34.2 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಉಜಿರೆ ಎಸ್.ಡಿ.ಎಮ್ ಪ್ರಕೃತಿ ಚಿಕಿತ್ಸಾ ಹಾಗೂ ಯೋಗ ವಿಜ್ಞಾನ ಕಾಲೇಜು: ಬಿಎನ್‌ವೈಎಸ್ ವಿದ್ಯಾರ್ಥಿಗಳ ಮತ್ತು ಪಿಜಿ ವಿದ್ಯಾರ್ಥಿಗಳ ಶಿಷ್ಯೋಪನಯನ

ಉಜಿರೆ: ಎಸ್.ಡಿ.ಎಮ್ ಪ್ರಕೃತಿ ಚಿಕಿತ್ಸಾ ಹಾಗೂ ಯೋಗ ವಿಜ್ಞಾನ ಕಾಲೇಜಿನ ಶಿಷ್ಯೋಪನಯನ (36ನೇ ಬ್ಯಾಚ್ ಬಿಎನ್‌ವೈಎಸ್ ವಿದ್ಯಾರ್ಥಿಗಳು ಮತ್ತು 15ನೇ ಬ್ಯಾಚ್ ಪಿಜಿ ವಿದ್ಯಾರ್ಥಿಗಳು) ಕಾರ್ಯಕ್ರಮವು ಕಾಲೇಜಿನ ಮಾತೃಶ್ರೀ ಡಿ.ರತ್ನಮ್ಮ ಹೆಗ್ಗಡೆ ಸಭಾಂಗಣದಲ್ಲಿ ನ.22 ರಂದು ನಡೆಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಜೌಷಧಿ ರಹಿತವಾದ ಪ್ರಕೃತಿ ಚಿಕಿತ್ಸೆ ಇಂದು ಹೆಚ್ಚು ಪ್ರಸಿದ್ಧಿ ಪಡೆದಿದೆ. ನಿಮ್ಮಲ್ಲಿ ಕಲಿತ ವಿದ್ಯಾಥಿ೯ಗಳು ದೇಶದ ಎಲ್ಲ ಕಡೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.


ಉತ್ತರಾಖಂಡದ ಶತಾಯುಷಿ ಹಿಮಾಲಯದ ಸಂತ ಶ್ರೀ ಸದಾನಂದ ಗಿರಿ ಮಹಾರಾಜ್ ರವರು ಶಿಷ್ಯೋಪನಯನ ಭಾಷಣ ಮಾಡಿದರು. ಅಧ್ಯಕ್ಷತೆಯನ್ನು ಎಸ್.ಡಿ.ಎಮ್ ಸೊಸೈಟಿ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ವಹಿಸಿದ್ದರು . ಎಸ್‌ಡಿಎಂಸಿಎನ್‌ವೈಎಸ್ ಉಪ ಪ್ರಾಂಶುಪಾಲರು ಡಾ. ಸುಜಾತಾ ಸಂಕಲ್ಪ ಕಾರ್ಯಕ್ರಮ ನೆರವೇರಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಧ್ವನಂತರಿ ಹೋಮ ನಡೆಯಿತು.

ಎಸ್‌ಡಿಎಂಸಿಎನ್‌ವೈಎಸ್ ಕಾಲೇಜು ಪ್ರಾಂಶುಪಾಲರು ಡಾ. ಪ್ರಶಾಂತ್ ಶೆಟ್ಟಿ, ಸ್ವಾಗತಿಸಿದರು. ಸಂಸ್ಕೃತಿ ಎಂ ಜೈನ್ ನಿರೂಪಿಸಿ, ಎಸ್‌ಡಿಎಂಸಿಎನ್‌ವೈಎಸ್ ಪ್ರೊ. & ಡೀನ್ ಡಾ. ಗೀತಾ ಬಿ ಶೆಟ್ಟಿ, ಧನ್ಯವಾದವಿತ್ತರು.

Related posts

ದ್ವಿತೀಯ ಪಿಯುಸಿ ಫಲಿತಾಂಶ: ಸರಕಾರಿ ಪದವಿಪೂರ್ವ ಕಾಲೇಜಿಗೆ ಶೇ.97.32% ಫಲಿತಾಂಶ

Suddi Udaya

ಉಡುಪಿ:ಐದನೇ ರಾಷ್ಟ್ರೀಯ ಮಟ್ಟದ ಆಹ್ವಾನಿತ ಕರಾಟೆ ಚಾಂಪಿಯನ್ ಶಿಪ್

Suddi Udaya

ಮದ್ದಡ್ಕ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಕ್ರೀಡಾಕೂಟಕ್ಕೆ ಚಾಲನೆ

Suddi Udaya

ಬೆದ್ರಬೆಟ್ಟು ಮರಿಯಾoಬಿಕ ಆಂ.ಮಾ. ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ ಸ್ಪಾರ್ಕ್ -2024

Suddi Udaya

ಮೊಬೈಲ್ ಹಿಂದಿರುಗಿಸಿಕೊಟ್ಟು ಮಾನವೀಯತೆ ಮೆರೆದ ಬೆಳ್ತಂಗಡಿ ಸಂತೆಕಟ್ಟೆ ಗಣೇಶ್ ಮೆಡಿಕಲ್ ಮಾಲೀಕ

Suddi Udaya

ಶ್ರದ್ಧಾಕೇಂದ್ರಗಳಲ್ಲಿ “ದೇವವೃಕ್ಷ” ನೆಡುವ ಅಭಿಯಾನಕ್ಕೆ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಂದ ಚಾಲನೆ

Suddi Udaya
error: Content is protected !!