ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ವತಿಯಿಂದ, ಉಜಿರೆ ಎಸ್‌.ಡಿ.ಎಂ. ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಸಹಭಾಗಿತ್ವದಲ್ಲಿ ಉಚಿತ ಇಸಿಜಿ ತಪಾಸಣಾ ಶಿಬಿರ,194 ಮಂದಿಗೆ ತಪಾಸಣೆ

Suddi Udaya

ಧರ್ಮಸ್ಥಳ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಧರ್ಮಸ್ಥಳ ಇವರ ವತಿಯಿಂದ ಮತ್ತು ಎಸ್‌.ಡಿ.ಎಂ. ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ಉಜಿರೆ ಇವರ ಸಹಭಾಗಿತ್ವದಲ್ಲಿ ಸಂಘದ ರೈತ ಸದಸ್ಯರಿಗಾಗಿ ಉಚಿತ ಇಸಿಜಿ ತಪಾಸಣಾ ಶಿಬಿರವು ನ.15 ರಂದು ಧರ್ಮಸ್ಥಳ ಸಂಘದ ಅಟಲ್ ಜೀ ಸಭಾ ಭವನದಲ್ಲಿ ಜರುಗಿತು.

ಶಿಬಿರವನ್ನು ವಿಧಾನ‌ಪರಿಷತ್ ಶಾಸಕ ಕೆ ಪ್ರತಾಪ ಸಿಂಹ ನಾಯಕ್ ರವರು ಉದ್ಘಾಟಿಸಿ ಆರೋಗ್ಯಕ್ಕೆ ಸಂಬಂಧಿಸಿದ ಶಿಬಿರವನ್ನು ನಿರಂತರ ಆಯೋಜನೆ ಮಾಡುತ್ತಿರುವ ಧರ್ಮಸ್ಥಳ ಸಿಎ ಬ್ಯಾಂಕ್ ಮಾದರಿ ಎಂದರು. ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಜನಾರ್ಧನ್, ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಡಾ.ಸಾತ್ವಿಕ್ ಜೈನ್, ಡಾ| ಧರಣೇಂದ್ರ ಜೈನ್, ಸಿ ಎ ಬ್ಯಾಂಕ್ ಅಧ್ಯಕ್ಷ ಪ್ರೀತಮ್ ಡಿ, ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಧರ, ನಿರ್ದೇಶಕರುಗಳಾದ ಶ್ರೀಮತಿ ಶಾಂಭವಿ ರೈ, ಶ್ರೀಮತಿ ಧನಲಕ್ಷ್ಮೀ ಜನಾರ್ದನ್, ಪ್ರಸನ್ನ ಹೆಬ್ಬಾರ್ , ತಂಗಚ್ಚನ್, ಉಮಾನಾಥ, ಪ್ರಭಾಕರ ಗೌಡ ಬೊಳ್ಮ, ಚಂದ್ರಶೇಖರ, ಶೀನ , ನೀಲಾಧರ ಶೆಟ್ಟಿ ,ವಿಕ್ರಂ ಗೌಡ , ವಲಯ ಮೇಲ್ವಿಚಾರಕರು ಸುದರ್ಶನ್ ಕೋಟ್ಯಾನ್ ಹಾಗೂ ಸಿಬ್ಬಂದಿಗಳು ಸದಸ್ಯರು ಉಪಸ್ಥಿತರಿದ್ದರು.

ಸುಮಾರು 194 ಮಂದಿಗೆ ಇಸಿಜಿ ತಪಾಸಣೆ ಮಾಡಲಾಯಿತು. ಆರೋಗ್ಯಕ್ಕೆ ಸಂಭಂಧಿಸಿದ ಶಿಬಿರಗಳನ್ನು ಆಯೋಜನೆ ಮಾಡುತ್ತಿರುವ ಬ್ಯಾಂಕಿನ ಅಧ್ಯಕ್ಷ ಪ್ರೀತಮ್ ಹಾಗೂ ಆಡಳಿತ ಮಂಡಳಿಯನ್ನು ತಪಾಸಣೆಗೆ ಬಂದವರು ಶ್ಲಾಘೀಸಿದರು

Leave a Comment

error: Content is protected !!