24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಒಡಿಯೂರು ಶ್ರೀ ಸೌಹಾರ್ದ ಸಹಕಾರಿ ಸಂಘದ 22ನೇ ಮಡಂತ್ಯಾರು ಶಾಖೆ ಉದ್ಘಾಟನೆ

ಮಡಂತ್ಯಾರು : ಒಡಿಯೂರು ಕ್ಷೇತ್ರದಲ್ಲಿ ಪ್ರಧಾನ ಕಚೇರಿ ಹೊಂದಿರುವ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 22ನೇ ಮಡಂತ್ಯಾರು ಶಾಖೆ ಉದ್ಘಾಟನೆ ಸಮಾರಂಭ ನ.18ರಂದು ಮಡಂತ್ಯಾರು ಆಲ್ಫಾ ಕಾಂಪ್ಲೆಕ್ಸ್‌ನ ಮೊದಲನೇ ಮಹಡಿಯಲ್ಲಿ ನಡೆಯಿತು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಶಾಖೆಯನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.


ಸಹಕಾರಿ ಗೌರವ ಮಾರ್ಗದರ್ಶಕರಾದ ಸಾಧ್ಯ ಶ್ರೀ ಮಾತಾನಂದಮಯೀ ದಿವ್ಯ ಸಾನ್ನಿಧ್ಯ ವಹಿಸಿದರು.
ಮುಖ್ಯ ಅತಿಥಿಗಳಾಗಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಧರ್ಮಗುರು ಫಾ। ಸ್ಪ್ಯಾನಿ ಗೋವೆಸ್, ಶಾಸಕ ಹರೀಶ್ ಪೂಂಜ, ಗುರುವಾಯನಕೆರೆ ಬಂಟರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಪಿಲಾತಬೆಟ್ಟು, ವ್ಯ.ಸೇ.ಸ.ಸಂಘದ ಮಾಜಿ ಅಧ್ಯಕ್ಷ ಯು.ಚಂದ್ರಶೇಖರ ಭಟ್, ವೇ। ಮೂ| ಚಂದ್ರಶೇಖರ ಉಪಾಧ್ಯಾಯ,ಶಶಿಧರ್ ಶೆಟ್ಟಿ ಬರೋಡ,ದಂತ ವೈದ್ಯ ಡಾ| ವಿಶು ಕುಮಾರ್ ಶೆಟ್ಟಿ ಬಿ.,ರತ್ನಾಕರ ಶೆಟ್ಟಿ ಮುಡಯೂರು,ಪಂ.ಅಧ್ಯಕ್ಷರಾದ ರೂಪಾ, ಕಟ್ಟಡ ಮಾಲೀಕರಾದ ಲಾವ್ಯ ಮೀನ, ನವೀನ್ ಭಾರತೀ ಜಿ.ಭಟ್, ಗುರುಪ್ರಸಾದ್ ಬಂಗೇರ, ವಿಜಯ ಬಿ.ಎಸ್, ಮಾತೇಶ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.


ಸಹಕಾರ ರತ್ನ, ಸಂಘದ ಅಧ್ಯಕ್ಷ ಲ|ಎ.ಸುರೇಶ್ ರೈ.ಪ್ರಸ್ತಾವನೆ ಮಾಡಿ, ಸ್ವಾಗತಿಸಿದರು.

Related posts

ಕುವೆಟ್ಟು: ಚರಂಡಿ ವ್ಯವಸ್ಥೆ ದುರಸ್ತಿಗೊಳಿಸಿ, ಕಾಮಗಾರಿ ಪ್ರಾರಂಭ ಮಾಡುವಂತೆ ಕುವೆಟ್ಟು ಗ್ರಾ.ಪಂ. ಅಧ್ಯಕ್ಷೆ ಹಾಗೂ ಪಿಡಿಒ ರವರಿಗೆ ಮನವಿ

Suddi Udaya

ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Suddi Udaya

‘ಪ್ರಾಚೀನ ಕನ್ನಡ ಸಾಹಿತ್ಯ ಅಧ್ಯಯನ: ಪ್ರಾರಂಭಿಕ ಪ್ರಯತ್ನಗಳು’ ಪ್ರಚಾರೋಪನ್ಯಾಸ ಕಾರ್ಯಕ್ರಮ

Suddi Udaya

ಬದ್ಯಾರು-ಶಿರ್ಲಾಲು ಲೋಕನಾಥೇಶ್ವರ ಭಜನಾ ಮಂಡಳಿ ಹಾಗೂ ಶ್ರೀದೇವಿ ಮಹಿಳಾ ಕೇಂದ್ರದ 25ನೇ ವರ್ಷದ ಬೆಳ್ಳಿ ಹಬ್ಬ ಸಂಭ್ರಮ:

Suddi Udaya

” ಗೃಹಲಕ್ಷ್ಮಿ” ಯೋಜನೆಯ ನೋಂದಾವಣೆ : ರಜಾ ದಿನದಲ್ಲೂ ಕಾರ್ಯನಿರ್ವಹಿಸಿದ ಕಳಿಯ ಗ್ರಾ.ಪಂ.

Suddi Udaya

ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಡಯಾಲಿಸಿಸ್ ಯಂತ್ರ ಕೆಟ್ಟು ಹೋದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮಾಜಿ ಶಾಸಕ ವಸಂತ ಬಂಗೇರ

Suddi Udaya
error: Content is protected !!