April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿ

ಧರ್ಮಸ್ಥಳ: ರಾಷ್ಟ್ರೀಯ ತುಳು ಗುಡಿಗಾರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ಕೆಸರು ಗದ್ದೆ ಕಾರ್ಯಕ್ರಮ

ಧರ್ಮಸ್ಥಳ : ರಾಷ್ಟ್ರೀಯ ತುಳು ಗುಡಿಗಾರರ ಸಂಘ ದಕ್ಷಿಣ ಕನ್ನಡ ಜಿಲ್ಲೆ -ಉಡುಪಿ ಜಿಲ್ಲೆ ಕಟ್ಟದಬೈಲು ಧರ್ಮಸ್ಥಳ ಇದರ ಆಶ್ರಯದಲ್ಲಿ ವಾರ್ಷಿಕ ಮಹಾಸಭೆ 2023-24 ಮತ್ತು ಕೆಸರು ಗದ್ದೆ ಕಾರ್ಯಕ್ರಮ ನ.17 ರಂದು ಶ್ರೀ ರಾಮಭಜನಾ ಮಂದಿರ ಕಟ್ಟದಬೈಲು ಇಲ್ಲಿ ನಡೆಯಿತು.

ಸಭಾಧ್ಯಕ್ಷತೆಯನ್ನು ರಾಷ್ಟ್ರೀಯ ತುಳು ಗುಡಿಗಾರ್ ಸಂಘದ ಅಧ್ಯಕ್ಷ ರವೀಂದ್ರ ಗುಡಿಗಾರ್ ವಹಿಸಿದರು.

ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ತುಳು ಗುಡಿಗಾರ್ ಸಂಘ ಉಪಾಧ್ಯಕ್ಷರಾದ ಮಂಜುನಾಥ ಗುಡಿಗಾರ್ ಕಟ್ಟದಬೈಲು, ಶಾಂತಿರಾಜ್ ಗುಡಿಗಾರ್ ಅಳದಂಗಡಿ, ಜೊತೆ ಕಾರ್ಯದರ್ಶಿ ಆದರ್ಶ ಗುಡಿಗಾರ್, ಕೋಶಾಧಿಕಾರಿ ಕವಿತಾ ರಾಜೇಂದ್ರ ಗುಡಿಗಾರ್ ಅಂತರಬೈಲು, ನಿರ್ದೇಶಕರಾದ ರಮೇಶ್ ಗುಡಿಗಾರ್ ಅಂತರಬೈಲು, ಉದಯ ಗುಡಿಗಾರ್, ಮುಂಬೈ, ಗಣೇಶ ಗುಡಿಗಾರ್ ನಾವೂರು, ದೇವಿಪ್ರಸಾದ್ ಎನ್. ಗುಡಿಗಾರ್ ಉಡುಪಿ, ಚಂದ್ರಶೇಖರ ಗುಡಿಗಾರ್ ಸವಣಾಲು, ಪ್ರಮೋದ್ ಗುಡಿಗಾರ್ ಉಡುಪಿ, ಸತ್ಯನಾರಾಯಣ ಗುಡಿಗಾರ್ ಅಂತರಬೈಲು, ವಿಶ್ವೇಶ್ ಗುಡಿಗಾರ್ ಅಂತರಬೈಲು ಉಪಸ್ಥಿತರಿದ್ದರು.

ಈ ವೇಳೆ ಮಕ್ಕಳಿಗೆ ಪುರುಷರಿಗೆ, ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.

ಸಂಜೆ ನಡೆದ ಸಮಾರೋಪದಲ್ಲಿ ಹಲವು ಗಣ್ಯರು ಭಾಗವಹಿಸಿ ಆಟೋಟ ಸ್ಪರ್ಧೆಯಲ್ಲಿ ಜಯಶಾಲಿಯಾದ ಎಲ್ಲಾ ಸ್ಪರ್ಧಿಗಳಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು..

ಈ ಸಂದರ್ಭದಲ್ಲಿ ರಾಷ್ಟ್ರೀಯ ತುಳು ಗುಡಿಗಾರರ ಸಂಘ ಸರ್ವ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.

Related posts

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ತಾಂತ್ರಿಕ ಸ್ಪರ್ಧೆಯಲ್ಲಿ 9 ವಿಭಾಗಗಳಲ್ಲಿ ಪ್ರಶಸ್ತಿ

Suddi Udaya

ಅನಾರು ದೇವಸ್ಥಾನ ವರ್ಷಾವಧಿ ಜಾತ್ರಾ ಮಹೋತ್ಸವ: ತೋರಣ ಮುಹೂರ್ತ, ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ, ಕ್ಯಾಲೆಂಡರ್ ಬಿಡುಗಡೆ

Suddi Udaya

ಮಚ್ಚಿನ ಸ.ಪ್ರೌ. ಶಾಲೆಯಲ್ಲಿ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆ

Suddi Udaya

ಲಾಯಿಲ ಗ್ರಾಮ ಪಂಚಾಯತ್ ವಾರ್ಡ್ ಸಭೆಯಲ್ಲಿ ಗ್ರಾಮಸ್ಥರ ಆಕ್ರೋಶ

Suddi Udaya

ಉಜಿರೆ ಹಾ.ಉ.ಸ. ಸಂಘದ ವತಿಯಿಂದ ಬದನಾಜೆ ಶಾಲೆಯ ನೂತನ ಸಭಾಂಗಣಕ್ಕೆ ದೇಣಿಗೆ ಹಸ್ತಾಂತರ

Suddi Udaya

ಬ್ರೈಟ್ ಇಂಡಿಯಾ, ಮದ್ದಡ್ಕ ವತಿಯಿಂದ ವಿಕಲಚೇತನರಿಗೆ ಸಾಧನಾ ಸಲಕರಣೆಗಳ ವಿತರಣೆ

Suddi Udaya
error: Content is protected !!