April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಸಂಘ-ಸಂಸ್ಥೆಗಳು

ಮುಂಡಾಜೆ: ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಅಧ್ಯಯನ ಕೇಂದ್ರ ಉದ್ಘಾಟನೆ

ಮುಂಡಾಜೆ: ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಸಹಯೋಗದೊಂದಿಗೆ ಮುಂಡಾಜೆ ಶಾರದ ನಗರ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಅಧ್ಯಯನ ಕೇಂದ್ರ ಇದರ ಉದ್ಘಾಟನಾ ಕಾರ್ಯಕ್ರಮವು ನ. 17ರಂದು ಶ್ರೀ ದುರ್ಗಾಪರಮೇಶ್ವರೀ ಆರಾಧನಾ ಮಂದಿರದ ವಠಾರದಲ್ಲಿ ನಡೆಯಿತು.

ಅನಂತ್ ಭಟ್ ಮಚ್ಚಿಮಲೆ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ನಮ್ಮ ಪುರಾಣವನ್ನು ಮುಂದಿನ ಪೀಳಿಗೆಗೆ, ನವರಸ ಭರಿತ ರೂಪಕದ ಮೂಲಕ ತಿಳಿಸುವಂತಹದ್ದು ಯಕ್ಷಗಾನ ಕಲೆ. ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಅಧ್ಯಯನ ಕೇಂದ್ರ ಉನ್ನತವಾಗಿ ಬೆಳಗಲಿ, ನಮ್ಮೆಲ್ಲರ ಸಹಕಾರ ಸದಾ ಇರುತ್ತದೆ ಎಂದು ಶುಭಹಾರೈಸಿದರು.

ಯಕ್ಷಗುರು ರವಿಕುಮಾರ್ ಮುಂಡಾಜೆ ಪ್ರಾಸ್ತವಿಕವಾಗಿ ಮಾತನಾಡಿ, ಯಕ್ಷಗಾನದಲ್ಲಿ ನಾವು ಮಾತ್ರ ಕಾಣಿಸಿಕೊಳ್ಳುವುದಲ್ಲ, ನಮ್ಮ ಊರು ಕಾಣಿಸಿಕೊಳ್ಳಬೇಕು, ಹಾಗೂ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ಯಕ್ಷಗಾನ ಅಧ್ಯಯನ ಕೇಂದ್ರ ಪ್ರಾರಂಭ ಮಾಡಿರುವಂತಹದ್ದು. ನಾವು ಕಷ್ಟಪಟ್ಟು ಕಲಿತಂತಹ ವಿದ್ಯೆಯನ್ನು ಇನ್ನೊಬ್ಬನಿಗೆ ಧಾರೆ ಎರೆದು ಕೊಟ್ಟರೆ ಗುರು ಋಣದಿಂದ ಮುಕ್ತಿ ಹೊಂದಲು ಸಾಧ್ಯ ಎಂದರು.

ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಬಂಗೇರ ಅಧ್ಯಕ್ಷತೆಯನ್ನು ವಹಿಸಿದ್ದರು.

ಅತಿಥಿಗಳಾಗಿ ಯಕ್ಷಗಾನ ಅಕಾಡೆಮಿ ಸದಸ್ಯರಾದ ದಯಾನಂದ ಪಿ. ಬೆಳಾಲು, ರಾಘವ ಹೆಚ್. ಗೇರುಕಟ್ಟೆ, ಯಕ್ಷಗಾನ ಗುರುಗಳು ದಿವಾಣ ಶಿವಶಂಕರ್ ಭಟ್, ಕಟೀಲು ಮೇಳದ ಯಕ್ಷಗಾನ ಕಲಾವಿದ ರಾಮಣ್ಣ ಭಂಡಾರಿ, ಮುಂಡಾಜೆ ಕಲಾಕುಂಚ ಕಲಾವಿದ ಜಯರಾಮ ಕೆ., ಕೀರ್ತನಾ ಕಲಾತಂಡ ಸಂಚಾಲಕ ಸದಾನಂದ ಬಿ., ಸಿವಿಲ್ ಗುತ್ತಿಗೆದಾರರು ಚೆನ್ನಕೇಶವ ನಾಯ್ಕ ಅರಸಮಜಲು, ಶ್ರೀ ಮಂಜುಶ್ರೀ ಭಜನಾ ಮಂಡಳಿ ಕಾರ್ಯದರ್ಶಿ ಉಮೇಶ ಆಚಾರ್ಯ, ಜನಪದ ಕಲಾವಿದೆ ಶ್ರೀಮತಿ ರವಿ ರಂಜಿನಿ ಉಪಸ್ಥಿತರಿದ್ದರು.

ಕಲಾವಿದರಾದ ಜಯರಾಮ್ ಕೆ. ನಿರೂಪಿಸಿದರು.

Related posts

ಶಿಶಿಲ: ಕಾರೆಗುಡ್ಡೆ ದಿ. ಪ್ರವೀಣ್ ರವರ ಮನೆಯವರಿಗೆ ದೀಪಾವಳಿ ಪ್ರಯುಕ್ತ ಬಟ್ಟೆ ಹಾಗೂ ಧನ ಸಹಾಯ

Suddi Udaya

ಬೆಳಾಲು ಶ್ರೀರಾಮ ಶಾಖೆ ವತಿಯಿಂದ ಕೊಲ್ಪಾಡಿ ಸುಬ್ರಮಣ್ಯೇಶ್ವರ ಮಕ್ಕಳ ಭಜನಾ ತಂಡಕ್ಕೆ ಧನಸಹಾಯ

Suddi Udaya

ನಾಳ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯ

Suddi Udaya

ಜೆಸಿಐ ಪುತ್ತೂರಿನಲ್ಲಿ ತರಬೇತಿ ಕಾರ್ಯಗಾರ

Suddi Udaya

ಬೆಳಾಲು: ಮಾಯ ಸ.ಉ.ಪ್ರಾ. ಶಾಲೆಯಲ್ಲಿ ರೂ.8.35 ಲಕ್ಷ ವೆಚ್ಚದಲ್ಲಿ ಶಾಲಾ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ

Suddi Udaya

ಜ.25: ಧರ್ಮಸ್ಥಳದಲ್ಲಿ ಶ್ರೀ ಶಿವಶಕ್ತಿ ಅಯ್ಯಂಗಾರ್ ಬೇಕರಿ ಶುಭಾರಂಭ

Suddi Udaya
error: Content is protected !!