ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿ ಹೊಂದಿರುವ ಕೆಲವು ಅರ್ಹ ಕುಟುಂಬಗಳಿಗೆ ಉಚಿತವಾಗಿ ಕೃಷಿಗೆ ಸಂಬಂಧಪಟ್ಟ ಉಪಕರಣಗಳನ್ನು ವನ್ಯಜೀವಿ ಸಂರಕ್ಷಣಾ (wcs) ವತಿಯಿಂದ ವಿತರಿಸಲಾಯಿತು.
ಸಂಸ್ಥೆಯ ಕ್ಷೇತ್ರಾಧಿಕಾರಿಯಾದ ಕೆ.ರಾಮಚಂದ್ರ ಭಟ್ ಸಂಸ್ಥೆಯ ಯೋಜನೆಗಳ ಮಾಹಿತಿ ನೀಡಿ ಉಪಕರಣಗಳನ್ನು ವಿತರಿಸಿದರು. ಪ್ರಗತಿಪರ ಕೃಷಿಕರಾದ ಹಾಗೂ ವೇಣೂರು ಲಯನ್ಸ್ ಕ್ಲಬ್ ನ ಅಧ್ಯಕ್ಷ ಲ| ಹರೀಶ್ ಕುಮಾರ್ ತೋಟಗಾರಿಕ ಬೆಳೆಗಳ ಬಗ್ಗೆ ಮಾಹಿತಿ ನೀಡಿದರು. ಸೀತಾ ಶ್ರೀರಾಮ ಡ್ರೈವಿಂಗ್ ಸ್ಕೂಲಿನ ಮಾಲೀಕರು ಹಾಗೂ ಲಯನ್ಸ್ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷ ನಿರಂಜನ್ ವೇಣೂರು ವಾಹನ ಚಾಲನ ತರಬೇತಿ ನೀಡಿದರು. ಕೆ.ರಾಮಚಂದ್ರ ಭಟ್ ಸ್ವಾಗತಿಸಿ ಪ್ರಮಿಳಾ ಆರ್ ಭಟ್ ವಂದಿಸಿದರು. ಕಾರ್ಯಕ್ರಮ ಶ್ರೀ ದೇವಿ ಕೃಪಾ ಕುತ್ಲೂರಿನ ಕುಕ್ಕುಜೆ ಯಲ್ಲಿ ನಡೆಯಿತು.