ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ದ.ಕ. ಸಹಕಾರಿ ಹಾಲು ಒಕ್ಕೂಟದಿಂದ ನಂದಿನಿ ಪ್ರಿಮಿಯಮ್ ಪ್ರೊಬಯಾಟಿಕ್ ಮೊಸರು ಬಿಡುಗಡೆ

ಬೆಳ್ತಂಗಡಿ: 71ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಕಾರ್ಯಕ್ರಮದಂದು ಪ್ರತಿ ವರ್ಷದಂತೆ ಈ ವರ್ಷವೂ ದಕ್ಷಿಣ ಕನ್ನಡ ಹಾಲು ಒಕ್ಕೂಟವು ಕೆ.ಎಂ.ಎಫ್. ವ್ಯಾಪ್ತಿಯಲ್ಲಿಯೇ ಪ್ರಪ್ರಥಮವಾಗಿ ನಂದಿನಿ ಪ್ರಿಮಿಯಮ್ ಪ್ರೊಬಯಾಟಿಕ್ ಮೊಸರನ್ನು ಕರ್ನಾಟಕ ಸರಕಾರದ ಸಹಕಾರ ಸಚಿವ ಕೆ. ಎನ್. ರಾಜಣ್ಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಸಚಿವ ದಿನೇಶ್ ಗುಂಡುರಾವ್ ಮತ್ತು ಇತರ ಗಣ್ಯರ ಸಮಕ್ಷಮದಲ್ಲಿ ಬಿಡುಗಡೆಗೊಳಿಸಿದರು.

15ದಿನಗಳ ಜೀವಿತಾವಧಿಯನ್ನು ಹೊಂದಿರುವ ಈ ಉತ್ಪನ್ನದ ಸೇವನೆಯಿಂದ ಉತ್ತಮ ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿಯ ಸುಧಾರಣೆ, ಮೂಳೆಗಳ ಬೆಳವಣಿಗೆ, ತೂಕ ನಿರ್ವಹಣೆ, ಹೃದಯ ರಕ್ತನಾಳದ ಆರೋಗ್ಯ ವೃದ್ಧಿ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದ್ದು ಎಲ್ಲಾ ವಯೋಮಾನದವರು ಉಪಯೋಗಿಸಲು ಯೋಗ್ಯವಾಗಿದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡದುಕೊಳ್ಳುವಂತೆ ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿಯವರು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಒಕ್ಕೂಟದ ಉಪಾಧ್ಯಕ್ಷ ಎಸ್. ಬಿ. ಜಯರಾಮ ರೈ, ಒಕ್ಕೂಟದ ನಿರ್ದೇಶಕರುಗಳು, ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ. ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು

Related posts

ಬೆಳಗಾವಿ ಅಧಿವೇಶನ: ಅಧಿಕ ಮಳೆಯಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ: ಪ್ರತಾಪ್ ಸಿಂಹ ನಾಯಕ್

Suddi Udaya

ಟೀಂ ಅಭಯಹಸ್ತ ವತಿಯಿಂದ ಸರ್ಕಾರಿ ಶಾಲೆಗಳಲ್ಲಿ ಸ್ಪರ್ಧಾ ಕಾರ್ಯಕ್ರಮಗಳ ಆಯೋಜನೆ

Suddi Udaya

ಶ್ರೀ ರಾಮ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಗೆ ಪ್ರಗತಿ ಪರಿಶೀಲನ ತಂಡ ಭೇಟಿ

Suddi Udaya

ಕುತ್ಲೂರು ಮನೆ ಕಳ್ಳತನ ಪ್ರಕರಣ: ಕುಖ್ಯಾತ ಕಳ್ಳ ಇತ್ತೆ ಬರ್ಪೆ ಅಬೂಬಕ್ಕರ್ ಬಂಧನ

Suddi Udaya

ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ “ಬ್ಯಾಂಕಿಂಗ್ ಸೆಕ್ಟರ್ಸ್ ರಿಫಾರ್ಮ್ಸ್ ” ಮಾಹಿತಿ ಕಾರ್ಯಗಾರ

Suddi Udaya
error: Content is protected !!