22.8 C
ಪುತ್ತೂರು, ಬೆಳ್ತಂಗಡಿ
April 4, 2025
ಸಂಘ-ಸಂಸ್ಥೆಗಳು

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘ ಉಜಿರೆ ಇದರ2023-2024 ನೇ ಸಾಲಿನ ವಾರ್ಷಿಕ ಮಹಾಸಭೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘ (ರಿ ) ಉಜಿರೆ ಇದರ 2023-2024 ನೇ ಸಾಲಿನ ವಾರ್ಷಿಕ ಮಹಾಸಭೆ ನ. 17 ರಂದು ಉಜಿರೆ ಎಸ್. ಪಿ ಆಯಿಲು ಮಿಲ್ ವಠಾರದಲ್ಲಿ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಕೇರಿಮಾರು ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಶ್ರೀಮತಿ ಮಮತಾ ಶಿವರಾಮ ಗೌಡ ಮತ್ತು ಶ್ರೀಮತಿ ಭವ್ಯ ಸುರೇಂದ್ರ ಹುಂಕ್ರೋಟ್ಟು ಇವರು ಪ್ರಾರ್ಥನೆ ನೆರವೇರಿಸಿದರು. ಭರತ್ ಕುಮಾರ್ ಗೌಡ ಹಾನಿಬೆಟ್ಟು ಇವರು ವೇದಿಕೆಯಲ್ಲಿದ್ದ ಅಥಿತಿಗಳನ್ನು ಸ್ವಾಗತಿಸಿದರು. ಈ ಸಂಧರ್ಭದಲ್ಲಿ ವೇದಿಕೆಯಲ್ಲಿ ಕಾ ಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕರಿಯ ಅಧ್ಯಕ್ಷರಾದ ರಂಜನ್ ಜಿ ಗೌಡ ಇವರು ಉಪಸ್ಥಿತರಿದ್ದರು.ಇತ್ತೀಚಿಗೆ ನಮ್ಮನಗಲಿದ ಸಂಘದ ಸದಸ್ಯರಾದ ದಿವಂಗತ ಸುಂದರ ಗೌಡ ಇಚ್ಚಿಲ ಮತ್ತು ಇಂದಿರಾ ಎಸ್ ಗೌಡ ಮಾಳಿಗೆಮನೆ ಇವರಿಗೆ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶ್ರೀ ಸುರೇಶ್ ಗೌಡ ಕೂಡಿಗೆ ಅವರ ಬಗ್ಗೆ ಮಾತನಾಡಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಕೇರಿಮಾರು ಇವರು ಸಂಘದ ಅಭಿವೃದ್ಧಿಗೆ ತ್ಯಾಗ ಧನಸಹಾಯ ಬಹಳ ಮುಖ್ಯವಾಗಿರುತ್ತದೆ ಎಂದು ಸಂಘದ ಅಭಿವೃದ್ಧಿಗೆ ಜನರ ಸಹಕಾರವನ್ನು ಕೇಳಿಕೊಂಡರು.ಒಕ್ಕಲಿಗ ಗೌಡರ ಯುವ ವೇದಿಕೆ ಅಧ್ಯಕ್ಷರಾದ ಅನಿಲ್ ಗೌಡ ಅಂತರ ಮತ್ತು ಸಹಕಾರಿಯ ಮುಖ್ಯಕಾರ್ಯನಿರ್ವಾಹಣಾ ಧಿಕಾರಿಯಾದ ದಿನೇಶ್ ಗೌಡ ಕಲ್ಲಾ ಜೆ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿಯಾದ ಬಾಲಕೃಷ್ಣ ಗೌಡ ಕಲ್ಲಾಜೆ ಇವರು ವಾರ್ಷಿಕ ವರದಿಯನ್ನು ವಾಚಿಸಿದರು. ಸಂಘದ ಕೋಶಾಧಿಕಾರಿಯಾದ ರಾಘವೇಂದ್ರ ಗೌಡ ಪೊದುoಬಿಲ ಲೆಕ್ಕ ಪತ್ರ ಮಂಡನೆ ಮಾಡಿದರು. ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಮಹಿಳಾ ವೇದಿಕೆ ಅಧ್ಯಕ್ಷರಾದ ಶ್ರೀಮತಿ ಅಪರ್ಣ ಶಿವಕಾಂತ ಗೌಡ ಧನ್ಯವಾದವಿತ್ತರು. ಕಾರ್ಯಕ್ರಮ ನಿರೂಪಣೆಯನ್ನು ಯುವ ವೇದಿಕೆ ಕಾರ್ಯದರ್ಶಿಯಾದ ಪ್ರಕಾಶ್ ಗೌಡ ಕೆದ್ಲ ಮತ್ತು ಶ್ರೀಮತಿ ಗೀತಾ ಚಿದಾನಂದ ಗೌಡ ಬಡೆಕೊಟ್ಟು ಮಾಡಿದರು.

Related posts

ಕೆ.ಎಸ್.ಎಂ.ಸಿ.ಎ ಕೇಂದ್ರ ಸಮಿತಿಯ ವತಿಯಿಂದ ಉಜಿರೆ ಸಂತ ಜಾರ್ಜ್ ದೇವಾಲಯಕ್ಕೆ ಭೇಟಿ

Suddi Udaya

ಅರಸಿನಮಕ್ಕಿ: ಶೌರ್ಯ ವಿಪತ್ತು ಘಟಕದ ಸದಸ್ಯರಿಂದ ವಾತ್ಸಲ್ಯ ಮನೆ ನಿರ್ಮಾಣದ ಶ್ರಮದಾನ

Suddi Udaya

ಸುಳ್ಯೋಡಿ: ಮಾತೃಭೋಜನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಸನ್: ಅತ್ಯುತ್ತಮ ವಲಯ ಪ್ರಶಸ್ತಿಯಲ್ಲಿ ಬೆಳ್ತಂಗಡಿ ವಲಯ ತೃತೀಯ ಸ್ಥಾನ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಗರಿ

Suddi Udaya

ಉಜಿರೆ ಯು.ಎಸ್. ಅಟೋ ಚಾಲಕರ-ಮಾಲಕರ ಸಂಘದ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya
error: Content is protected !!