September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ: ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

ಬೆಳ್ತಂಗಡಿ: ತಾಲೂಕು ಸಾರ್ವಜನಿಕ ಆಸ್ಪತ್ರೆ ಬೆಳ್ತಂಗಡಿ ಇಲ್ಲಿ ತಾಲೂಕಿನ ವಿಕಲಚೇತನ ಗುರುತಿನ ಚೀಟಿಯ ನವೀಕರಣ ಹಾಗೂ ಹೊಸ ವಿಕಲಚೇತನರ ಗುರುತಿಸುವ ಪ್ರಕ್ರಿಯೆಯನ್ನು ತಾಲೂಕು ಆಸ್ಪತ್ರೆ ಬೆಳ್ತಂಗಡಿಯಲ್ಲಿ ನ.19ರಂದು ನಡೆಸಲಾಯಿತು..

ಶಿಬಿರವನ್ನು ತಾಲೂಕು ವಿಕಲಚೇತನರ ಮೇಲ್ವಿಚಾರಕ (MRW ) ಜೋನ್ ಬ್ಯಾಪಿಸ್ಟ್ ರವರ ಮಾರ್ಗದರ್ಶನದಲ್ಲಿ ನಡೆಸಲಾಯಿತು. ಶಿಬಿರವನ್ನು ತಾಲೂಕಿನ ನಗರ ಪುನರ್ವಸತಿ ಕಾರ್ಯಕರ್ತರು, ನಗರ ಪಂಚಾಯತ್ ಬೆಳ್ತಂಗಡಿ, ಹಾಗೂ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತ್ ಗಳ ಗ್ರಾಮೀಣ ಪೂರ್ವಸತಿ ಕಾರ್ಯಕರ್ತರ ಸಹಕಾರದೊಂದಿಗೆ, ತಾಲೂಕಿನ ಅನೇಕ ವಿಕಲಚೇತನರಿಗೆ ಗುರುತಿನ ಚೀಟಿ ನೀಡಲಾಯಿತು.

ಜಿಲ್ಲಾ ಆಸ್ಪತ್ರೆಯಾದ ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಮಂಡಳಿಯ ವೈದ್ಯರ ಮೂಲಕ ಹಾಗೂ ಸಿಬ್ಬಂದಿ ವರ್ಗದವರ ಉಪಸ್ಥಿತಿಯಲ್ಲಿ ತಾಲೂಕಿನ ಅನೇಕ ಬುದ್ಧಿಮಾಂದ್ಯ ಮತ್ತು ಮಾನಸಿಕ ವಿಕಲಚೇತನರಿಗೆ ಗುರುತಿನ ಚೀಟಿ ನೀಡಿ ಅವರಿಗೆ ಸಿಗಬೇಕಾದ ಸರ್ಕಾರ ಸೌಲಭ್ಯ ಯೋಜನೆಗಳನ್ನು ಪಡೆದುಕೊಳ್ಳಲು ಸಹಕಾರ ಆಗಲು ಯಶಸ್ವಿಯಾಗುವ ಮೂಲಕ ತಾಲ್ಲೂಕಿನ ವಿಕಲಚೇತನರಿಗೆ ಅನುಕೂಲ ಮಾಡಿ ನೀಡಲಾಯಿತು.

Related posts

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ವಿಧಿವಶ

Suddi Udaya

ಉಜಿರೆ: ನಾಪತ್ತೆಯಾಗಿದ್ದ ಕ್ರೀಡಾ ವಸತಿ ನಿಲಯದ ಪಿಯುಸಿ ವಿದ್ಯಾರ್ಥಿನಿ ಹೈದರಾಬಾದ್ ನಲ್ಲಿ ಪತ್ತೆ

Suddi Udaya

ಅರಸಿನಮಕ್ಕಿಯಲ್ಲಿ ನಾಟಿ ಕೋಳಿ ಮೊಟ್ಟೆ ಸಾಕಾಣಿಕೆ ತರಬೇತಿ

Suddi Udaya

ಉಡುಪಿ ಶ್ರೀಕೃಷ್ಣ ಮಾಸೋತ್ಸವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ದಂಪತಿಗಳಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವ

Suddi Udaya

ಧರ್ಮಸ್ಥಳ ಕುರಿತು ನಡೆಯುತ್ತಿರುವ ಅಪಪ್ರಚಾರ ವಿರೋಧಿಸಿ, ಬೆಂಗಳೂರಿಂದ ಧರ್ಮಸ್ಥಳ ಚಲೋ’ ಅಭಿಯಾನ ಆರಂಭ: 400ಕ್ಕೂ ಹೆಚ್ಚು ವಾಹನಗಳಲ್ಲಿ ಆಗಮಿಸುತ್ತಿರುವ ಭಕ್ತರು

Suddi Udaya

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಯಲ್ಲಿ ಪ್ರತಿಭಾ ದಿನಾಚರಣೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ

Suddi Udaya
error: Content is protected !!