ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಮಂಜುಶ್ರೀ ಮತ್ತು ಲಯನ್ಸ್ ಕ್ಲಬ್ ಬೆಳ್ತಂಗಡಿಯು ಜಂಟಿಯಾಗಿ ದೀಪಾವಳಿ ಹಬ್ಬ ತುಳುನಾಡ ತುಡರ್ ಪರ್ಬವನ್ನು ಜೆಸಿ ಭವನದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಬೆಳ್ತಂಗಡಿಯ ಅಧ್ಯಕ್ಷರಾದ ದೇವದಾಸ್ ಶೆಟ್ಟಿ ಹಿಬರೋಡಿಯವರು ದೀಪ ಬೆಳಗಿಸುವ ಮುಖಾಂತರ ಉದ್ಘಾಟಿಸಿ, ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷರಾದ ರಂಜಿತ್ ಎಚ್ ಡಿ ಬಳoಜ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಲಯ ಉಪಾಧ್ಯಕ್ಷರಾದ ಶಂಕರ್ ರಾವ್ ದೀಪದ ಹಬ್ಬದ ಮಹತ್ವವನ್ನು ತಿಳಿಸಿದರು. ಎರಡು ಪ್ರತಿಷ್ಠಿತ ಅಂತಾರಾಷ್ಟ್ರೀಯ ಸಂಸ್ಥೆಗಳು ಜಂಟಿಯಾಗಿ ಹಬ್ಬ ವನ್ನು ಆಚರಿಸುತ್ತಿರುವ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ವೇದಿಕೆಯಲ್ಲಿ ಲಯನ್ಸ್ ಕ್ಲಬ್ ನ ಕಾರ್ಯದರ್ಶಿಗಳಾದ ಕಿರಣ್ ಕುಮಾರ್ ಶೆಟ್ಟಿ, ಲೇಡಿ ಜೆಸಿ ಸಂಯೋಜಕರಾದ ಶ್ರುತಿ ರಂಜಿತ್, ಜೆಜೆಸಿ ಅಧ್ಯಕ್ಷರಾದ ಸಮನ್ವಿತ್ ಕುಮಾರ್, ಕಾರ್ಯಕ್ರಮದ ಸಂಯೋಜಕರಾದ ಜಯರಾಜ್ ಬಂಗೇರ ನಡಕ್ಕರ ಹಾಗೂ ಮಾಮಿತಾ ಸುಧೀರ್ ಉಪಸ್ಥಿತರಿದ್ದರು.
ಬಲಿಂದ್ರ ಪಾರ್ಧನದ ಮಹತ್ವವನ್ನು ಸಂಯೋಜಕರಾದ ಜಯರಾಜ್ ರವರು ಉಲ್ಲೇಖಿಸಿದರು. ನಂತರ ಎಲ್ಲರೂ ಸೇರಿ ದಾಂಡಿಯಾ ನೃತ್ಯ ಮಾಡಿ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಬೆಳ್ತಂಗಡಿ ಹಾಗೂ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಪೂರ್ವಧ್ಯಕ್ಷರುಗಳು, ಪದಾಧಿಕಾರಿಗಳು ಸದಸ್ಯರುಗಳು ಉಪಸ್ಥಿತರಿದ್ದರು.
ಉಪಾಧ್ಯಕ್ಷೆ ಹೇಮಾವತಿ ಕೆ ಸ್ವಾಗತಿಸಿ , ಜೆಸಿ ವಾಣಿಯನ್ನು ರಕ್ಷಿತಾ ಶೆಟ್ಟಿ ಉದ್ಘೋಷಿಸಿದರು. ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಕಿರಣ್ ಕುಮಾರ್ ಶೆಟ್ಟಿ ಧನ್ಯವಾದವಿತ್ತರು.