April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನ ನವೀಕೃತ ಕಟ್ಟಡದ ಉದ್ಘಾಟನಾ ಸಮಾರಂಭ

ಉಜಿರೆ: ಎಲ್ಲಾ ಬಿ.ಎಡ್. ಶಿಕ್ಷಣ ಸಂಸ್ಥೆಗಳಿಗೆ ಎಸ್.ಡಿ.ಎಂ. ಬಿ.ಎಡ್. ಕಾಲೇಜು ಮಾದರಿಯಾಗಬೇಕು. ಧರ್ಮಸ್ಥಳದ ವಿವಿಧ ವಿದ್ಯಾಸಂಸ್ಥೆಗಳ ಸಾಧನೆ ಮತ್ತು ಪ್ರಗತಿಯ ಪಥವನ್ನು ಹಾಗೂ ಮುಂದಿನ ದೂರದೃಷ್ಟಿಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ ಹರ್ಷೇಂದ್ರ ಕುಮಾರ್ ತೆರೆದಿಟ್ಟರು.


ಬಿ.ಎಡ್. ಕಾಲೇಜಿನ ನವೀಕೃತ ಕಟ್ಟಡದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಇವರು ಉತ್ತಮ ಜ್ಞಾನ ಗಳಿಕೆಯದಾಗ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಲು ಸಾಧ್ಯವಿದೆ ಎಂದರು.


ಬೇರೆ ಬೇರೆ ವೃತ್ತಿಗಳನ್ನು ಪಡೆಯಬೇಕಾದರೆ ಶಿಕ್ಷಕರ ಪ್ರಾಮುಖ್ಯತೆ ಅತ್ಯಂತ ಪ್ರಮುಖವಾಗುವುದು ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಮಾಹಿತಿ ತಂತ್ರಜ್ಞಾನ ಹಾಗೂ ವಸತಿ ನಿಲಯಗಳ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರಣ್ ವರ್ಮ ರವರು ತಿಳಿಸಿದರು.


ಪೂಜ್ಯ ಖಾವಂದರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಕಾರ್ಯದರ್ಶಿಗಳಾದ ಡಿ ಹರ್ಷೇಂದ್ರ ಕುಮಾರ್ ಇವರೀರ್ವರು ಯಾವುದೇ ಸಂಸ್ಥೆಯ ಅಥವಾ ಯಾವುದೇ ಕಾರ್ಯಕ್ರಮದ ನೈಜ ರೂಪುರೇಷೆಯನ್ನು ಪ್ರಾಯೋಗಿಕವಾಗಿ ಕ್ಲಪ್ತ ಸಮಯದಲ್ಲಿ ಸಂಘಟಿಸಲು ನೀಡುವ ಮಾರ್ಗದರ್ಶನವನ್ನು ಸ್ಮರಿಸಿದರು. ಪ್ರಶಿಕ್ಷಣಾರ್ಥಿಗಳು ಭಾವೀ ಜೀವನದಲ್ಲಿ ಮತ್ತು ಸಮಾಜದಲ್ಲಿ ಸರ್ವತೋಮುಖವಾದ ದೃಷ್ಟಿಕೋನವನ್ನು ಇರಿಸಿಕೊಂಡು ಉತ್ತಮ ಶಿಕ್ಷಕರಾಗಬೇಕು ಎಂಬುದಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಸತೀಶ್‌ಚಂದ್ರ ಎಸ್ ಇವರು ಶುಭ ಹಾರೈಸಿದರು.


ಪ್ರಾಸ್ತಾವಿಕ ನುಡಿಗಳನ್ನಾಡಿದ ಶ್ರೀ ಧರ್ಮಸ್ಥಳ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸಂತೋಷ್ ಸಲ್ಡಾನ ಮಾತನಾಡುತ್ತಾ ಬಿ.ಎಡ್. ಶಿಕ್ಷಣ ಸಂಸ್ಥೆ ಹಾದು ಬಂದ ದಾರಿ ಮತ್ತು ಸಾಧಿಸಿದ ಸಾಧನೆಗಳನ್ನು ಸ್ವಾಗತಿಸುವ ಸಂದರ್ಭದಲ್ಲಿ ಪ್ರಸ್ತಾವಿಸಿದರು.
ನವೀಕೃತ ಕಾಲೇಜಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳ ಪ್ರಾಂಶುಪಾಲರು, ವಿಭಾಗ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು ಮತ್ತು ಎಸ್.ಡಿ.ಎಂ. ಬಿ.ಎಡ್. ಕಾಲೇಜಿನ ಉಪನ್ಯಾಸಕರು, ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಾದ ಸುಶ್ಮಿತಾ ಪ್ರಾರ್ಥಿಸಿ, ವಿದ್ಯಾರ್ಥಿ ನಾಯಕ ಕೀರ್ತನ್ ಕುಮಾರ್ ನೆರೆದಿರುವ ಸರ್ವರನ್ನು ವಂದಿಸಿ, ತುಳಸಿ ಇವರು ಕಾರ್ಯಕ್ರಮ ನಿರ್ವಹಿಸಿದರು.

Related posts

ಅಪಘಾತದಲ್ಲಿ ಗಂಭೀರ ಗಾಯಗೊಂಡ ಉಜಿರೆಯ ಸುರೇಂದ್ರ ರವರ ಚಿಕಿತ್ಸೆಗೆ ನೆರವಾಗಿ

Suddi Udaya

ನಡ -ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಲಾಯಿಲ ಸೋಮವತಿ ಸೇತುವೆಯಲ್ಲಿ ಸಿಲುಕಿಕೊಂಡ ಮರಗಳ ತೆರವು ಕಾರ್ಯಾಚರಣೆ

Suddi Udaya

ಜು.2: ಭಾರತೀಯ ಜನತಾ ಪಾರ್ಟಿ ದ.ಕ. ಜಿಲ್ಲೆ ಹಾಗೂ ಬೆಳ್ತಂಗಡಿ ಮಂಡಲ ರೈತ ಮೋರ್ಚಾ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಬೃಹತ್ ಪ್ರತಿಭಟನೆ ನಡೆಸುವ ಬಗ್ಗೆ ವಿಶೇಷ ಬೈಠಕ್ ಸಭೆ

Suddi Udaya

ಬೆದ್ರಬೆಟ್ಟು ಅರ್ರಿಫಾಯ್ಯಾ ಮಸೀದಿಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ

Suddi Udaya

ಅಕ್ಷರ ಕಲಿಸುವ ವಿದ್ಯಾ ದೇಗುಲಕ್ಕೆ ಖದೀಮರ ಕನ್ನ, ಕಣಿಯೂರಿನ ಪಿಲಿಗೂಡು ಶಾಲೆ ಬೀಗ ಒಡೆದು‌ ಕಳ್ಳತನ:

Suddi Udaya

ಆ. 12: ಪ್ರಾಥಮಿಕ ಶಾಲಾ ಶಿಕ್ಷಕರಿಂದ ಬೆಂಗಳೂರು ಚಲೋ: ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಹಸೀಲ್ದಾರ್ ಮತ್ತು ಶಾಸಕರು, ವಿಧಾನಪರಿಷತ್ ಸದಸ್ಯರ ಮೂಲಕ ಸರಕಾರಕ್ಕೆ ಮನವಿ

Suddi Udaya
error: Content is protected !!