24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನಕ್ಸಲ್ ನಾಯಕ ವಿಕ್ರಮ್ ಗೌಡ ನಕ್ಸಲ್ ನಿಗ್ರಹ ದಳದ ಎನ್ ಕೌಂಟರ್ ನಲ್ಲಿ ಹತ್ಯೆ: ರಾಜ್ಯ ಸರ್ಕಾರ ತಕ್ಷಣ ಎನ್ ಕೌಂಟರ್ ನ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು: ಶೇಖರ್ ಲಾಯಿಲ

ಬೆಳ್ತಂಗಡಿ: ಕರ್ನಾಟಕ ರಾಜ್ಯದಲ್ಲಿ 21 ವರ್ಷಗಳ ಹಿಂದೆ ಕಾರ್ಕಳ ತಾಲೂಕಿನ ಈದುವಿನಲ್ಲಿ ನಡೆದ ಎನ್ ಕೌಂಟರ್ ಬಳಿಕ ಹತ್ತಾರು ನಕ್ಸಲ್ ಎನ್ ಕೌಂಟರ್ ನಡೆದಿದೆ. ಯಾವುದೇ ಎನ್ ಕೌಂಟರ್ ನಡೆಸುವ ಮೊದಲು ಯಾವುದೇ ಮನೆಯನ್ನು ತೆರವು ಮಾಡಿದ ಇತಿಹಾಸವಿಲ್ಲ. ಆದರೆ ವಿಕ್ರಮ್ ಗೌಡ ಎನ್ ಕೌಂಟರ್ ನಲ್ಲಿ ಮಾತ್ರ ಎನ್ ಕೌಂಟರ್ ಮೊದಲು ಸ್ಥಳೀಯ ಮನೆಯವರನ್ನು ತೆರವು ಮಾಡಿದ ಎರಡು ದಿನಗಳ ನಂತರ ಎನ್ ಕೌಂಟರ್ ನಡೆಸಿದ ಘಟನೆ ಸಂಶಯಕ್ಕೆ ಕಾರಣವಾಗಿದೆ. ಎನ್ ಕೌಂಟರ್ ನಡೆದ ಸ್ಥಳಕ್ಕೆ ಪತ್ರಿಕೆ , ಟಿವಿ ಮಾದ್ಯಮದವರನ್ನು ಪ್ರವೇಶ ನೀಡದೆ , ಶವವನ್ನು ನೋಡಲು ನಕ್ಸಲ್ ನಿಗ್ರಹ ದಳ ಬಿಡಲಿಲ್ಲ. ಮನೆಯೊಂದರಲ್ಲಿ ಎನ್ ಕೌಂಟರ್ ನಡೆದಿದೆ ಎನ್ನುವ ಪೋಲಿಸ್ ಇಲಾಖೆಯ ಹೇಳಿಕೆ ಇನ್ನೊಂದು ರೀತಿಯಲ್ಲಿ ಸಂಶಯಕ್ಕೆ ಕಾರಣವಾಗಿದೆ. ನಕ್ಸಲರು ನಡೆಸಿದ ಪ್ರತಿದಾಳಿಯಲ್ಲಿ ಪೋಲಿಸರಿಗೆ ಗಾಯವಾಗಿಲ್ಲ. ನಕ್ಸಲರ ಪ್ರತಿದಾಳಿಯ ಗುಂಡು ಯಾವುದಕ್ಕೆ ತಗುಲಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ರಾಜ್ಯದ ನಕ್ಸಲ್ ನಿಗ್ರಹ ದಳ ಇರುವಾಗ, ಎನ್ ಕೌಂಟರ್ ನಡೆಯುವ ಮೊದಲು ಕೇಂದ್ರ ಸಶಸ್ತ್ರ ಪಡೆಗಳನ್ನು ಕರೆಸಿಕೊಂಡಿದ್ದು ಏಕೆ ? ಎನ್ ಕೌಂಟರ್ ನಡೆಸಿದ್ದು ನಕ್ಸಲ್ ನಿಗ್ರಹ ದಳವೋ ಅಥವಾ ಕೇಂದ್ರ ಸಶಸ್ತ್ರ ಪಡೆಯೋ ಎಂಬ ಅನುಮಾನದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಬೆಳ್ತಂಗಡಿ ಹೋರಾಟಗಾರ ಶೇಖರ್ ಲಾಯಿಲ ತಿಳಿಸಿದ್ದಾರೆ.

Related posts

ತೋಟತ್ತಾಡಿ: ಚಿಬಿದ್ರೆ ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘದ ನೂತನ ಪದಾಧಿಕಾರಿಗಳ ಸಮಿತಿ ರಚನೆ

Suddi Udaya

ಭಾರೀ ಮಳೆಗೆ ಕಾಯರ್ತಡ್ಕ ಮೈರಾರ್ ‍ನಲ್ಲಿ ಸೇತುವೆ ಮುಳುಗಡೆ

Suddi Udaya

ಕುಕ್ಕೇಡಿ ಗ್ರಾ.ಪಂ. ವತಿಯಿಂದ “ಆರೋಗ್ಯ ತಪಾಸಣಾ ಶಿಬಿರ”

Suddi Udaya

ಆ.5: ಪಡಂಗಡಿ ಪಾರ್ಶ್ವಪದ್ಮ ಹಾಗೂ ಮಹಿಳಾ ಮಣಿಗಳ ಆಶ್ರಯದಲ್ಲಿ ‘ಕೆಸರ್ ಡೊಂಜಿ ಗೊಬ್ಬು’

Suddi Udaya

ಕಲ್ಮಂಜ ಅಕ್ಷಯ ನಗರ ಗೆಳೆಯರ ಬಳಗದ ರಜತ ಸಂಭ್ರಮಾಚರಣೆ

Suddi Udaya

ರೆಖ್ಯ ಅಂಗನವಾಡಿಯಲ್ಲಿ ಹಾಳಾದ ಮೊಟ್ಟೆ ವಿತರಣೆ: ಗ್ರಾಮಸ್ಥರ ಅಕ್ರೋಶ

Suddi Udaya
error: Content is protected !!