ನ್ಯಾಯತರ್ಪು : ಇಲ್ಲಿನ ರಕ್ತೇಶ್ವರಿಪದವು ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿಯ 25ನೇ ವರ್ಷದ ವಾರ್ಷಿಕ ನಗರ ಭಜನೆ ಕಾರ್ಯಕ್ರಮಕ್ಕೆ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಭಂದಕ ಗಿರೀಶ್ ಶೆಟ್ಟಿ ಗೇರುಕಟ್ಟೆ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ, ಹಿಂದೂ ಸನಾತನ ಧರ್ಮದ ಮೂಲ ಭಜನೆ. ಕಳೆದ 25 ವರ್ಷಗಳಿಂದ ಪ್ರತಿ ವರ್ಷವೂ ಭಜನ ಮಂಡಳಿ ಆಸುಪಾಸಿನಲ್ಲಿ 1 ವಾರಗಳ ಕಾಲ ಸಂಜೆ ಸಮಯದಲ್ಲಿ ಪ್ರತಿ ಮನೆ, ಮನೆಗೆ ಭೇಟಿ ನೀಡುವ ಮೂಲಕ ಧರ್ಮ ಮತ್ತು ದೇವರ ಸಂಕಿರ್ತನೆಯನ್ನು ಹಾಡುವ ಜೊತೆಗೆ ಭಕ್ತಿ, ಧಾರ್ಮಿಕ ಚಿಂತನೆಯಲ್ಲಿ ಯುವಕರನ್ನು ಹಾಗೂ ಮಕ್ಕಳನ್ನು ತೊಡಗಿಸಿಕೊಂಡಾಗ ಮುಂದಿನ ಪೀಳಿಗೆಗೆ ಧರ್ಮ ಜಾಗೃತಿಯಾಗಲು ಮಾದರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಭಜನಾ ಮಂಡಳಿಯ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಲಾಯಿತು. ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಸಿಬ್ಬಂದಿ ಜಯರಾಮ ಭಟ್, ಭಜನಾ ಮಂಡಳಿ ಅಧ್ಯಕ್ಷ ವಸಂತ ಗೌಡ ಕೆ. ಕಾರ್ಯದರ್ಶಿ ಯೋಗೀಶ್ ಎಮ್., ಭಜನಾ ಮಂಡಳಿ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷ ಉಮೇಶ್ ಕೇಲ್ದಡ್ಕ ಸ್ವಾಗತಿಸಿ, ಧನ್ಯವಾದವಿತ್ತರು.