23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ವಕೀಲರ ಸಂಘಕ್ಕೆ ನ್ಯಾಯಮೂರ್ತಿ ರಾಜೇಶ್‌ ರೈ ಕೈರಂಗಳ ಭೇಟಿ

ಬೆಳ್ತಂಗಡಿ: ವಕೀಲರು ವೃತ್ತಿಯಲ್ಲಿ ಪ್ರಕರಣಗಳ ಬಗ್ಗೆ ಸತತ ಪರಿಶ್ರಮ ಮತ್ತು ಅದ್ಯಯನ ನಡೆಸಿ ಕೆಲಸ ನಿರ್ವಹಿಸಿದಲ್ಲಿ ಕಕ್ಷಿಗಾರರಿಗೆ ನ್ಯಾಯ ದೊರಕುವ ಜೊತೆಗೆ ವೃತ್ತಿಯಲ್ಲಿ ಯಶಸ್ಸು ಕಾಣಲು ಸಾದ್ಯ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾದ ರಾಜೇಶ್‌ರೈ, ಕೈರಂಗಳ ಅಭಿಪ್ರಾಯಪಟ್ಟಿದ್ದಾರೆ.

ಅವರು ನ. 16 ರಂದು ಬೆಳ್ತಂಗಡಿ ವಕೀಲರ ಸಂಘಕ್ಕೆ ಭೇಟಿ ನೀಡಿ ವಕೀಲರನ್ನುದ್ದೇಶಿ ಮಾತನಾಡುತ್ತಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ವಕೀಲರುಗಳು ಅಧ್ಯಯನಶೀಲತೆಯ ಮೂಲಕ ಪಾಂಡಿತ್ಯ ಹೊಂದಿದ್ದು ನ್ಯಾಯಂಗದಲ್ಲಿ ತಮ್ಮದೇ ಆದ ಗೌರವವನ್ನು ಹೊಂದಿದ್ದಾರೆ ಎಂದವರು ಈ ಸಂಧರ್ಭದಲ್ಲಿ ಹೇಳಿದರು.

ಯುವ ವಕೀಲರು ನ್ಯಾಯಲಯದ ಕಲಾಪಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಹಿರಿಯ ನ್ಯಾಯವಾದಿಗಳು ಪ್ರಕರಣ ನಡೆಸುವ ಸಂದರ್ಭವನ್ನು ಆಲಿಸುವ ಮೂಲಕ ಸಮಯದ ಸದ್ಬಳಕೆ ಮಾಡಿಕೊಳ್ಳಬೇಕೆಂದು ಅವರು ಯುವ ವಕೀಲರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ 6೦ ವರ್ಷ ಹಳೆಯದಾದ ಬೆಳ್ತಂಗಡಿ ನ್ಯಾಯಾಲಯದ ಸಂಕೀರ್ಣವನ್ನು ವೀಕ್ಷಿಸಿ ಹೊಸ ಕಟ್ಟಡ ಮಂಜೂರಾತಿಗಾಗಿ ಸರಕಾರದ ಮಟ್ಟದಲ್ಲಿ ಒತ್ತಡ ತರಲು ವಕೀಲರ ಸಂಘದ ಜೊತೆ ಕೈ ಜೋಡಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷರಾದ ವಸಂತ ಮರಕಡ ವಹಿಸಿದ್ದರು.

ಪ್ರಧಾನ ಕಾರ್ಯದರ್ಶಿ ನವೀನ್ ಬಿ. ಕೆ ಸ್ವಾಗತಿಸಿ, ಅಪರ ಸರ್ಕಾರಿ ವಕೀಲರಾದ ಮನೋಹರ ಕುಮಾರ್, ಎ ಕಾರ್ಯಕ್ರಮ ನಿರೂಪಿಸಿದರು.

Related posts

ಪುಂಜಾಲಕಟ್ಟೆ ಸ್ಪಂದನ ಆಟೋ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆ: ಪದಾಧಿಕಾರಿಗಳ ಆಯ್ಕೆ

Suddi Udaya

ನಾಲ್ಕೂರು ರಾಮನಗರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

Suddi Udaya

ಕೂಕ್ರಬೆಟ್ಟು ಸರ್ಕಾರಿ ಶಾಲೆ: ಸ್ಮಾರ್ಟ್‌ ಕ್ಲಾಸ್‌ ಲೋಕಾರ್ಪಣೆ

Suddi Udaya

ಹತ್ಯಡ್ಕ: ನೆಕ್ಕರಡ್ಕ ನಿವಾಸಿ ಅನಸೂಯ ನಿಧನ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೂ 25 ಸಾವಿರ ಸಹಾಯಧನ ವಿತರಣೆ

Suddi Udaya

ಬಳಂಜ: ಅಟ್ಲಾಜೆ ಕ್ರಿಕೆಟರ್ಸ್ ತಂಡದಿಂದ ಮಾನವೀಯ ಕಾರ್ಯ: ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊರ್ವರಿಗೆ ರೂ 23 ಸಾವಿರ ಹಸ್ತಾಂತರ

Suddi Udaya
error: Content is protected !!