30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಮಡಂತ್ಯಾರು : ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ಮಡಂತ್ಯಾರಿನಲ್ಲಿ ನ.15 ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮವು ಪ್ರಾರ್ಥನಾ ವಿಧಿಯೊಂದಿಗೆ ಪ್ರಾರಂಭವಾಯಿತು. ಸಹಶಿಕ್ಷಕಿಯಾದ ಶ್ರೀಮತಿ ಎಲಿಜಾ ಶಾಂತಿರವರು ಮಕ್ಕಳ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ಶಿಕ್ಷಕ-ಶಿಕ್ಷಕೇತರ ವೃಂದದವರು ಹಾಡು, ನೃತ್ಯ, ನಾಟಕದ ಮೂಲಕ ಮಕ್ಕಳನ್ನು ಮನರಂಜಿಸಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶಾಲಾ ಸಂಚಾಲಕರಾದ ವಂ|ಸ್ವಾ| ಸ್ಟ್ಯಾನಿ ಗೋವಿಯಸ್ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ವಂ|ಸ್ವಾ| ದೀಪಕ್ ಲಿಯೊ ಡೇಸರವರು, ಹಾಗೂ ಶಿಕ್ಷಕರ-ರಕ್ಷಕ ಸಂಘದ ಸದಸ್ಯರಾದ ವಸಂತ ಮತ್ತು ಶ್ರೀಮತಿ ಡಯಾನ ಮಿಸ್ಕಿತ್ ರವರು ಉಪಸ್ಥಿತರಿದ್ದರು.

ಶಿಕ್ಷಕಿ ಶ್ರೀಮತಿ ವಿನ್ನಿ ಲೋಬೋ ನಿರೂಪಿಸಿ, ಶಿಕ್ಷಕಿ ಶ್ರೀಮತಿ ಜೋಯ್ಲಿನ್ ಲಿಡ್ವಿನ್ ಸೆರಾವೋ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಪ್ರಿನ್ಸಿಯ ಫೆರ್ನಾಂಡೀಸ್ ಧನ್ಯವಾದವಿತ್ತರು.

Related posts

ಉಜಿರೆ: ಅನುಗ್ರಹ ಪ.ಪೂ. ಕಾಲೇಜಿಗೆ ಶೇ. 100 ಫಲಿತಾಂಶ

Suddi Udaya

ಮೈರೋಳ್ತಡ್ಕ ಸ.ಉ.ಪ್ರಾ. ಶಾಲೆಯಲ್ಲಿ ಪೋಷಕರಿಂದ ಶ್ರಮದಾನ 

Suddi Udaya

ಕನ್ಯಾಡಿ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

Suddi Udaya

ಪರಪ್ಪು ಮಸೀದಿಯಲ್ಲಿ ಸಂಭ್ರಮದ ಈದ್-ಉಲ್-ಫಿತರ್ ಆಚರಣೆ

Suddi Udaya

ಗೇರುಕಟ್ಟೆ ಉಮರ್ ಫಾರೂಕ್ ಮೃತದೇಹ ಹೊರತೆಗೆದು ಕುಟುಂಬಕ್ಕೆ ಹಸ್ತಾಂತರ

Suddi Udaya

ಚಾರ್ಮಾಡಿ ಗ್ರಾ.ಪಂ.ನಲ್ಲಿ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ , ಮತ್ತು ಮನೆ ಮನೆ ಜಾಥಾ ಅಭಿಯಾನದಡಿ ಉದ್ಯೋಗ ಖಾತರಿ ವಿಶೇಷ ಗ್ರಾಮ ಸಭೆ, ಜಾಥಾ

Suddi Udaya
error: Content is protected !!