ಬೆಳ್ತಂಗಡಿ : ಜೀವನದಲ್ಲಿ ಸೋಲಿಗೆ ಭಯಪಡಬಾರದು, ಬದಲಾಗಿ ಸಾಧನೆಗೆ ಮುಂದಾಗಬೇಕು ಆಗ ದೇವರ ಅನುಗ್ರಹದ ಜೊತೆ ಯಶಸ್ಸು ನಮ್ಮದಾಗುತ್ತದೆ.ಇಂದು ಎಕ್ಸೆ ಲ್ ಕಾಲೇಜಿನ ಅಧ್ಯಕ್ಷರು ಸುಮಂತ್ ಕುಮಾರ್ ಜೈನ್ ಕೂಡ ಕಠಿನ ಶ್ರಮದಿಂದ ಯಶಸ್ಸು ಕಂಡಿದ್ದಾರೆ, ಎಕ್ಸೆಲ್ ಕಾಲೇಜು ರಾಷ್ಟಮಟ್ಟದಲ್ಲಿ ಬೆಳೆಯಲಿ ಎಂದು ಕನ್ಯಾಡಿ ಸೇವಾಭಾರತಿಯ ಅದ್ಯಕ್ಷ ವಿನಾಯಕರಾವ್ ಅಭಿಪ್ರಾಯಪಟ್ಟರು.
ಅವರು ನ. 16 ರಂದು ಎಕ್ಸೆಲ್ ಪದವಿಪೂರ್ವ ಕಾಲೇಜು ವಿದ್ಯಾಸಾಗರ ಮತ್ತು ಅರಮಲೆಬೆಟ್ಟ ಕ್ಯಾಂಪಸ್ ನಲ್ಲಿ ನಡೆದ ಎಕ್ಸೆಲ್ ಪರ್ಬ 2024 ರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟನೆಯನ್ನು ಶ್ರಿಕ್ಷೇತ್ರ ಅರಮಲೆಬೆಟ್ಟದ ಆಡಳಿತ ಮೊಕ್ತೇಸರ ಸುಕೇಶ್ ಕುಮಾರ್ ಕಡಂಬು ನೇರವೇರಿಸಿ ಮಾತನಾಡಿ ಎಕ್ಸೆಲ್ ಕಾಲೇಜು ಅತಿ ಕಡಿಮೆ ಅವಧಿಯಲ್ಲಿ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ ಎಂದರೆ ಇಲ್ಲಿನ ಶಿಕ್ಷಣದ ಗುಣಮಟ್ಟದ ಸಾಕ್ಷಿಯಾಗಿದೆ. ಸಾವಿರಾರು ಮಕ್ಕಳ ಭವಿಷ್ಯ ರೂಪಿಸುವ ಸಂಸ್ಥೆ ಮುಂದೆ ಮೆಡಿಕಲ್ ,ಇಂಜಿನಿಯರ್ ಕಾಲೇಜುಗಳಾಗಿ ಬೆಳೆಯಲಿ ಎಂದರು.
ಎಕ್ಸೆಲ್ ಕಾಲೇಜಿನ ಅದ್ಯಕ್ಷ ಸುಮಂತ್ ಕುಮಾರ್ ಜೈನ್ ಅದ್ಯಕ್ಷತೆ ವಹಿಸಿ ಮಾತನಾಡಿ ಗುಣಮಟ್ಟದ ಶಿಕ್ಷಣಕ್ಕೆ ನಾವು ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಪಠ್ಯದ ಜೊತೆ ಲೌಕಿಕ ಜ್ಞಾನವನ್ನೂ ನೀಡಿದರೆ ವ್ಯಕ್ತಿತ್ವ ಬೆಳವಣಿಗೆ ಹಾಗೂ ಉತ್ತಮ ಜೀವನಕ್ಕೆ ಸಹಕಾರಿಯಾಗುತ್ತದೆ.ನಮ್ಮ ಕಾಲೇಜಿನಲ್ಲಿ ಕಲಿತ ಪ್ರತಿ ವಿದ್ಯಾರ್ಥಿಗಳು ಹೆತ್ತವರಿಗೆ ಹಾಗೂ ಸಮಾಜಕ್ಕೆ ಆಸ್ತಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಂಡಾಜೆ ಕ್ರಿಸ್ತ್ ಅಕಾಡೆಮಿಯ ಅಧ್ಯಕ್ಷ ಪಾ ಪಾ.ಮ್ಯಾಥ್ಯೂ, ಬೆಳ್ತಂಗಡಿ ಆರಕ್ಷಕ ಠಾಣಾ ಠಾಣಾಧಿಕಾರಿ ಮುರಳೀದರ ನಾಯ್ಕ್ ,ಚಾರ್ಟರ್ಡ್ ಅಕೌಂಟೆಂಟ್ ಆಕಾಶ್ ದೀಪ್ ಮೂಡಬಿದರೆ,ಸೆಭಾಷ್ಟಿಯನ್, ಕಾಲೇಜಿನ ಗೌರಾವಾದ್ಯಕ್ಷ ಸತೀಶ್ ಕುಮಾರ್ ಅರಿಗ ಬೊಳ್ಳೂರು ಗುತ್ತು,ಹಳೆವಿದ್ಯಾರ್ಥಿ ಪ್ರಜ್ವಲ್ ಹೆಚ್ ಎನ್,ಕಾಲೇಜಿನ ಕಾರ್ಯದರ್ಶಿ ಅಭಿರಾಮ್ ಬಿ ಎಸ್, ಉಪಸ್ಥಿತರಿದ್ದರು.
ಅರಮಲೆಬೆಟ್ಟ ಕ್ಯಾಂಪಸ್ ಪ್ರಭಾರ ಪ್ರಾಚಾರ್ಯ ಡಾ ಪ್ರಜ್ವಲ್ ಸ್ವಾಗತಿಸಿ,ಪ್ರಾಂಶುಪಾಲರಾದ ಡಾ.ನವೀನ್ ಕುಮಾರ್ ಮರಿಕೆ ವಂದಿಸಿದರು. ಉಪನ್ಯಾಸಕ ಪ್ರದೀಕ್ ರೈ ನಿರೂಪಿಸಿದರು.
ನಂತರ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.