September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕ

ಉಜಿರೆ: ಭಜಕೆರೆ ಗೊಬ್ಬು-2025 ಸಮಾರೋಪ ಸಮಾರಂಭ

ಉಜಿರೆ: ಭಕ್ತಿಹೆಜ್ಜೆ ಬಳಗ ಬೆಳ್ತಂಗಡಿ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕಿನ ಎಲ್ಲಾ ಭಜನಾ ಮಂಡಳಿಗಳ ಒಗ್ಗೂಡುವಿಕೆಯಲ್ಲಿಡಾ| ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಶರತ್‌ಕೃಷ್ಣ ಪಡುವೆಟ್ನಾಯರವರ ಮಾರ್ಗದರ್ಶನದಲ್ಲಿ ಭಜಕೆರೆ ಗೊಬ್ಬು-2025 ಭಜಕ ಸಮ್ಮಿಲನ & ಪ್ರತಿಭಾ ಪುರಸ್ಕಾರ ಇದರ ಸಮಾರೋಪ ಸಮಾರಂಭವು ಜೂ.8ರಂದು ಉಜಿರೆಯ ಶಾರದಾ ಮಂಟಪದಲ್ಲಿ ನಡೆಯಿತು.

ಮುಖ್ಯ ಅತಿಥಿ ಉಜಿರೆ ಗ್ರಾ.ಪಂ. ಅಧ್ಯಕ್ಷೆ ಉಷಾಕಿರಣ್ ಕಾರಂತ್ ಮಾತನಾಡಿ, ಸನಾತನ ಹಿಂದೂ ಧರ್ಮದಲ್ಲಿ ಭಜನೆ ಅತ್ಯಂತ ಮಹತ್ವಪೂರ್ಣ ಸ್ಥಾನವನ್ನು ವಹಿಸಿಕೊಂಡಿದೆ. ಭಜನೆ ದೇವರ ಮಹಿಮೆಗಳನ್ನು ಕೊಂಡಾಡುವ ಏಕೈಕ ಸಾಧನವಾಗಿದೆ ಎಂದರು.

ಬೆಳ್ತಂಗಡಿ ಭಕ್ತಿ ಹೆಜ್ಜೆ ಬಳಗದ ಸಂಘಟಕ ವಿ.ಹರೀಶ್ ನೆರಿಯ ಅಧ್ಯಕ್ಷತೆಯನ್ನು ವಹಿಸಿದ್ದರು.

ವೇದಿಕೆಯಲ್ಲಿ ಹಿರಿಯ ಭಜಕ ಪುರುಷೋತ್ತಮ ಕೊಕ್ಕಡ,ಛತ್ರಪತಿ ಶಿವಾಜಿ ಭಜನಾ ಮಂಡಳಿ ಅಧ್ಯಕ್ಷ ನಾರಾಯಣ,ಭಕ್ತಿ ಹೆಜ್ಜೆ ಬಳಗದ ಸಂಘಟಕ ಮಂಜುನಾಥ್ ಶೆಟ್ಟಿ ನಿಡಿಗಲ್,ಛತ್ರಪತಿ ಶಿವಾಜಿ ಭಜನಾ ಮಂಡಳಿ ಸದಸ್ಯ ಸುಧಾಕರ್, ದೈಹಿಕ ಶಿಕ್ಷಕರಾದ ಮೋಹನ್, ಶಶಿಧರ್ ಬೆಳಾಲು ಉಪಸ್ಥಿತರಿದ್ದರು.

ಸರಸ್ವತಿ ಭಜನಾ ಮಂಡಳಿ ವಿವೇಕಾನಂದ ನಗರದ ಅಧ್ಯಕ್ಷ ಜನಾರ್ಧನ ಸ್ವಾಗತಿಸಿದರು. ಸುರಕ್ಷಾ ಆಚಾರ್ಯ ಕನ್ನಾಜೆ ನಿರೂಪಿಸಿದರು.

Related posts

ಶಿಬರಾಜೆ ಪಾದೆ ಕುಶಾನಿ ರವರ ಹುಟ್ಟುಹಬ್ಬದ ಪ್ರಯುಕ್ತ ಅಂಗನವಾಡಿಗೆ ಚಾಪೆ ಕೊಡುಗೆ

Suddi Udaya

ಬಂದಾರು ಗ್ರಾಮದ ಖಂಡಿಗ ನಿವಾಸಿ ವಾಸಪ್ಪ ಗೌಡರ ಶಸ್ತ್ರಚಿಕಿತ್ಸೆಗೆ ನೆರವಾಗಿ

Suddi Udaya

ಬೆಳ್ತಂಗಡಿ: ತಾಳೆ ಬೆಳೆಯ ಬಗ್ಗೆ ಮಾಹಿತಿ

Suddi Udaya

ಬೆಳ್ತಂಗಡಿ ರಾಜಕೇಸರಿ ಸಂಘಟನೆ ಸಂಸ್ಥಾಪಕ ದೀಪಕ್ ಜಿ ರವರ ಹುಟ್ಟುಹಬ್ಬದ ಪ್ರಯುಕ್ತ ಸೇವಾ ಕಾರ್ಯ

Suddi Udaya

ಅರಸಿನಮಕ್ಕಿ ಶಿವಳ್ಳಿ ಸಮಾಜದ ಸಭೆ

Suddi Udaya

ಕಕ್ಯಪದವು: ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪದವಿ ವಿಭಾಗದ ಬಿ.ಕಾಂ ವಿದ್ಯಾರ್ಥಿಗಳಿಗೆ “ಸಂದರ್ಶನ ಕೌಶಲ್ಯಗಳ ” ಕುರಿತು ಮಾಹಿತಿ ಕಾರ್ಯಾಗಾರ

Suddi Udaya
error: Content is protected !!