25.5 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಸಂಘ-ಸಂಸ್ಥೆಗಳು

ಮುಂಡಾಜೆ: ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಅಧ್ಯಯನ ಕೇಂದ್ರ ಉದ್ಘಾಟನೆ

ಮುಂಡಾಜೆ: ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಸಹಯೋಗದೊಂದಿಗೆ ಮುಂಡಾಜೆ ಶಾರದ ನಗರ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಅಧ್ಯಯನ ಕೇಂದ್ರ ಇದರ ಉದ್ಘಾಟನಾ ಕಾರ್ಯಕ್ರಮವು ನ. 17ರಂದು ಶ್ರೀ ದುರ್ಗಾಪರಮೇಶ್ವರೀ ಆರಾಧನಾ ಮಂದಿರದ ವಠಾರದಲ್ಲಿ ನಡೆಯಿತು.

ಅನಂತ್ ಭಟ್ ಮಚ್ಚಿಮಲೆ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ನಮ್ಮ ಪುರಾಣವನ್ನು ಮುಂದಿನ ಪೀಳಿಗೆಗೆ, ನವರಸ ಭರಿತ ರೂಪಕದ ಮೂಲಕ ತಿಳಿಸುವಂತಹದ್ದು ಯಕ್ಷಗಾನ ಕಲೆ. ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಅಧ್ಯಯನ ಕೇಂದ್ರ ಉನ್ನತವಾಗಿ ಬೆಳಗಲಿ, ನಮ್ಮೆಲ್ಲರ ಸಹಕಾರ ಸದಾ ಇರುತ್ತದೆ ಎಂದು ಶುಭಹಾರೈಸಿದರು.

ಯಕ್ಷಗುರು ರವಿಕುಮಾರ್ ಮುಂಡಾಜೆ ಪ್ರಾಸ್ತವಿಕವಾಗಿ ಮಾತನಾಡಿ, ಯಕ್ಷಗಾನದಲ್ಲಿ ನಾವು ಮಾತ್ರ ಕಾಣಿಸಿಕೊಳ್ಳುವುದಲ್ಲ, ನಮ್ಮ ಊರು ಕಾಣಿಸಿಕೊಳ್ಳಬೇಕು, ಹಾಗೂ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ಯಕ್ಷಗಾನ ಅಧ್ಯಯನ ಕೇಂದ್ರ ಪ್ರಾರಂಭ ಮಾಡಿರುವಂತಹದ್ದು. ನಾವು ಕಷ್ಟಪಟ್ಟು ಕಲಿತಂತಹ ವಿದ್ಯೆಯನ್ನು ಇನ್ನೊಬ್ಬನಿಗೆ ಧಾರೆ ಎರೆದು ಕೊಟ್ಟರೆ ಗುರು ಋಣದಿಂದ ಮುಕ್ತಿ ಹೊಂದಲು ಸಾಧ್ಯ ಎಂದರು.

ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಬಂಗೇರ ಅಧ್ಯಕ್ಷತೆಯನ್ನು ವಹಿಸಿದ್ದರು.

ಅತಿಥಿಗಳಾಗಿ ಯಕ್ಷಗಾನ ಅಕಾಡೆಮಿ ಸದಸ್ಯರಾದ ದಯಾನಂದ ಪಿ. ಬೆಳಾಲು, ರಾಘವ ಹೆಚ್. ಗೇರುಕಟ್ಟೆ, ಯಕ್ಷಗಾನ ಗುರುಗಳು ದಿವಾಣ ಶಿವಶಂಕರ್ ಭಟ್, ಕಟೀಲು ಮೇಳದ ಯಕ್ಷಗಾನ ಕಲಾವಿದ ರಾಮಣ್ಣ ಭಂಡಾರಿ, ಮುಂಡಾಜೆ ಕಲಾಕುಂಚ ಕಲಾವಿದ ಜಯರಾಮ ಕೆ., ಕೀರ್ತನಾ ಕಲಾತಂಡ ಸಂಚಾಲಕ ಸದಾನಂದ ಬಿ., ಸಿವಿಲ್ ಗುತ್ತಿಗೆದಾರರು ಚೆನ್ನಕೇಶವ ನಾಯ್ಕ ಅರಸಮಜಲು, ಶ್ರೀ ಮಂಜುಶ್ರೀ ಭಜನಾ ಮಂಡಳಿ ಕಾರ್ಯದರ್ಶಿ ಉಮೇಶ ಆಚಾರ್ಯ, ಜನಪದ ಕಲಾವಿದೆ ಶ್ರೀಮತಿ ರವಿ ರಂಜಿನಿ ಉಪಸ್ಥಿತರಿದ್ದರು.

ಕಲಾವಿದರಾದ ಜಯರಾಮ್ ಕೆ. ನಿರೂಪಿಸಿದರು.

Related posts

ಧರ್ಮಸ್ಥಳ: ಜೋಡುಸ್ಥಾನದಲ್ಲಿ ಮಹಿಳೆ ನೇಣುಬಿಗಿದು ಆತ್ಮಹತ್ಯೆ

Suddi Udaya

ಜಾಗತಿಕ ಕ್ರೀಡೋತ್ಸವದ ಪದಾಧಿಕಾರಿಗಳ ಪೂರ್ವಭಾವಿ ಸಭೆ

Suddi Udaya

ವೇಣೂರು: ಭಾರತೀಯ ಜೈನ್ ಮಿಲನ್ ವತಿಯಿಂದ ಪ್ರತಿಷ್ಠಿತ ವಿಜಯರತ್ನ ಪ್ರಶಸ್ತಿ ಪುರಸ್ಕೃತ ಸುಮಂತ್ ಕುಮಾರ್ ಜೈನ್‌ರವರಿಗೆ ಅಭಿನಂದನೆ

Suddi Udaya

ಬೆಳ್ತಂಗಡಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ , ನ್ಯಾಷನಲ್ ಇನ್ಶುರೆನ್ಸ್ ಕಂಪನಿ ಬಂಟ್ವಾಳ ಬ್ರಾಂಚ್ ಮತ್ತು ಜೆಸಿಐ ಸೀನಿಯರ್ ಛೇಂಬರ್ ವತಿಯಿಂದ ಮಹಾತ್ಮ ಗಾಂಧಿ ಜಯಂತಿ ಆಚರಣೆ

Suddi Udaya

ಸೌಜನ್ಯ ಸಾವು ಪ್ರಕರಣ: ಸರಕಾರ ಹಾಗೂ ತನಿಖಾ ಸಂಸ್ಥೆ ಸೂಕ್ತ ನ್ಯಾಯ ಒದಗಿಸಲಿ: ಡಾ. ಹೆಗ್ಗಡೆ

Suddi Udaya

ಎಕ್ಸೆಲ್ ಕಾಲೇಜಿನಲ್ಲಿ ಎಸ್ ಎಸ್ ಎಲ್ ಸಿ ನಂತರ ಮುಂದೇನು ವಿಶೇಷ ಕಾರ್ಯಾಗಾರ

Suddi Udaya
error: Content is protected !!