25.3 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಖ್ಯಾತ ವಕೀಲ ನಾರಾಯಣ ಸ್ವಾಮಿ ಭೇಟಿ

ಬೆಳ್ತಂಗಡಿ : ಖ್ಯಾತ ವಕೀಲ ಬೆಂಗಳೂರಿನ ನಾರಾಯಣ ಸ್ವಾಮಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನ.18 ರಂದು ಬೆಳಗ್ಗೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.

ಮುತ್ತಪ್ಪ ರೈ ಮೃತಪಟ್ಟ ಬಳಿಕ ಎರಡನೇ ಪತ್ನಿ ಮತ್ತು ಮಕ್ಕಳ ವಿರುದ್ಧ ಆಸ್ತಿ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು‌. ವರ್ಷಗಳ ಬಳಿಕ ವಕೀಲ ನಾರಾಯಣ ಸ್ವಾಮಿ ಮಧ್ಯಸ್ಥಿಕೆ ನಡೆಸಿ ಎರಡನೇ ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆ ಆಸ್ತಿ ವಿಚಾರದಲ್ಲಿ ಎರಡನೇ ಪತ್ನಿಗೆ ಸುಮಾರು 100 ಕೋಟಿ ರೂಪಾಯಿ ಪಾಲು ಮಾಡಿಸಿ ಕೋರ್ಟ್ ಪ್ರಕರಣ ರಾಜಿಯಲ್ಲಿ ಮುಗಿಸಿದ್ದರು. ಈ ಬಳಿಕ ನಾರಾಯಣ ಸ್ವಾಮಿ ಮತ್ತಿತರರು ಧರ್ಮಸ್ಥಳ , ಕುಕ್ಕೆ ಸುಬ್ರಮಣ್ಯ, ಸೌತಡ್ಕ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ.

ದರ್ಶನ ಬಳಿಕ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಖ್ಯಾತ ವಕೀಲ ನಾರಾಯಣ್ ಸ್ವಾಮಿ ಜೊತೆಯಲ್ಲಿ ಶಿವಣ್ಣ , ಶೇಷ ಕುಮಾರ್, ನಿರಂಜನ್, ಮಂಜುನಾಥ್ ಹಾಗೂ ಚಾಲಕ ಯಾಶೀನ್ ಭಾಗಿಯಾಗಿದ್ದರು.

Related posts

ಅಳದಂಗಡಿ ವಲಯದ ಬಡಗಕಾರಂದೂರು ಎ ಮತ್ತು ಬಿ ಒಕ್ಕೂಟದ ಪದಗ್ರಹಣ ಸಮಾರಂಭ

Suddi Udaya

ಗುಂಡೂರಿ: ಮುದ್ದಾಡಿ ನಿವಾಸಿ ಪುರಲ್ಲ ನಿಧನ

Suddi Udaya

ಲಾಯಿಲ: ಸುಧೀರ್ ರವರ ಕೋಳಿ ಶೆಡ್ ಗೆ ಮರ ಬಿದ್ದು ಹಾನಿ

Suddi Udaya

ಡಾ. ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅಮಿತ್ ಷಾ ವಿವಾದಾತ್ಮಕ ಹೇಳಿಕೆ ಹಾಗೂ ಸಚಿವೆ ವಿರುದ್ಧ ಸಿ.ಟಿ ರವಿ ಹೇಳಿಕೆ ವಿರೋಧಿಸಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

Suddi Udaya

ಬೆಳ್ತಂಗಡಿ ಶ್ರೀ ರಾಘವೇಂದ್ರ ಸ್ವಾಮಿ ಬ್ರಹ್ಮಕಲಶೋತ್ಸವ ಸಮಿತಿಯ ಸಮಾಲೋಚನೆ ಸಭೆ: ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಆಯ್ಕೆ

Suddi Udaya

ಧರ್ಮಸ್ಥಳ ಹರ್ಷೇಂದ್ರ ಕುಮಾರ್ ಪ್ರತಿಷ್ಠಿತ ಅಗರಿ ಪ್ರಶಸ್ತಿಗೆ ಆಯ್ಕೆ

Suddi Udaya
error: Content is protected !!