25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ನ. 14 ರಂದು ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಜವಾಹರ್ ಲಾಲ್ ನೆಹರು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ವಂ| ಫಾ| ಕ್ಲಿಫರ್ಡ್ ರೊಡ್ರಿಗಸ್ ಆಶಾದೀಪಾ ಮಡಂತ್ಯಾರು ರವರು ಮಕ್ಕಳು ತಮಗೆ ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂಬುದನ್ನು ಕಥೆಯ ಮೂಲಕ ತಿಳಿಸಿದರು.


ಶಾಲಾ ಸಂಚಾಲಕರಾದ ಅತೀ ವಂ| ಫಾ| ವಾಲ್ಟರ್ ಡಿಮೆಲ್ಲೋ ರವರು ಮಕ್ಕಳ ದಿನಾಚರಣೆಯ ಶುಭ ಸಂದೇಶವನ್ನು ನೀಡಿ ಆಶೀರ್ವದಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ ಕ್ಲಿಫರ್ಡ್ ಪಿಂಟೋರವರು ಕಾರ್ಯಕ್ರಮಕ್ಕೆ ಮಾರ್ಗದರ್ಶನ ಹೇಳಿ ಶುಭ ಹಾರೈಸಿದರು. ಮಕ್ಕಳ ದಿನಾಚರಣೆಯ ಅಂಗವಾಗಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ತಾಲೂಕು ಮಟ್ಟದ ಕ್ರೀಡೆ ಹಾಗೂ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಶಿಕ್ಷಕರಕ್ಷಕ ಸಂಘದ ಉಪಾಧ್ಯಕ್ಷ ರಮೇಶ್ ಹಾಗೂ ಪದಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ಶಿಕ್ಷಕ ವೃಂದದವರು ಶುಭಾಶಯ ಗೀತೆ ಹಾಗೂ ನೃತ್ಯಗಳ ಮೂಲಕ ಎಲ್ಲರ ಮನರಂಜಿಸಿದರು. ಸಹ ಶಿಕ್ಷಕಿಯರಾದ ಶ್ರೀಮತಿ ಲವೀನಾ ಮಿನೇಜಸ್ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ರೆನಿಟಾ ಲಸ್ರಾದೊ ಸ್ವಾಗತಿಸಿ, ಶ್ರೀಮತಿ ಬ್ಲೆಂಡಿನ್ ರೊಡ್ರಿಗಸ್ ವಂದಿಸಿದರು.

Related posts

ನೆರಿಯದಲ್ಲಿ ಹತ್ತು ವರ್ಷಗಳ ಹಿಂದೆ ನಡೆದ ಕೊಲೆಯತ್ನ ಪ್ರಕರಣ: ನಾಲ್ಕು ಮಂದಿ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ಕೋರ್ಟ್

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಉಜಿರೆ: ಜಿಲ್ಲಾ ಮಟ್ಟದ ಶ್ರೀಮದ್ಭಗವದ್ಗೀತಾ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭ

Suddi Udaya

ಅರಣ್ಯ ಇಲಾಖೆ ಬುಡಕಟ್ಟು ಸಮುದಾಯದ ಜೊತೆಗೆ ಸರ್ಕಾರವನ್ನು ಕೂಡ ವಂಚಿಸುತ್ತಿದೆ : ಹರೀಶ್ ಎಳನೀರ್

Suddi Udaya

ಕರಾಟೆ ಚಾಂಪಿಯನ್ ಶಿಪ್ : ಬೆಳ್ತಂಗಡಿಯ ಶ್ರೇಯಸ್ ಕುಮಿಟೆಯಲ್ಲಿ ಪ್ರಥಮ ಸ್ಥಾನ

Suddi Udaya

ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಟ್ರಸ್ಟ್ ಸಭೆ

Suddi Udaya
error: Content is protected !!