರೆ, ಬಳಂಜ ಗ್ರಾ.ಪಂ.ಮಾಜಿ ಅಧ್ಯಕ್ಷ ವಿಶ್ವನಾಥ ಡೋಂಗ್ರೆ , ಡಾl ರಾಘವೇಂದ್ರ ಪಿದಮಲೆ, ಗೀತಾಪ್ರಭು, ಡಾl ಸುಷ್ಮಾ ಡೋಂಗ್ರೆ , ಮೋಹನದಾಸ್ ಅಳದಂಗಡಿ ಉಪಸ್ಥಿತರಿದ್ದರು.


ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಪ್ರವೀಣ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳು ಮಕ್ಕಳಿಗೆ ಸಮವಸ್ರ್ತ, ಪುಸ್ತಕ, ಚೀಲ, ಕೊಡೆ ಮತ್ತಿತರ ಪರಿಕರಗಳನ್ನು ವಿತರಿಸಿದರು.
ಈ ಬಾರಿಯ ಜೆ.ಇ.ಇ. (ಅಡ್ವಾನ್ಸ್) ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯುನ್ನತ ಸ್ಥಾನ ಪಡೆದು ಐ.ಐ.ಟಿ.ಗೆ ಆಯ್ಕೆಯಾದ ಅಳದಂಗಡಿಯ ಅಚಿಂತ್ಯ ದಾಸ್ ಅವರಿಗೆ ಮುಂದಿನ ವಿದ್ಯಾಭ್ಯಾಸದ ಸಲುವಾಗಿ ವಿದ್ಯಾನಿಧಿಯಾಗಿ ರೂ. 25,000 ನಗದನ್ನು ಡಾl ಶಶಿಧರ ಡೋಂಗ್ರೆ ಅವರು ಹಸ್ತಾಂತರಿಸಿದರು.


ಅಂಗನವಾಡಿ ಕಾರ್ಯಕರ್ತೆ ಶಶಿಕಲಾ, ಅಕ್ಷರ ದಾಸೋಹದ ಲವೀನಾ ಸಹಕರಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಲೀನಾ‌ ಮೋರಾಸ್ ಸ್ವಾಗತಿಸಿದರು. ಸಹ ಶಿಕ್ಷಕಿ ರೀಟಾ ರೋಡ್ರಿಗಸ್ ವಂದಿಸಿದರು. ಶಾಲಾ ಹಿರಿಯ ವಿದ್ಯಾರ್ಥಿ ದೀಪಕ ಆಠವಳೆ ಕಾರ್ಯಕ್ರಮ‌ ನಿರ್ವಹಿಸಿದರು.

Related posts

ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ – ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಹದಿಹರೆಯದ ವಿಷಯದ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya

ಧರ್ಮಸ್ಥಳ ಪಾದಯಾತ್ರಿಗಳ ಸೇವೆಗಾಗಿ ಉಚಿತ ವೈದ್ಯಕೀಯ ಶಿಬಿರಗಳ ಉದ್ಘಾಟನೆ

Suddi Udaya

ಕೋಲ್ಕತಾ ವೈದ್ಯ ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ: ಬೆಳ್ತಂಗಡಿ ತಾಲೂಕಿನಲ್ಲಿ ತುರ್ತು ಸೇವೆ ಹೊರತುಪಡಿಸಿ ಹೊರರೋಗಿ ವಿಭಾಗ ಹಾಗೂ ಇತರ ವೈದ್ಯಕೀಯ ಸೇವೆಗಳು ಸ್ಥಗಿತ

Suddi Udaya

ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ

Suddi Udaya

ಅ.19: ಉಜಿರೆ ಅನುಗ್ರಹದಲ್ಲಿ ಹಿರಿಯ ವಿದ್ಯಾರ್ಥಿಗಳ “ಅನುಗ್ರಹ ಸಮಾಗಮ”

Suddi Udaya

ಬೆಳ್ತಂಗಡಿ ಮಹಿಳಾ ಮಂಡಲಗಳ ಒಕ್ಕೂಟ ಹಾಗೂ ಮುಳಿಯ ಜುವೆಲ್ಲರ್ಸ್ ವತಿಯಿಂದ ವನಮಹೋತ್ಸವ

Suddi Udaya
error: Content is protected !!